Oscar For The Kashmir Files : ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಖುಷಿ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ದೇಶಾದ್ಯಂತ ವ್ಯಾಪಕ ಮೆಚ್ಚುಗೆ ಪಡೆದ ಸಿನಿಮಾ ʼದಿ ಕಾಶ್ಮೀರ್ ಫೈಲ್ಸ್ʼ ಆಸ್ಕರ್ 2023ರ ರೇಸ್‌ಗೆ ಶಾರ್ಟ್‌ಲಿಸ್ಟ್ ಆಗಿರುವ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಅಕಾಡೆಮಿಯ ಮೊದಲ ಪಟ್ಟಿಯಲ್ಲಿ 5 ಭಾರತದ ಚಲನಚಿತ್ರಗಳಲ್ಲಿ ಈ ಸಿನಿಮಾ ಒಂದಾಗಿದೆ. ನಾನು ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಹೇಳಿದ್ದಾರೆ.
ಅಲ್ಲದೆ, ಪಲ್ಲವಿಜೋಶಿ, ಮಿಥುನ್ ಚಕ್ರವರ್ತಿ, ದರ್ಶನ್ ಕುಮಾರ್, ಅನುಪಮ್ ಖೇರ್ ಅವರು ಅತ್ಯುತ್ತಮ ನಟರ ವಿಭಾಗಗಳಿಗೆ ಆಯ್ಕೆಯಾಗಿದ್ದಾಗಿ ತಿಳಿಸಿದ್ದಾರೆ. ಅಲ್ಲದೆ, ಇದು ಕೇವಲ ಆರಂಭ ಎಂದು ಹೇಳಿದ್ದಾರೆ. ಕಾಶ್ಮೀರ ಫೈಲ್ಸ್ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳನ್ನು ಮುರಿದು 300 ಕೋಟಿ ರೂ. ಗಡಿ ದಾಟಿದೆ. ಮೊದಲ ಸಾಂಕ್ರಾಮಿಕ ನಂತರ ಬಿಡುಗಡೆಯಾದ ಹಿಂದಿ ಚಲನಚಿತ್ರ ದಿ ಕಾಶ್ಮೀರ್ ಫೈಲ್ಸ್ ಉತ್ತಮ ಪ್ರದರ್ಶನ ಕಂಡಿತ್ತು.
ಇದನ್ನೂ ಓದಿ: Pathaan Trailer: ಪಠಾಣ್ ಟ್ರೇಲರ್‌ನಲ್ಲಿ ದೀಪಿಕಾ ಪಡುಕೋಣೆಯ 'ಕೇಸರಿ ಬಿಕಿನಿ' ಮಾಯ!!
BIG ANNOUNCEMENT: #TheKashmirFiles has been shortlisted for #Oscars2023 in the first list of @TheAcademy. It’s one of the 5 films from India. I wish all of them very best. A great year for Indian cinema. 🙏🙏🙏
— Vivek Ranjan Agnihotri (@vivekagnihotri) January 10, 2023
ಜೀ ಸ್ಟುಡಿಯೋಸ್ ಮತ್ತು ತೇಜ್ ನಾರಾಯಣ್ ಅಗರ್ವಾಲ್, ಅಭಿಷೇಕ್ ಅಗರ್ವಾಲ್, ಪಲ್ಲವಿ ಜೋಷಿ ಮತ್ತು ವಿವೇಕ್ ರಂಜನ್ ಅಗ್ನಿಹೋತ್ರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ವಿವೇಕ್ ಅಗ್ನಿಹೋತ್ರಿ ಬರೆದು ನಿರ್ದೇಶಿಸಿರುವ ʼದಿ ಕಾಶ್ಮೀರ್ ಫೈಲ್ಸ್ʼ ಮಾರ್ಚ್ 11, 2022 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಈ ಸಿನಿಮಾದಲ್ಲಿ ಮಿಥುನ್ ಚಕ್ರವರ್ತಿ, ಅನುಪಮ್ ಖೇರ್, ದರ್ಶನ್ ಕುಮಾರ್, ಪಲ್ಲವಿ ಜೋಶಿ ಮತ್ತು ಚಿನ್ಮಯ್ ಮಾಂಡ್ಲೇಕರ್ ಸೇರಿದಂತೆ ಹಿರಿಯ, ಅನುಭವಿ ಕಲಾವಿದರು ಈ ಸಿನಿಮಾದಲ್ಲಿದ್ದಾರೆ.
ಕಾಶ್ಮೀರಿ ಪಂಡಿತ್ ಸಮುದಾಯದ ಮೇಲೆ ನಡೆದ ನರಮೇಧದ ಕಥೆಯೇ ದಿ ಕಾಶ್ಮೀರ ಫೈಲ್ಸ್. ಇದು ಕಾಶ್ಮೀರಿ ಪಂಡಿತರ ನೋವು, ಸಂಕಟ, ಹೋರಾಟ ಮತ್ತು ಆಘಾತದ ಹೃದಯ ವಿದ್ರಾವಕ ನಿರೂಪಣೆಯಾಗಿದೆ. ಪ್ರಜಾಪ್ರಭುತ್ವ, ಧರ್ಮ, ರಾಜಕೀಯ ಮತ್ತು ಮಾನವೀಯತೆಯ ಬಗ್ಗೆ ಕಣ್ಣು ತೆರೆಸುವ ಸತ್ಯ ಸಂಗತಿಯನ್ನು ಈ ಸಿನಿಮಾ ಒಳಗೊಂಡಿದೆ. ಬಿಡುಗಡೆಯಾದ ದಿನದಿಂದಲೇ ಈ ಸಿನಿಮಾಗೆ ಪರ ಹಾಗೂ ವಿರೋಧ ವ್ಯಕ್ತವಾಗಿತ್ತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.