ಭಟ್ಟರ ʼಗರಡಿʼಗೆ ಸೊಂಟ ಬಳುಕಿಸುತ್ತಾ ಬಂದ ನಿಶ್ವಿಕಾ ನಾಯ್ಡು..! ʼಹೊಡಿರಲೆ ಹಲಗಿʼ

Yogaraj Bhat Hodirele Halagi song : ಯೋಗರಾಜ್‌ ಭಟ್‌ ಮತ್ತು ಬಿ. ಸಿ. ಪಾಟೀಲ್‌ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಗರಡಿ ಚಿತ್ರದ ಹೊಡಿರಲೆ ಹಲಗಿ ಸಾಂಗ್‌ ಬಿಡುಗಡೆಯಾಗಿದೆ. ಈ ಹಾಡಿನಲ್ಲಿ ತಮಡೆ ಸೌಂಡ್‌ಗೆ ಚೆಲುವೆ ನಿಶ್ವಿಕಾ ನಾಯ್ಡು ಕುಣಿದು ಕುಪ್ಪಳಿಸಿದ್ದಾರೆ.

Written by - Krishna N K | Last Updated : Jun 15, 2023, 01:10 PM IST
  • ‘ಗರಡಿ’ ಚಿತ್ರದ ಹೊಡಿರಲೆ ಹಗಲಿ ಸಾಂಗ್‌ ರಿಲೀಸ್‌.
  • ಹಳ್ಳಿ ಸೊಗಡಿನ ಹಾಡಿನಲ್ಲಿ ಸೊಂಟ ಬಳುಕಿಸಿದ ನಿಶ್ವಿಕಾ ನಾಯ್ಡು.
  • ಯೋಗರಾಜ್ ಭಟ್ ನಿರ್ದೇಶನದ ಸಿನಿಮಾ ‘ಗರಡಿ’.
ಭಟ್ಟರ ʼಗರಡಿʼಗೆ ಸೊಂಟ ಬಳುಕಿಸುತ್ತಾ ಬಂದ ನಿಶ್ವಿಕಾ ನಾಯ್ಡು..! ʼಹೊಡಿರಲೆ ಹಲಗಿʼ title=

Garadi Hodirele Halagi song : ಯೋಗರಾಜ್‌ ಭಟ್‌ ನಿರ್ದೇಶನಕ ಕುಸ್ತಿ ಕ್ರೀಡಾ ಆಧಾರಿತ ಕನ್ನಡ ಮಣ್ಣಿನ ʼಗರಡಿʼ ಸಿನಿಮಾದ ʼಹೊಡಿರಲೆ ಹಲಗಿʼ ಹಾಡಿನ ಲಿರಿಕಲ್‌ ವಿಡಿಯೋ ಬಿಡುಗಡೆಯಾಗಿದೆ. ಈ ಅದ್ಭುತ ಗೀತೆಯನ್ನು ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಮತ್ತು ಪ್ರಭುದೇವ ಅವರು ಬಿಡುಗಡೆ ಮಾಡಿದ್ದಾರೆ. ಸ್ಯಾಂಡಲ್‌ವುಡ್‌ ಸುಂದರಿ ನಿಶ್ವಿಕಾ ನಾಯ್ಡು ಅಭಿನಯದ ಈ ಹಾಡು ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸುತ್ತಿದೆ.

