ಮರಿ ರೆಬೆಲ್ ಸ್ಟಾರ್ ಘರ್ಜನೆಗೆ ಫಿಕ್ಸ್ ಆಯ್ತಾ ಡೇಟ್? ಬ್ಯಾಡ್ ಮ್ಯಾನರ್ಸ್ ರಿಲೀಸ್ ಯಾವಾಗ ಅಂತಿದ್ದಾರೆ ಫ್ಯಾನ್ಸ್!

Abhishek Ambarish- Bad Manners Movie: ಅಪ್ಪನಂತೆ ಮರಿ ರೆಬೆಲ್ ಸ್ಟಾರ್ ಕೂಡ ಈ ಸಿನಿಮಾದಲ್ಲಿ ಘರ್ಜಿಸಿ ಬೊಬ್ಬಿರಿಡಿದ್ದಾರೆ. ರಿಲೀಸ್ ಆಗಿರೋ ಟೀಸರ್ ಗಳನ್ನ ನೋಡಿದ ಮೇಲೆ ಅಭಿಮಾನಿಗಳು ಯಾವಾಗಪ್ಪ ಸಿನಿಮಾ ರಿಲೀಸ್ ಅಂತ ಕೇಳ್ತಾ ಇದ್ದಾರೆ. ಆದಷ್ಟು ಬೇಗ ರಿಲೀಸ್ ಮಾಡಿ ಅಂತ ರಿಕ್ವೆಸ್ಟ್ ಕೂಡ ಮಾಡುತ್ತಿದ್ದಾರೆ.

Written by - YASHODHA POOJARI | Last Updated : May 31, 2023, 12:04 PM IST
    • ಮರಿ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಷ್ ನಟನೆಯ ಬ್ಯಾಡ್ ಮ್ಯಾನರ್ಸ್
    • ಈ ಸಿನಿಮಾ ಸಖತ್ ಮ್ಯಾಜಿಕ್ ಮಾಡೋ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ.
    • ಜೂನ್ ತಿಂಗಳಲ್ಲೇ ಸಿನಿಮಾ ಬಿಡುಗಡೆ ಮಾಡೋ ಸೂಚನೆ ಕೊಟ್ಟಿದ್ದಾರೆ ನಿರ್ಮಾಪಕ ಸುಧೀರ್.
ಮರಿ ರೆಬೆಲ್ ಸ್ಟಾರ್ ಘರ್ಜನೆಗೆ ಫಿಕ್ಸ್ ಆಯ್ತಾ ಡೇಟ್? ಬ್ಯಾಡ್ ಮ್ಯಾನರ್ಸ್ ರಿಲೀಸ್ ಯಾವಾಗ ಅಂತಿದ್ದಾರೆ ಫ್ಯಾನ್ಸ್! title=
Bad Manners

Abhishek Ambarish- Bad Manners Movie: ಮರಿ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಷ್ ನಟನೆಯ  ಬ್ಯಾಡ್ ಮ್ಯಾನರ್ಸ್ ಸಿನಿಮಾ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗುತ್ತಿದೆ. ಈಗಾಗಲೇ ರಿಲೀಸ್ ಆಗಿರೋ ಟೀಸರ್ ಗಳನ್ನ ನೋಡ್ತಾ ಇದ್ರೆ ಈ ಸಿನಿಮಾ ಸಖತ್ ಮ್ಯಾಜಿಕ್ ಮಾಡೋ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ.

ಇದನ್ನೂ ಓದಿ: Aadhaar Card Update: ಜೂನ್ 14 ರ ಒಳಗೆ ಈ ಕೆಲಸ ಮಾಡಿ ! ಇಲ್ಲವಾದರೆ ಎಲ್ಲದಕ್ಕೂ ನೀಡಬೇಕು ಹೆಚ್ಚುವರಿ ಹಣ

ಈ ಚಿತ್ರದಲ್ಲಿ ಅಭಿಷೇಕ್ ಅಂಬರೀಶ್ ಖಾಕಿ ತೊಟ್ಟು ಡ್ರಗ್ಸ್ ಮಾಫಿಯಾ ವಿರುದ್ಧ ಹೋರಾಡುವ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ. ಅಪ್ಪನಂತೆ ಮರಿ ರೆಬೆಲ್ ಸ್ಟಾರ್ ಕೂಡ ಈ ಸಿನಿಮಾದಲ್ಲಿ ಘರ್ಜಿಸಿ ಬೊಬ್ಬಿರಿಡಿದ್ದಾರೆ. ರಿಲೀಸ್ ಆಗಿರೋ ಟೀಸರ್ ಗಳನ್ನ ನೋಡಿದ ಮೇಲೆ ಅಭಿಮಾನಿಗಳು ಯಾವಾಗಪ್ಪ ಸಿನಿಮಾ ರಿಲೀಸ್ ಅಂತ ಕೇಳ್ತಾ ಇದ್ದಾರೆ. ಆದಷ್ಟು ಬೇಗ ರಿಲೀಸ್ ಮಾಡಿ ಅಂತ ರಿಕ್ವೆಸ್ಟ್ ಕೂಡ ಮಾಡುತ್ತಿದ್ದಾರೆ. ಜೂನ್ ತಿಂಗಳಲ್ಲೇ ಸಿನಿಮಾ ಬಿಡುಗಡೆ ಮಾಡೋ ಸೂಚನೆ ಕೊಟ್ಟಿದ್ದಾರೆ ನಿರ್ಮಾಪಕ ಸುಧೀರ್.

