ಎರಡು ಎಸಳು ಬೆಳ್ಳುಳ್ಳಿ ಜೊತೆ ಒಂದು ತುಂಡು ಬೆಲ್ಲ ಸೇವಿಸಿದರೆ ಕೊಲೆಸ್ಟ್ರಾಲ್ ಕರಗಿ ನೀರಾಗುವುದು ಪಕ್ಕಾ!ನೆನಪಿರಲಿ ಇದೇ ಸಮಯಕ್ಕೆ ಸೇವಿಸಬೇಕು

Garlic with jaggery benefits:ಹಸಿ ಬೆಳ್ಳುಳ್ಳಿಯ ಸೇವನೆಯಿಂದ ಆರೋಗ್ಯಕ್ಕೆ  ಹೆಚ್ಚಿನ ಪ್ರಯೋಜನವಾಗುವುದು.ಬೆಳ್ಳುಳ್ಳಿಯ ಜೊತೆ ಒಂದು ತುಂಡು ಬೆಲ್ಲ ಸೇವಿಸಿದರೆ ಕೊಲೆಸ್ಟ್ರಾಲ್ ಸಂಪೂರ್ಣವಾಗಿ ಕರಗಿ ನೀರಾಗುವುದು.    

Written by - Ranjitha R K | Last Updated : Aug 7, 2024, 05:35 PM IST
  • ಹಸಿ ಬೆಳ್ಳುಳ್ಳಿಯನ್ನು ಮನೆಮದ್ದುಗಳಲ್ಲಿ ಬಹಳ ಮುಖ್ಯವಾದ ಔಷಧಿಯಾಗಿ ಬಳಸಲಾಗುತ್ತದೆ
  • ಹಸಿ ಬೆಳ್ಳುಳ್ಳಿ ತಿನ್ನುವುದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
  • ಹಸಿ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ದೇಹಕ್ಕೆ ಸಿಗುವ ಪ್ರಯೋಜನ ಹೆಚ್ಚು
ಎರಡು ಎಸಳು ಬೆಳ್ಳುಳ್ಳಿ ಜೊತೆ ಒಂದು ತುಂಡು ಬೆಲ್ಲ ಸೇವಿಸಿದರೆ  ಕೊಲೆಸ್ಟ್ರಾಲ್ ಕರಗಿ ನೀರಾಗುವುದು ಪಕ್ಕಾ!ನೆನಪಿರಲಿ ಇದೇ ಸಮಯಕ್ಕೆ ಸೇವಿಸಬೇಕು  title=

Garlic with jaggery benefits : ಹಸಿ ಬೆಳ್ಳುಳ್ಳಿಯನ್ನು ಮನೆಮದ್ದುಗಳಲ್ಲಿ ಬಹಳ ಮುಖ್ಯವಾದ ಔಷಧಿಯಾಗಿ ಬಳಸಲಾಗುತ್ತದೆ.ಆಯುರ್ವೇದದಲ್ಲಿ ಕೂಡಾ ಬೆಳ್ಳುಳ್ಳಿ ಅನೇಕ ರೋಗಗಳನ್ನು ಗುಣಪಡಿಸುತ್ತದೆ ಎಂದು ಹೇಳಲಾಗುತ್ತದೆ.ಹಸಿ ಬೆಳ್ಳುಳ್ಳಿ ತಿನ್ನುವುದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.ಇದು ನಿಮ್ಮ ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ಹೃದಯಾಘಾತದಂತಹ ಮಾರಣಾಂತಿಕ  ಅಪಾಯವನ್ನು ಕಡಿಮೆ ಮಾಡುತ್ತದೆ.ಬೆಳ್ಳುಳ್ಳಿಯನ್ನು ಹಸಿಯಾಗಿಯೂ ತಿನ್ನಬಹುದು, ಬೇಯಿಸಿಯೂ ತಿನ್ನಬಹುದು.ಆದರೆ,ಹಸಿ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ದೇಹಕ್ಕೆ ಸಿಗುವ ಪ್ರಯೋಜನ ಹೆಚ್ಚು.ಅನೇಕ ರೋಗಗಳು ಮತ್ತು ಆರೋಗ್ಯ ಸಮಸ್ಯೆಗಳಿದ್ದಾಗ ಹಸಿ ಬೆಳ್ಳುಳ್ಳಿಯನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಲು ಸಲಹೆ ನೀಡಲಾಗುತ್ತದೆ.

