ಈ ಕರೋನಾ ಲಸಿಕೆ ಹೃದಯ ಸ್ತಂಭನದ ಅಪಾಯವನ್ನು ಹೆಚ್ಚಿಸುತ್ತಿದೆಯಂತೆ.!

Corona Vaccine Alert: COVID mRNA ಲಸಿಕೆಗೆ ಸಂಬಂಧಿಸಿದಂತೆ ಆಘಾತಕಾರಿ ಮತ್ತು ಆತಂಕಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಈ  ಲಸಿಕೆ ಬಳಕೆಯಿಂದ ಹೃದಯ  ಸಂಬಂಧ ಕಾಯಿಲೆಗಳ ಅಪಾಯ ಹೆಚ್ಚುತ್ತದೆ ಎಂದು  ವೈದ್ಯರು ಹೇಳಿದ್ದಾರೆ.  

Written by - Ranjitha R K | Last Updated : Oct 11, 2022, 08:54 AM IST
  • ಹೃದಯ ಸಂಬಂಧ ಕಾಯಿಲೆಗಳ ಅಪಾಯ ಹೆಚ್ಚುತ್ತದೆ ಈ ಲಸಿಕೆಯಿಂದ
  • ಸಂಶೋಧನೆಯಲ್ಲಿ ಬೆಳಕಿಗೆ ಬಂದ ಅಂಶ
  • ಈ ಲಸಿಕೆಯನ್ನು ತೆಗೆದುಕೊಳ್ಳುವಾಗ ಯಾರು ಜಾಗರೂಕರಾಗಿರಬೇಕು?
ಈ ಕರೋನಾ ಲಸಿಕೆ ಹೃದಯ ಸ್ತಂಭನದ ಅಪಾಯವನ್ನು ಹೆಚ್ಚಿಸುತ್ತಿದೆಯಂತೆ.!  title=
Corona Vaccine Alert

Corona Vaccine Alert : COVID mRNA ಲಸಿಕೆಗೆ ಸಂಬಂಧಿಸಿದಂತೆ ಆಘಾತಕಾರಿ ಮತ್ತು ಆತಂಕಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಈ  ಲಸಿಕೆ ಬಳಕೆಯಿಂದ ಹೃದಯ  ಸಂಬಂಧ ಕಾಯಿಲೆಗಳ ಅಪಾಯ ಹೆಚ್ಚುತ್ತದೆ ಎಂದು  ವೈದ್ಯರು ಹೇಳಿದ್ದಾರೆ. ವಿಶೇಷವಾಗಿ 18 ರಿಂದ 39 ವರ್ಷ ವಯಸ್ಸಿನ ಪುರುಷರಲ್ಲಿ ಈ ಅಪಾಯವು ಹೆಚ್ಚಾಗಿರುತ್ತದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿರುವವರು ಈ ಲಸಿಕೆಯನ್ನು ತೆಗೆದುಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಸಂಶೋಧನೆಯಲ್ಲಿ ಬೆಳಕಿಗೆ ಬಂದ ಅಂಶ : 
ಮಾಧ್ಯಮ ವರದಿಗಳ ಪ್ರಕಾರ, ಫ್ಲೋರಿಡಾದ ಶಸ್ತ್ರಚಿಕಿತ್ಸಕ ಜನರಲ್ ಡಾ. ಜೋಸೆಫ್ ಎ. ಲಡಾಪೋ, ಸಾರ್ವಜನಿಕರಿಗೆ ತಿಳಿದಿರಬೇಕಾದ COVID-19 mRNA ಲಸಿಕೆಗಳ ವಿಶ್ಲೇಷಣೆಯನ್ನು ಬಿಡುಗಡೆ ಮಾಡಿರುವುದಾಗಿ ಹೇಳಿದ್ದಾರೆ. ಈ ವಿಶ್ಲೇಷಣೆಯಲ್ಲಿ 18-39 ಪುರುಷರಲ್ಲಿ ಹೃದ್ರೋಗದ ಕಾರಣದಿಂದ ಸಾವಿನ ಅಪಾಯ ಹೆಚ್ಚುತ್ತಿರುವ  ಬಗ್ಗೆ ಹೇಳಲಾಗಿದೆ. ಈ ವಿಶ್ಲೇಷಣೆಯನ್ನು ಫ್ಲೋರಿಡಾ ಆರೋಗ್ಯ ಇಲಾಖೆಯು  ಸೆಲ್ಫ್ ಕಂಟ್ರೋಲ್ ಕೇಸ್ ಸಿರೀಸ್ ಮೂಲಕ ಮಾಡಲಾಗಿದೆ. ಇದು ಮೂಲತಃ ಲಸಿಕೆ ಸುರಕ್ಷತೆಯನ್ನು ಮೌಲ್ಯಮಾಪನ ಮಾಡಲು ಅಭಿವೃದ್ಧಿಪಡಿಸಿದ ತಂತ್ರವಾಗಿದೆ. mRNA ವ್ಯಾಕ್ಸಿನೇಷನ್ ನಂತರ 28 ದಿನಗಳಲ್ಲಿ 18-39 ವರ್ಷ ವಯಸ್ಸಿನ ಪುರುಷರಲ್ಲಿ ಹೃದ್ರೋಗ ಕಾರಣದಿಂದ ಸಂಭವಿಸುವ ಸಾವಿನ ಪ್ರಮಾಣದಲ್ಲಿ 84% ಹೆಚ್ಚಳ ಕಂಡುಬಂದಿದೆ ಎಂದು ಹೇಳಲಾಗಿದೆ. 

