16ನೇ ವಯಸ್ಸಿನಲ್ಲಿ ಮಿಸ್ ಇಂಡಿಯಾ ಪ್ರಶಸ್ತಿ ಪಡೆದ Poonam Dhillo ದೊಡ್ಡ ಆಫರ್ ತಿರಸ್ಕರಿಸಿದಾಗ

ಕೇವಲ 16 ನೇ ವಯಸ್ಸಿನಲ್ಲಿ, ಪೂನಂ ಧಿಲ್ಲನ್ ಮಿಸ್ ಇಂಡಿಯಾ ಪ್ರಶಸ್ತಿಯನ್ನು ಗೆದ್ದರು.  

Last Updated : Apr 18, 2020, 03:50 PM IST
16ನೇ ವಯಸ್ಸಿನಲ್ಲಿ ಮಿಸ್ ಇಂಡಿಯಾ ಪ್ರಶಸ್ತಿ ಪಡೆದ Poonam Dhillo ದೊಡ್ಡ ಆಫರ್ ತಿರಸ್ಕರಿಸಿದಾಗ title=

ನವದೆಹಲಿ: ನಟಿ ಪೂನಂ ಧಿಲ್ಲನ್ ಬಾಲಿವುಡ್‌ನ ಇಂತಹ ಸುಂದರ ನಟಿಯಲ್ಲಿ ಒಬ್ಬರು. ಆಕೆ ತನ್ನ ಸೌಂದರ್ಯದ ಮೂಲಕ ಎಲ್ಲರ ಮನಗೆದ್ದಿದ್ದಾಳೆ.  ಪೂನಂ ಧಿಲ್ಲಾನ್ ಇಂದು ತನ್ನ 58 ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಅವರು ಏಪ್ರಿಲ್ 18, 1962ರಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ಜನಿಸಿದರು. ಅವರ ತಂದೆ ಭಾರತೀಯ ವಾಯುಸೇನೆಯಲ್ಲಿ ವಿಮಾನ ಎಂಜಿನಿಯರ್ ಆಗಿದ್ದರು. ಕೇವಲ 16ನೇ ವಯಸ್ಸಿನಲ್ಲಿ, ಪೂನಂ ಧಿಲ್ಲನ್ ಮಿಸ್ ಇಂಡಿಯಾ ಪ್ರಶಸ್ತಿಯನ್ನು ಗೆದ್ದರು. ನಂತರ ಅವರು ಅನೇಕ ಹಿಟ್ ಚಿತ್ರಗಳನ್ನು ನೀಡಿದರು. ಪೂನಂ ತುಂಬಾ ಸುಂದರವಾಗಿದ್ದರಿಂದ ನಿರ್ದೇಶಕ ಯಶ್ ಚೋಪ್ರಾ ಅವರು ತಮ್ಮ 'ತ್ರಿಶೂಲ್' ಚಿತ್ರದಲ್ಲಿ ಅವರಿಗೆ ಅವಕಾಶ ನೀಡಿದರು. ಪೂನಮ್ ಅವರ ಜನ್ಮದಿನದ ವಿಶೇಷ ಸಂದರ್ಭದಲ್ಲಿ ಅವರ ಜೀವನದ ಬಗ್ಗೆ ಯಾರಿಗೂ ತಿಳಿದಿರದ ಕೆಲ ವಿಷಯಗಳನ್ನು ಈ ಲೇಖನದಲ್ಲಿ ಹಂಚಿಕೊಳ್ಳುತ್ತಿದ್ದೇವೆ.