ಹಸಿ ಬೆಳ್ಳುಳ್ಳಿ ಮತ್ತು ಬೆಲ್ಲವನ್ನು ಒಟ್ಟಿಗೆ ತಿನ್ನುವುದರಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಬಹುದು.ಆದರೆ, ಬೆಳ್ಳುಳ್ಳಿಯೊಂದಿಗೆ ಬೆಲ್ಲವನ್ನು ಹೇಗೆ ಸೇವಿಸಬೇಕು ಎನ್ನುವುದು ತಿಳಿದಿರಬೇಕು. 

ಇದನ್ನೂ ಓದಿ : ಈ 5 ವಸ್ತುಗಳು ರಕ್ತನಾಳಗಳನ್ನು ಶುದ್ದಿಗೊಳಿಸುತ್ತವೆ, ನಿಮ್ಮ ಆಹಾರದಲ್ಲಿ ಇಂದೇ ಅವುಗಳನ್ನು ಸೇರಿಸಿ...!

ಹಸಿ ಬೆಳ್ಳುಳ್ಳಿ ಮತ್ತು ಬೆಲ್ಲವನ್ನು ಹೇಗೆ ಸೇವಿಸಬೇಕು? : 
ಹಸಿ ಬೆಳ್ಳುಳ್ಳಿಯನ್ನು ಬೆಲ್ಲದೊಂದಿಗೆ ಪುಡಿಮಾಡಿ ಚಟ್ನಿ ತರಹ ಸೇವಿಸಬಹುದು.ಈ ಚಟ್ನಿಯನ್ನು ತಿನ್ನುವುದರಿಂದ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. 

ಬೆಲ್ಲ ಮತ್ತು ಹಸಿ ಬೆಳ್ಳುಳ್ಳಿ ಚಟ್ನಿ ಮಾಡುವುದು ಹೇಗೆ ? : 
1.ಒಂದು ಬಟ್ಟಲಿನಲ್ಲಿ ಹಸಿ ಬೆಳ್ಳುಳ್ಳಿ ಕಾಳುಗಳನ್ನು ತೆಗದುಕೊಳ್ಳಿ.ಬೆಳ್ಳುಳ್ಳಿಯ ಸಿಪ್ಪೆ ತೆಗೆದು ಪಕ್ಕಕ್ಕೆ ಇಟ್ಟುಕೊಳ್ಳಿ.   
2.ನಂತರ ಒಂದು ಚಮಚ ಬೆಲ್ಲದ ಪುಡಿಯನ್ನು ತೆಗೆದುಕೊಂಡು ಅದನ್ನು ಬೆಳ್ಳುಳ್ಳಿಯೊಂದಿಗೆ ಚೆನ್ನಾಗಿ ಪುಡಿಮಾಡಿ.
3.ಈಗ ಈ ಚಟ್ನಿಯನ್ನು ಒಂದು ಪಾತ್ರೆಯಲ್ಲಿ ಇರಿಸಿ.
4. ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಗೆ ಈ ಚಟ್ನಿಯನ್ನು ಸೇವಿಸುತ್ತಾ ಬನ್ನಿ.  

ಇದನ್ನೂ ಓದಿ : ಫ್ರಿಡ್ಜ್‌ನಲ್ಲಿಟ್ಟ ಈ ಆಹಾರಗಳನ್ನು ಮತ್ತೆ ಮತ್ತೆ ಬಿಸಿ ಮಾಡಿ ತಿನ್ನುತ್ತಿದ್ದೀರಾ..?ಇದು ವಿಷಕಾರಿ ಹುಷಾರ್..!

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಈ ಮಾಹಿತಿಗೆ ZEE ಮೀಡಿಯಾ ಜವಾಬ್ದಾರರಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News