ನಿನ್ನೆ ರಾಜಧಾನಿಯಲ್ಲಿ ಗರಡಿ ಸಿನಿಮಾದ ʼಹೊಡೆರಲೆ ಹಲಗಿʼ ಹಾಡಿನ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ವೇಳೆ ಭಟ್ಟರ ಬರೆದಿರುವ ಹೊಡೆರಲೆ ಹಲಗಿ ಎಂಬ ಪಕ್ಕಾ ಹಳ್ಳಿ ಹಾಡನ್ನು ಚಿತ್ರತಂಡ ರಿಲೀಸ್‌ ಮಾಡಿತು. ಹಾಡು ಬಹಳ ಚೆನ್ನಾಗಿ ಮೂಡಿ ಬಂದಿದ್ದು, ನಿಶ್ವಿಕಾ ನಾಯ್ಡು ಡಾನ್ಸ್‌ ಪಡ್ಡೆ ಹೈಕ್ಳ ಮನಗೆದ್ದಿದೆ. ಗರಡಿ ಸಿನಿಮಾದಲ್ಲಿ ಗುರು-ಶಿಷ್ಯ ಪರಂಪರೆಯ ಕಥಾಹಂದರ ಹೊಂದಿರುವ ಸಿನಿಮಾ. ಈ ಸಿನಿಮಾದಲ್ಲಿ ಗುರುವಿನ ಪಾತ್ರವನ್ನು ಮಾಜಿ ಸಚಿವರ ಬಿ.ಸಿ. ಪಾಟೀಲ್‌ ನಟಿಸಿದ್ದಾರೆ. ಶಿಷ್ಯನ ಪಾತ್ರದಲ್ಲಿ ಸೂರ್ಯ ಕಾಣಿಸಿಕೊಂಡಿದ್ದಾರೆ.

 

ಇದನ್ನೂ ಓದಿ: 'ಸಪ್ತ ಸಾಗರದಾಚೆ ಎಲ್ಲೋ' ಎರಡೂ ಪಾರ್ಟ್‌ಗಳ ಬಿಡುಗಡೆ ದಿನಾಂಕ ಅನೌನ್ಸ್‌

ಇನ್ನು ಈ ಸಿನಿಮಾಗಾಗಿ ನಾಯಕ ಮತ್ತು ವಿಲನ್‌ ಇಬ್ಬರೂ ಮೈಸೂರಿನ ಗರಡಿ ಮನೆಯಲ್ಲಿ ತಿಂಗಳುಗಟ್ಟಲೆ ಕುಸ್ತಿ ಕಲಿತದ್ದು ವಿಶೇಷವಾಗಿದೆ. ಈ ಚಿತ್ರದ ಪಾತ್ರಗಳ ಪರಿಪೂರ್ಣತೆಗಾಗಿ ಸಾಕಷ್ಟು ಬೆವರು ಹರಿಸಿದ್ದಾರೆ. ಇನ್ನು ಗರಡಿ ಸಿನಿಮಾ ಹಿಂದಿ ಭಾಷೆಗೂ ಸಹ ಡಬ್ಬಿಂಗ್‌ ಮಾಡಲು ಚಿತ್ರತಂಡ ಪ್ಲಾನ್‌ ಮಾಡುತ್ತಿದೆ. ಕನ್ನಡ ಮಣ್ಣಿನ ಕ್ರಿಡೆಯನ್ನು ಎಲ್ಲೆಡೆ ಪಸರಿಸುವ ಉದ್ದೇಶವನ್ನು ಚಿತ್ರತಂಡ ಹೊಂದಿದೆ.

ಇನ್ನು ʼಹೊಡಿರಲೆ ಹಲಗಿʼ ವಿಶೇಷ ಅಂದ್ರೆ, ತಮಟೆ ಸೌಂಡ್‌. ತಮಟೆ ಮೇಲೆನೆ ಈ ಹಾಡನ್ನು ಬರೆದಿದ್ದಾರೆ ಯೋಗರಾಜ್ ಭಟ್ರು, ಹಳ್ಳಿ ಸೊಗಡಗಿನ ಫೀಲ್ ಇರೋ ಈ ಸಾಂಗ್‌ನಲ್ಲಿ ನಿಶ್ವಿಕಾ ಕುಣಿದು ಕುಪ್ಪಳಿಸಿದ್ದಾರೆ. ಸೌಮ್ಯ ಫಿಲ್ಮ್ಸ್ ಬ್ಯಾನರ್‌ನಡಿ ಈ ಸಿನಿಮಾವನ್ನು ವನಜಾ ಪಾಟೀಲ್‌ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಸೂರ್ಯ, ಸೋನಲ್‌ ಮೊಂಥೆರೋ, ಧರ್ಮಣ್ಣ ಕಡೂರು, ರವಿಶಂಕರ್‌ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News