ರವಿಚಂದ್ರನ್‌ ಚಿತ್ರಗಳಿಗೆ ತೆರೆ ಮರೆಯಲ್ಲಿ ಧ್ವನಿಯಾಗಿದ್ದ ನಟ, ಕೊನೆಯವರೆಗೂ ಸಿಗಲೇ ಇಲ್ಲ ಕೆಲಸಕ್ಕೆ ತಕ್ಕ ಪ್ರತಿಫಲ..!

Srinivas Prabhu: ಸ್ಯಾಂಡಲ್‌ವುಡ್‌ನ ಕ್ರೇಜಿಸ್ಟಾರ್ ರವಿಚಂದ್ರನ್, ಆಗಿನ ಸಮಯದಲ್ಲಿ ಕನ್ನಡ ಚಿತ್ರರಂಗದಲ್ಲಿ ಅನೇಕ ಕನ್ನಡ ಹಿಟ್ ಸಿನಿಮಾಗಳನ್ನು ನೀಡಿದವರು. ಇಂದಿಗೂ, ಈ ಸಿನಿಮಾಗಳು ಕಿರುತೆರೆಯಲ್ಲಿ ಪ್ರಸಾರವಾದಾಗ, ಅವುಗಳನ್ನು ನೋಡುವ ಒಂದು ವಿಶೇಷ ಪ್ರೇಕ್ಷಕವರ್ಗವಿದೆ. ರವಿಚಂದ್ರನ್ ಅವರ ಆರಂಭದ ಸಿನಿಮಾ ಯಾತ್ರೆಯಲ್ಲಿ, ಅವರ ಧ್ವನಿಯಾಗಿದ್ದು ನಟ ಹಾಗೂ ಕಂಠದಾನ ಕಲಾವಿದ ಶ್ರೀನಿವಾಸ್ ಪ್ರಭು.  

Written by - Zee Kannada News Desk | Last Updated : Jun 27, 2024, 10:11 AM IST
  • ಸ್ಯಾಂಡಲ್‌ವುಡ್‌ನ ಕ್ರೇಜಿಸ್ಟಾರ್ ರವಿಚಂದ್ರನ್, ಆಗಿನ ಸಮಯದಲ್ಲಿ ಕನ್ನಡ ಚಿತ್ರರಂಗದಲ್ಲಿ ಅನೇಕ ಕನ್ನಡ ಹಿಟ್ ಸಿನಿಮಾಗಳನ್ನು ನೀಡಿದವರು.
  • ರವಿಚಂದ್ರನ್ ಅವರ 20 ಕ್ಕೂ ಹೆಚ್ಚು ಕ್ಲಾಸಿಕ್ ಹಿಟ್ ಸಿನಿಮಾಗಳಿಗೆ ಶ್ರೀನಿವಾಸ್ ಪ್ರಭು ಧ್ವನಿಯಾಗಿದ್ದಾರೆ.
  • ಸ್ಟೇಜ್‌ ಮೇಲೆ ಎಲ್ಲರನ್ನೂ ಕರೆಸಿ ಗೌರವಿಸಲಾಯಿತು. ಅದರೆ ಶ್ರೀನಿವಾಸ ಪ್ರಭು ಅವರನ್ನು ಕಡೆಗಣಿಸಿದ್ರು.
ರವಿಚಂದ್ರನ್‌ ಚಿತ್ರಗಳಿಗೆ ತೆರೆ ಮರೆಯಲ್ಲಿ ಧ್ವನಿಯಾಗಿದ್ದ ನಟ, ಕೊನೆಯವರೆಗೂ ಸಿಗಲೇ ಇಲ್ಲ ಕೆಲಸಕ್ಕೆ ತಕ್ಕ ಪ್ರತಿಫಲ..! title=