ವೈದ್ಯೆಯಾಗಲು ಬಯಸಿದ್ದ ಪೂನಂ ಧಿಲ್ಲನ್ :
ಪೂನಂ ಧಿಲ್ಲಾನ್ ಗೆ ಓದುವುದೆಂದರೆ ಬಹಳ ಇಷ್ಟವಾಗಿತ್ತು. ಆಕೆ ತಾನು ದೊಡ್ಡವಳಾದ ಬಳಿಕ ವೈದ್ಯೆಯಾಗಬೇಕು ಎಂಬ ಕನಸು ಕಂಡಿದ್ದರು. ತಾನು ಚಲನಚಿತ್ರಗಳಲ್ಲಿ ಕೆಲಸ ಮಾಡಬೇಕು ಎಂಬ ಬಗ್ಗೆ ಆಕೆ ಎಂದಿಗೂ ಯೋಚಿಸಿರಲಿಲ್ಲವಂತೆ. ಆದರೆ ಪೂನಂ ಧಿಲ್ಲನ್ ಸೌಂದರ್ಯವನ್ನು ಕಂಡ ಯಶ್ ಚೋಪ್ರಾ ಅವರಿಗೆ ಸಿನಿಮಾದಲ್ಲಿ ನಟಿಸಲು ಆಫರ್ ನೀಡಿದ್ದರಂತೆ ಆಗ ತನಗೆ ಸಿನಿಮಾಗೆ ಬರುವ ಇಂಗಿತ ಇಲ್ಲ ಎಂದಿದ್ದ ಪೂನಂ ನಯವಾಗಿಯೇ ಆ ಅವಕಾಶವನ್ನು ತಿರಸ್ಕರಿಸಿದ್ದರಂತೆ. ಅದಕ್ಕೆ ಮುಖ್ಯವಾದ ಕಾರಣ ಅವರ ಅಧ್ಯಯನಕ್ಕೆ ತೊಂದರೆಯಾಗಬಾರದು ಎಂಬುದಾಗಿತ್ತು. ಬಳಿಕ ಶಾಲಾ ರಜಾದಿನಗಳಲ್ಲಿಯೇ ಚಿತ್ರದ ಚಿತ್ರೀಕರಣ ಮಾಡಬೇಕೆಂಬ ಷರತ್ತಿನೊಂದಿಗೆ ಸಿನಿಮಾದಲ್ಲಿ ಅಭಿನಯಿಸಲು ಒಪ್ಪಿಕೊಂಡರು.

ಶಶಿ ಕಪೂರ್ ಕಪಾಳಮೋಕ್ಷ ಮಾಡಿದಾಗ...
ಒಂದು ಚಿತ್ರದ ದೃಶ್ಯವೊಂದರಲ್ಲಿ ಶಶಿ ಕಪೂರ್‌ ಪೂನಂಗೆ ಕಪಾಳಮೋಕ್ಷ ಮಾಡಬೇಕಿತ್ತು. ದೃಶ್ಯವನ್ನು ರಿಯಲ್ ಆಗಿರುವಂತೆ ಚಿತ್ರೀಕರಿಸಬೇಕು ಎಂದು ಹೇಳಿ ಯಶ್ ಚೋಪ್ರಾ ಆಕ್ಷನ್ ಹೇಳಿದ ಕೊಡಲೇ ಶಶಿ ಕಪೂರ್ ಪೂನಂ ಧಿಲ್ಲನ್‌ಗೆ ಹೇಳದೆ ಬಲವಾಗಿ ಕಪಾಳಮೋಕ್ಷ ಮಾಡಿದ್ದಾರೆ. ಆದರೆ ಶಶಿ ಕಪೂರ್ ನಂತರ ಪೂನಂ ಧಿಲ್ಲನ್‌ಗೆ ಕ್ಷಮೆಯಾಚಿಸಿದರು.

ದಾಂಪತ್ಯ ಜೀವನಕ್ಕೆ ಸಂಬಂಧಿಸಿದಂತೆ ಮುಖ್ಯಾಂಶಗಳಲ್ಲಿದ್ದ ಪೂನಂ:
ಪೂನಮ್ ಅವರ ವೈವಾಹಿಕ ಜೀವನಕ್ಕಾಗಿ ಸುದ್ದಿಯಲ್ಲಿದ್ದಾರೆ. ಅವರು ಚಲನಚಿತ್ರ ನಿರ್ಮಾಪಕ ಅಶೋಕ್ ಠಾಕೇರಿಯಾ ಅವರನ್ನು 1988ರಲ್ಲಿ ವಿವಾಹವಾದರು. ಮದುವೆಯ ನಂತರ ಪೂನಂ ಸುಮಾರು 5 ವರ್ಷಗಳ ಕಾಲ ಚಿತ್ರಗಳಲ್ಲಿ ಕೆಲಸ ಮಾಡಲಿಲ್ಲ. ಆದಾಗ್ಯೂ ಪೂನಂ ಅವರ ಮದುವೆ ಹೆಚ್ಚು ಕಾಲ ಉಳಿಯಲಿಲ್ಲ. ಅವರು 1997ರಲ್ಲಿ ಅಶೋಕ್ ಠಾಕೇರಿಯಾ ಅವರಿಂದ ವಿಚ್ಛೇದನ ಪಡೆದರು.  ಇದರ ನಂತರ, 1997ರಲ್ಲಿ ಅವರು ಮತ್ತೆ 'ಜುಡೈ' ಚಿತ್ರದೊಂದಿಗೆ ಪುನರಾಗಮನ ಮಾಡಿದರು. 

Trending News