Fenugreek Tea Health Benefits: ಒಂದು ವೇಳೆ ನೀವೂ ಕೂಡ ಸಾಮಾನ್ಯ ಚಹಾ ಹಾಗೂ ಕಾಫಿ ಸೇವಿಸುತ್ತಿದ್ದರೆ, ಇಂದೇ ಅವುಗಳನ್ನು ತ್ಯಜಿಸುವಿರಿ. ಏಕೆಂದರೆ, ಮೆಂತೆ ಚಹಾ ಸೇವನೆಯಿಂದಾಗುವ ಲಾಭಗಳು ನಿಮಗೆ ತಿಳಿದರೆ, ನೀವೂ ಕೂಡ ಕಾಫಿ, ಗ್ರೀನ್ ಚಹಾಗಳನ್ನು ಮರೆತು ಹೋಗುವಿರಿ. ಮೆಂತೆಯಲ್ಲಿ ಅಂಟಾಸಿಡ್ ಗಳಿದ್ದು, ಇವು ಶರೀರದಲ್ಲಿ ಆಸಿಡ್ ರಿಫ್ಲೆಕ್ಷ್ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಇದಲ್ಲದೆ ಹೊಟ್ಟೆಯ ಅಲ್ಸರ್ ಸಮಸ್ಯೆಯಿಂದ ಕೂಡ ಮುಕ್ತಿ ಸಿಗುತ್ತದೆ. ಇದಲ್ಲದೆ ಮೆಂತೆ ಚಹಾ ಸೇವನೆಯಿಂದಾಗುವ ಇತರ ಲಾಭಗಳ ಕುರಿತು ತಿಳಿದುಕೊಳ್ಳೋಣ ಬನ್ನಿ,
ತೂಕ ಇಳಿಕೆಗೆ ನೆರವಾಗುತ್ತದೆ
ಮೆಂತ್ಯದಲ್ಲಿ ನಾರಿನಂಶ ಹೇರಳ ಪ್ರಮಾಣದಲ್ಲಿದ್ದು, ಇದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ. ಇದಲ್ಲದೇ ಮೆಂತ್ಯ ಚಹಾ ಕುಡಿಯುವುದರಿಂದ ಕಿಡ್ನಿ ಸ್ಟೋನ್ ಸಮಸ್ಯೆ ದೂರವಾಗುತ್ತದೆ. ತೂಕ ಇಳಿಕೆ ಹಾಗೂ ಮಧುಮೇಹದ ಅಪಾಯವನ್ನು ಕಡಿಮೆ ಮಾಡುವ ಸಾಂಬಾರ ಪದಾರ್ಥಗಳಲ್ಲಿ ಮೆಂತೆ ಕೂಡ ಒಂದು. ಆರೋಗ್ಯಕರ ಜೀವನ ಮತ್ತು ಸದೃಢ ಶರೀರಕ್ಕಾಗಿ ಇಂದಿನಿಂದಲೇ ನಿಮ್ಮ ನಿತ್ಯದ ಆಹಾರ ಕ್ರಮಗಳಲ್ಲಿ ಮೆಂತೆ ಚಹಾವನ್ನು ಸೇರಿಸಿ.
ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ
ವರದಿಗಳ ಪ್ರಕಾರ, ಮೆಂತ್ಯ ಬೀಜಗಳು ಹಲವು ರೀತಿಯ ಪೋಷಕಾಂಶಗಳನ್ನು ಹೊಂದಿರುತ್ತವೆ. ಹೀಗಾಗಿ ಇದನ್ನು ನೀವು ದೇಹದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಕೂಡ ಬಳಸಬಹುದು. ಇದು ದೇಹದಲ್ಲಿ ಇನ್ಸುಲಿನ್ ಪ್ರಮಾಣ ಹೆಚ್ಚಾಗುವುದನ್ನು ತಡೆಯುತ್ತದೆ. ನಿಮ್ಮ ಸಾಮಾನ್ಯ ಚಹಾ ಅಥವಾ ಕಾಫಿಯ ಬದಲಿಗೆ ನೀವು ಮೆಂತ್ಯ ಚಹಾವನ್ನು ಸೇವಿಸಬಹುದು.
ಇದನ್ನೂ ಓದಿ-Mens Health Tips : ಪುರುಷರೆ ದೈಹಿಕ ದೌರ್ಬಲ್ಯಕ್ಕೆ ತಪ್ಪದೆ ಸೇವಿಸಿ ಕೇಸರಿ!
ಈ ಚಹಾ ಹೇಗೆ ತಯಾರಿಸಬೇಕು?
ಮೆಂತೆ ಚಹಾ ತಯಾರಿಸಲು ಮೊದಲು ಒಂದು ಚಮಚ ಮೆಂತೆ ಪುಡಿಯನ್ನು ತೆಗೆದುಕೊಂಡು ಅದಕ್ಕೆ ಬಿಸಿನೀರು ಬೆರೆಸಿ. ಇದಾದ ಬಳಿಕ ಅದನ್ನು ಸೋಸಿಕೊಳ್ಳಿ ಮತ್ತು ಅದಕ್ಕೆ ನಿಂಬೆ ರಸವನ್ನು ಬೆರೆಸಿ. ನೀವು ಬೇಕಾದರೆ ರಾತ್ರಿ ಇಡೀ ಮೆಂತೆ ಕಾಳುಗಳನ್ನು ನೀರಿನಲ್ಲಿ ನೆನೆಯಿಟ್ಟು, ಬೆಳಗ್ಗೆ ಆ ನೀರಿನಲ್ಲಿ ತುಳಸಿ ಎಲೆಗಳನ್ನು ಹಾಕಿ ಕುದಿಸಿಕೊಳ್ಳಬಹುದು. ಈಗ ಸೋಸಿದ ಚಹಾದಲ್ಲಿ ಸ್ವಲ್ಪ ಜೇನುತುಪ್ಪವನ್ನು ಬೆರೆಸಿ ಸೇವಿಸಬಹುದು.
ಇದನ್ನೂ ಓದಿ-Diabetes: ಮಧುಮೇಹ ರೋಗಿಗಳಿಗೆ ಲವಂಗ ಪ್ರಯೋಜನಕಾರಿಯೇ? ಬಳಸುವ ಮೊದಲು ಸತ್ಯ ತಿಳಿದುಕೊಳ್ಳಿ
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.