Srinivas Prabhu: ಸ್ಯಾಂಡಲ್‌ವುಡ್‌ನ ಕ್ರೇಜಿಸ್ಟಾರ್ ರವಿಚಂದ್ರನ್, ಆಗಿನ ಸಮಯದಲ್ಲಿ ಕನ್ನಡ ಚಿತ್ರರಂಗದಲ್ಲಿ ಅನೇಕ ಕನ್ನಡ ಹಿಟ್ ಸಿನಿಮಾಗಳನ್ನು ನೀಡಿದವರು. ಇಂದಿಗೂ, ಈ ಸಿನಿಮಾಗಳು ಕಿರುತೆರೆಯಲ್ಲಿ ಪ್ರಸಾರವಾದಾಗ, ಅವುಗಳನ್ನು ನೋಡುವ ಒಂದು ವಿಶೇಷ ಪ್ರೇಕ್ಷಕವರ್ಗವಿದೆ. ರವಿಚಂದ್ರನ್ ಅವರ ಆರಂಭದ ಸಿನಿಮಾ ಯಾತ್ರೆಯಲ್ಲಿ, ಅವರ ಧ್ವನಿಯಾಗಿದ್ದು ನಟ ಹಾಗೂ ಕಂಠದಾನ ಕಲಾವಿದ ಶ್ರೀನಿವಾಸ್ ಪ್ರಭು.

ಇಂದಿಗೂ ಬಹುಮಂದಿಗೆ ಗೊತ್ತಿಲ್ಲದೆ ಇರಬಹುದು, ರವಿಚಂದ್ರನ್ ಅವರ 20 ಕ್ಕೂ ಹೆಚ್ಚು ಕ್ಲಾಸಿಕ್ ಹಿಟ್ ಸಿನಿಮಾಗಳಿಗೆ ಶ್ರೀನಿವಾಸ್ ಪ್ರಭು ಧ್ವನಿಯಾಗಿದ್ದಾರೆ. 'ಸಾಹಸ ಸಿಂಹ' ಚಿತ್ರದ ಮೂಲಕ ಆರಂಭವಾದ ಕಂಠದಾನದ ಪಯಣ, 'ಅಭಿಮನ್ಯು' ಚಿತ್ರದವರೆಗೆ ಮುಂದುವರೆದಿತ್ತು. ಆದರೆ, ಪ್ರಭು ಅವರ ಈ ಕೆಲಸಕ್ಕೆ ತಕ್ಕ ಗೌರವ ಮತ್ತು ಸಂಭಾವನೆ ಮಾತ್ರ ಅವರಿಗೆ ಸಿಗಲಿಲ್ಲ. ಈ ಕುರಿತು ಸ್ವತಹಃ ಶ್ರೀನಿವಾಸ ಪ್ರಭು ಅವರೇ ಒಂದು ಯೂಟ್ಯೂಬ್‌ ಚಾನೆಲ್‌ನಲ್ಲಿ ಹೇಳಿಕೊಂಡಿದ್ದಾರೆ.

ಆ ಸಮಯದಲ್ಲಿ, ರವಿಚಂದ್ರನ್ ಅವರ ನಟನೆಯ ಕೆಲವು ಚಿತ್ರಗಳು ರಿಲೀಸ್‌ ಆಗಿದ್ದವು, ಆದರೆ ಧ್ವನಿ ಸಂಕಲನದಿಂದ ಅವರು ತೃಪ್ತರಾಗಿರಲಿಲ್ಲ. ಒಂದು ದಿನ, ಪ್ರಭು ಅವರನ್ನು ಸ್ಟೂಡಿಯೋಗೆ ಕರೆಸಿ ಅವರ ಧ್ವನಿಯನ್ನು ರೆಕಾರ್ಡ್ ಮಾಡಿಸಿದರು, ಈ ಧ್ವನಿಯನ್ನು ಕೇಳಿದ್ದ ವೀರಸ್ವಾಮಿ ಅವರಿಗೆ ಅದು ಇಷ್ಟವಾಗಿತ್ತು. ಒಂದೂವರೆ ಗಂಟೆಗಳಲ್ಲಿ ಎಲ್ಲವೂ ಫೈನಲ್ ಆಯಿತು. ರವಿಚಂದ್ರನ್‌ ಜೊತೆ ಚರ್ಚೆ ಮಾಡಿ ಅವರ ಸಿನಿಮಾಗಳಿಗೆ ಧ್ವನಿ ಕೊಡುವುದಾಗಿ ಶ್ರೀನಿವಾಸ್‌ ಪ್ರಭು ಒಪ್ಪಿಕೊಂಡು ಬಂದಿದ್ರು.