ಇದನ್ನೂ ಓದಿ : ಹೆಚ್ಚಾಗುತ್ತಿದೆ ಮಕ್ಕಳಲ್ಲಿ ಖಿನ್ನತೆ ಪ್ರಕರಣ: ನಿಮ್ಮ ಮಗುವಿನಲ್ಲಿರುವ ಸಮಸ್ಯೆ ಪತ್ತೆ ಹಚ್ಚೋದು ಹೇಗೆ?

ಈ ಲಸಿಕೆಯನ್ನು ತೆಗೆದುಕೊಳ್ಳುವಾಗ ಯಾರು ಜಾಗರೂಕರಾಗಿರಬೇಕು? :
ಮಯೋಕಾರ್ಡಿಟಿಸ್ ಮತ್ತು ಪೆರಿಕಾರ್ಡಿಟಿಸ್‌ನಂತಹ ಹೃದಯದ ಕಾಯಿಲೆಗಳನ್ನು ಹೊಂದಿರುವ ರೋಗಿಗಳು ಈ ಲಸಿಕೆಯನ್ನು ತೆಗೆದುಕೊಳ್ಳುವಾಗ ಹೆಚ್ಚು ಜಾಗರೂಕರಾಗಿರಬೇಕು. ಮತ್ತು ತಕ್ಷಣವೇ ತಮ್ಮ ವೈದ್ಯರನ್ನು ಸಂಪರ್ಕಿಸಬೇಕು ಎಂದು ಹೇಳಲಾಗಿದೆ. ಈ ಲಸಿಕೆಗೆ ಸಂಬಂಧಿಸಿದಂತೆ ಸಂಶೋಧನೆಯಲ್ಲಿ ಕಂಡುಬಂದಿರುವ ಅಪಾಯವು ಬೇರೆ ಯಾವುದೇ ಲಸಿಕೆಯಲ್ಲಿ ಕಂಡುಬಂದಿಲ್ಲ. ಲಸಿಕೆ ಸೇರಿದಂತೆ ಯಾವುದೇ ಔಷಧದ ಸುರಕ್ಷತೆ ಮತ್ತು ಪರಿಣಾಮದ ಬಗೆಗಿನ ಅಧ್ಯಯನವು ಸಾರ್ವಜನಿಕ ಆರೋಗ್ಯದ ಪ್ರಮುಖ ಅಂಶವಾಗಿದೆ ಎಂದು ಸರ್ಜನ್ ಜನರಲ್ ಡಾ ಜೋಸೆಫ್ ಲಡಾಪೋ ತಿಳಿಸಿದ್ದಾರೆ. ಇದೀಗ ಈ ಲಸಿಕೆಯಲ್ಲಿ ಸುರಕ್ಷತೆಗೆ ಸ್ವಲ್ಪ ಗಮನ ನೀಡಲಾಗಿದೆ ಎಂದು ಹೇಳಲಾಗಿದ್ದು, ಹಲವರ ಆತಂಕವನ್ನು ದೂರ ಮಾಡಿದೆ.

ಇದನ್ನೂ ಓದಿ : Salt-Mustard Oil Benefits: ಉಪ್ಪು-ಸಾಸಿವೆ ಎಣ್ಣೆ ಒಂದು ಜಬರ್ದಸ್ತ್ ಕಾಂಬಿನೇಷನ್, 3 ಸಮಸ್ಯೆ ಪರಿಹಾರಕ್ಕೆ ರಾಮಬಾಣ ಚಿಕಿತ್ಸೆ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News