Gastric Problem: ʼಗ್ಯಾಸ್ಟ್ರಿಕ್ʼ ಸಮಸ್ಯೆ ಇದ್ದವರು ಈ ಆಹಾರಗಳಿಂದ ದೂರವಿರಬೇಕು

Foods to avoid with gastritis: ಆಲೂಗಡ್ಡೆ ಅಂದರೆ ಪ್ರತಿಯೊಬ್ಬರಿಗೂ ಇಷ್ಟ. ಆದರೆ ನಿಮಗೆ ಗ್ಯಾಸ್ಟ್ರಿಕ್ ಸಮಸ್ಯೆ ಇದ್ದಲ್ಲಿ ಆಲೂಗಡ್ಡೆಯಿಂದ ಆದಷ್ಟು ದೂರವಿರುವುದು ಒಳ್ಳೆಯದು. ಆಲೂಗಡ್ಡೆಯಲ್ಲಿ ಪಿಷ್ಟ ಹೆಚ್ಚಾಗಿರುತ್ತದೆ, ಇದು ಜೀರ್ಣಕ್ರಿಯೆಗೆ ಅಡ್ಡಿಯನ್ನುಂಟು ಮಾಡುತ್ತದೆ. 

Gastric Problem: ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಇಂದು ಪ್ರತಿಯೊಬ್ಬರೂ ಗ್ಯಾಸ್ಟ್ರಿಕ್‌ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಜಂಕ್‌ಫುಡ್‌, ಮದ್ಯ ಸೇವನೆ, ಸಿಹಿ ಪದಾರ್ಥಗಳ ಸೇವನೆ, ಒತ್ತಡ ಈಗೆ ವಿವಿಧ ಕಾರಣಗಳಿಂದ ಗ್ಯಾಸ್ಟ್ರಿಕ್‌ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರಿಂದ ಮುಕ್ತಿ ಪಡೆಯಲು ಪ್ರತಿಯೊಬ್ಬರೂ ಆರೋಗ್ಯಕರ ಡಯಟ್‌ ಅನುಸರಿಸಬೇಕು. ಗ್ಯಾಸ್ಟ್ರಿಕ್ ತೊಂದರೆಯಿಂದ ಮುಕ್ತಿ ಹೊಂದಲು ಕೆಲವು ಆಹಾರ ಪದಾರ್ಥಗಳನ್ನು ಸೇವಿಸಬಾರದು. ಇವುಗಳ ಸೇವನೆಯಿಂದ ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚಾಗುತ್ತದೆ. ಹೀಗಾಗಿ ಯಾವ ಆಹಾರಗಳಿಂದ ದೂರವಿರಬೇಕು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /5

ಇದು ಸುಲಭವಾಗಿ ಜೀರ್ಣವಾಗದ ತರಕಾರಿ. ಇದರಿಂದ ಅಜೀರ್ಣ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ರಾತ್ರಿ ವೇಳೆ ಕ್ಯಾಬೇಜ್ ಸೇವಿಸುವುದರಿಂದ ಹೊಟ್ಟೆಯಲ್ಲಿ ಸೆಳೆತ ಹಾಗೂ ಗ್ಯಾಸ್ಟ್ರಿಕ್ ಉಲ್ಬಣಿಸುತ್ತದೆ.

2 /5

ಆಲೂಗಡ್ಡೆ ಅಂದರೆ ಪ್ರತಿಯೊಬ್ಬರಿಗೂ ಇಷ್ಟ. ಆದರೆ ನಿಮಗೆ ಗ್ಯಾಸ್ಟ್ರಿಕ್ ಸಮಸ್ಯೆ ಇದ್ದಲ್ಲಿ ಆಲೂಗಡ್ಡೆಯಿಂದ ಆದಷ್ಟು ದೂರವಿರುವುದು ಒಳ್ಳೆಯದು. ಆಲೂಗಡ್ಡೆಯಲ್ಲಿ ಪಿಷ್ಟ ಹೆಚ್ಚಾಗಿರುತ್ತದೆ, ಇದು ಜೀರ್ಣಕ್ರಿಯೆಗೆ ಅಡ್ಡಿಯನ್ನುಂಟು ಮಾಡುತ್ತದೆ. ಕಾಳುಗಳ ಜೊತೆ ಬೇಯಿಸಿದ ಆಲೂಗಡ್ಡೆ ಸೇವಿಸಿದರೆ ಗ್ಯಾಸ್ಟ್ರಿಕ್ ಹೆಚ್ಚಾಗುತ್ತದೆ.

3 /5

ಕಲ್ಲಂಗಡಿಯಲ್ಲಿ ನೀರು ಮತ್ತು ಖನಿಜದ ಪ್ರಮಾಣ ಹೆಚ್ಚಾಗಿರುತ್ತದೆ. ಈ ರಸಭರಿತ ಹಣ್ಣು ಕರುಳಿನಲ್ಲಿ ಕಳೆಯಬೇಕಾದ ಸಮಯವನ್ನು ಹೆಚ್ಚಿಸುತ್ತದೆ. ಇದರಿಂದ ಜೀರ್ಣಕ್ರಿಯೆಗೆ ಅಡ್ಡಿಯಾಗುತ್ತದೆ. ಇದರಲ್ಲಿ ಸಕ್ಕರೆ ಮನ್ನಿಟಾಲ್ ಇರುವುದರಿಂದ ಹೊಟ್ಟೆ ಉಬ್ಬರದ ಸಮಸ್ಯೆ ಕಾಡುತ್ತದೆ. 

4 /5

ಸೌತೆಕಾಯಿಯಲ್ಲಿ ನೀರು ಮತ್ತು ಫೈಬರ್ ಅಂಶ ಹೆಚ್ಚಾಗಿರುವುದರಿಂದ ರಾತ್ರಿ ವೇಳೆ ಇದನ್ನು ತಿನ್ನುವುದು ಹೊಟ್ಟೆಗೆ ಒಳ್ಳೆಯದಲ್ಲ. ಇದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸಿ ಗ್ಯಾಸ್ ತುಂಬಿಕೊಳ್ಳಲು ಕಾರಣವಾಗುತ್ತದೆ. ರಾತ್ರಿ ಸೌತೆಕಾಯಿ ತಿಂದ ಬಳಿಕ ಹೊಟ್ಟೆ ಉಬ್ಬರ ಬರಲು ಇದೇ ಕಾರಣ.

5 /5

ನಿಂಬೆ ಹಣ್ಣು ಸಹ ಜೀರ್ಣಕ್ರಿಯೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಲ್ಲಿ ವಿಟಮಿನ್ ʼಸಿʼ ಪ್ರಮಾಣ ಸಮೃದ್ಧವಾಗಿದ್ದು, ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಇದನ್ನು ಸೇವಿಸಬಾರದು. ಲಿಂಬೆ ಹಣ್ಣಿನ ಜ್ಯೂಸ್ ಸಹ ಕುಡಿಯಬಾರದು.