ಇದನ್ನೂ ಓದಿ: ಯಶ್‌ ʻಟಾಕ್ಸಿಕ್‌ʼ ಸಿನಿಮಾಗೆ ಬಾಲಿವುಡ್‌ ಕೀನ್‌ ಎಂಟ್ರಿ, ಮುಂಬೈನಿಂದ ಸಿದಾ ಬಂದೇ ಬಿಟ್ರು ʻಬದ್ಲಾಪುರ್‌ʼ ಬೆಡಗಿ..!

'ಪ್ರೇಮಲೋಕ' ಹಿಟ್ ಆದ ನಂತರ, ಒಂದು ದೊಡ್ಡ ಕಾರ್ಯಕ್ರಮವನ್ನು ಸಿನಿಮಾ ತಂಡದವರು ಆಯೋಜಿಸಿದರು, ಆ ಚಿತ್ರ ಹಿಟ್‌ ಆಗಲು ಕಾರಣವಾದ ಎಲ್ಲರಿಗೂ ಸರಣಿಕೆಗಳನ್ನು ನೀಡಲಾಯಿತು. ಸ್ಟೇಜ್‌ ಮೇಲೆ ಎಲ್ಲರನ್ನೂ ಕರೆಸಿ ಗೌರವಿಸಲಾಯಿತು. ಅದರೆ ಶ್ರೀನಿವಾಸ ಪ್ರಭು ಅವರನ್ನು ಕಡೆಗಣಿಸಿದ್ರು. ಇದನ್ನು ಕಂಡ ಶ್ಶ್ರೀನವಾಸ ಪ್ರಭು
ತಮಗೂ ಸ್ಮರಣಿಕೆ ನೋಡುವಂತೆ ಕೇಳಿಕೊಂಡಿದ್ದರು. ಆದರೆ ರವಿ ಚಂದ್ರನ್‌ ಪ್ರಭು ಅವರ ಮಾತನ್ನು ಕಡೆಗಣಿಸಿದ್ದರು.

ಇವರಬ್ಬರ ಚರ್ಚೆ ಪತ್ರಕರ್ತರ ಕಿವಿಗೂ ಕೂಡ ಬಿದ್ದಿತ್ತು. ನಂತರ ಪತ್ರಿಕೆಗಳಲ್ಲಿ "ಯಾರೂ ಕ್ಯಾರೆ ಎನ್ನದ ಟಿವಿ ಪ್ರಭು ಕಂಠ" ಎಂಬ ಲೇಖನಗಳು ಪ್ರಕಟವಾದವು. ಇದೇ ಕಾರಣದಿಂದ ಶ್ರೀನಿವಾಸ್ ಪ್ರಭು ಮತ್ತು ರವಿಚಂದ್ರನ್ ನಡುವೆ ಮನಸ್ತಾಪ ಉಂಟಾಯಿತು. ನಂತರ, ರವಿಚಂದ್ರನ್ ಸ್ವಲ್ಪ ಹೆಚ್ಚು ಸಂಭಾವನೆ ನೀಡಿದರು, ಆದರೆ ಪ್ರಭು ಅವರು ಅದರಂದ ತೃಪ್ತರಾಗಿಲ್ಲ. ಹೀಗಾಗಿ, ರವಿಚಂದ್ರನ್ ತಮ್ಮ ಪಾತ್ರಗಳಿಗೆ ತಾವು ಸ್ವತಃ ಧ್ವನಿ ನೀಡಲು ತೀರ್ಮಾನಿಸಿದರು, 'ರಾಮಾಚಾರಿ' ಚಿತ್ರದ ನಂತರ, ರವಿಚಂದ್ರನ್ ತಮ್ಮ ಪಾತ್ರಗಳಿಗೆ ತಾವೇ ಧ್ವನಿ ನೀಡಲು ಆರಂಭಿಸಿದರು, ಎಂದು ಶ್ರೀನಿವಾಸ್ ಪ್ರಭು ಹಳೆಯ ದಿನಗಳನ್ನು ನೆನಪಿಸಿಕೊಂಡರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News