ಬೆಂಗಳೂರು, ಮೈಸೂರು, ಮಂಡ್ಯ, ಶ್ರೀರಂಗಪಟ್ಟಣ ಭಾಗದಲ್ಲಿ ಹೆಚ್ಚಾಗಿ ಚಿತ್ರೀಕರಣ ಮಾಡಲಾಗಿದೆ. ಇನ್ನು ಬ್ಯಾಡ್ ಮ್ಯಾನರ್ಸ್ ಚಿತ್ರದ ಹಾಡುಗಳು ಹಿಟ್ ಆಗಿದ್ದು, ಈ ಚಿತ್ರದ ಟೈಟಲ್ ಟ್ರ್ಯಾಕ್ ಬರೋಬ್ಬರಿ 5 ಮಿಲಿಯನ್ ಜನ‌ ನೋಡಿ ಮೆಚ್ಚಿಕೊಂಡಿದ್ದಾರೆ‌. ಈ ಹಾಡಿನಲ್ಲಿ ಅಭಿಷೇಕ್ ಅಂಬರೀಶ್ ಜೂನಿಯರ್ ರೆಬೆಲ್ ಆಗಿ ಮಿಂಚಿದ್ದಾರೆ.

ಇದನ್ನೂ ಓದಿ: ವೈದ್ಯಕೀಯದ ಸಹಾಯದಿಂದ ನಾವು ಮಕ್ಕಳನ್ನು ಹೊಂದಬಹುದು ಅಂದಿದ್ಯಾಕೆ ನರೇಶ್ ಮತ್ತು ಪವಿತ್ರ ಲೋಕೇಶ್ ?

ನಿರ್ದೇಶಕ ಸೂರಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ 'ಬ್ಯಾಡ್ ಮ್ಯಾನರ್ಸ್'ನಲ್ಲಿ ರಚಿತಾ ರಾಮ್ ಮತ್ತು ಪ್ರಿಯಾಂಕಾ ಕುಮಾರ್ ಇಬ್ಬರು ನಾಯಕಿಯರಾಗಿ ನಟಿಸಿದ್ದಾರೆ.‌ ಉಳಿದಂತೆ ಹಿರಿಯ ನಟಿ ತಾರಾ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದಾರೆ. ಪಾಪ್ ಕಾರ್ನ್ ಮಂಕಿ ಟೈಗರ್ ಹಾಗು ಪೆಟ್ರೋ ಮ್ಯಾಕ್ಸ್ ಚಿತ್ರಗಳನ್ನು ನಿರ್ಮಾಣ ಮಾಡಿರುವ ನಿರ್ಮಾಪಕ ಕೆ. ಎಂ. ಸುಧೀರ್ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾರೆ. ಈ ಚಿತ್ರಕ್ಕೆ ಮಾಸ್ತಿ ಮಂಜು ಸಂಭಾಷಣೆ ಬರೆದರೆ, ಚರಣ್​ರಾಜ್ ಸಂಗೀತ ಸಂಯೋಜಿಸಿದ್ದಾರೆ. ಸದ್ಯ ರೆಬೆಲ್ ಸ್ಟಾರ್ ಹುಟ್ಟುಹಬ್ಬಕ್ಕೆ ಅನಾವರಣಗೊಂಡಿರುವ ಟೀಸರ್ ನೋಡಿದ ಅಭಿಷೇಕ್ ಅಂಬರೀಶ್ ಅಭಿಮಾನಿಗಳು ಎರಡು ಸ್ಟೆಪ್ ಹಾಕುತ್ತಿದ್ದಾರೆ‌. ಇಷ್ಟೆಲ್ಲಾ ಮಾಸ್ ಎಲಿಮೆಂಟ್ಸ್ ಹೊಂದಿರುವ ಬ್ಯಾಡ್ ಮ್ಯಾನರ್ಸ್ ಚಿತ್ರ ಮುಂದಿನ ತಿಂಗಳು ಬಿಡುಗಡೆ ಸಿದ್ಧತೆಯಲ್ಲಿದ್ದಾರೆ ನಿರ್ಮಾಪಕ ಕೆ. ಎಂ ಸುಧೀರ್.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News