Herbal Tea Benefits: ಚಳಿಗಾಲದಲ್ಲಿ ನಿಮ್ಮನ್ನು ಈ ಸಮಸ್ಯೆಗಳಿಂದ ದೂರವಿರಿಸುತ್ತೆ ಹರ್ಬಲ್ ಟೀ

Herbal Tea Benefits: ಚಳಿಗಾಲದಲ್ಲಿ ಶೀತ, ಕೆಮ್ಮು ಸಾಮಾನ್ಯವಾಗಿ ಕಾಡುವ ಸಮಸ್ಯೆಗಳು. ಆದರೆ, ಗಿಡಮೂಲಿಕ ಚಹಾ ಅಂದರೆ ಹರ್ಬಲ್ ಟೀ ಸೇವಿಸುವುದರಿಂದ ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಹಲವು ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು ಎಂದು ಹೇಳಲಾಗುತ್ತದೆ. 

Written by - Yashaswini V | Last Updated : Jan 13, 2023, 04:16 PM IST
  • ಚಳಿಗಾಲದಲ್ಲಿ ಕರಿದ ಆಹಾರಗಳನ್ನು ಹೆಚ್ಚು ಸೇವಿಸುವುದರಿಂದ ಅದು ಜೀರ್ಣಕ್ರಿಯೆಯ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.
  • ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆ ಇದ್ದರೆ, ನೀವು ಶುಂಠಿ, ಪುದೀನಾ, ಜೇನುತುಪ್ಪದ ಚಹಾವನ್ನು ತೆಗೆದುಕೊಳ್ಳಬೇಕು.
  • ಇದರಿಂದ ಗ್ಯಾಸ್ ಸಮಸ್ಯೆ, ಹೊಟ್ಟೆ ನೋವು ಸೇರಿದಂತೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಹಲವು ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು.
Herbal Tea Benefits: ಚಳಿಗಾಲದಲ್ಲಿ ನಿಮ್ಮನ್ನು ಈ ಸಮಸ್ಯೆಗಳಿಂದ ದೂರವಿರಿಸುತ್ತೆ ಹರ್ಬಲ್ ಟೀ  title=
Herbal tea benefits

Herbal Tea Benefits: ಚಳಿಗಾಲ ಬಂತೆಂದರೆ ಇದರೊಟ್ಟಿಗೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಕೂಡ ಹೆಚ್ಚಾಗುತ್ತವೆ. ಅದರಲ್ಲೂ ಮುಖ್ಯವಾಗಿ ಶೀತ, ನೆಗಡಿ, ಕೆಮ್ಮು ಸೇರಿದಂತೆ ಹಲವು ಸೋಂಕಿನ ಸಮಸ್ಯೆಗಳು ಸರ್ವೇ ಸಾಮಾನ್ಯವಾಗಿದೆ. ಇವುಗಳನ್ನು ತಪ್ಪಿಸಲು ರೋಗನಿರೋಧಕ ಶಕ್ತಿ ಬಲವಾಗಿರುವುದು ಬಹಳ ಮುಖ್ಯ. ಇದಕ್ಕಾಗಿ ಚಳಿಗಾಲದಲ್ಲಿ ಸಾಮಾನ್ಯ ಚಹಾ ಸೇವನೆಗಿಂತ ಗಿಡಮೂಲಿಕೆ ಚಹಾ ಎಂದರೆ ಹರ್ಬಲ್ ಟೀ ಸೇವನೆಯನ್ನು ಬಹಳ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.

ಆಯುರ್ವೇದದಲ್ಲಿ ಚಳಿಗಾಲದಲ್ಲಿ ನಿಮ್ಮನ್ನು ರೋಗಗಳಿಂದ ರಕ್ಷಿಸಿಕೊಳ್ಳಲು ಸಹಾಯಕವಾಗುವಂತಹ ಹಲವು ಗಿಡಮೂಲಿಕೆ ಚಹಾಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಈ ಹರ್ಬಲ್ ಚಹಾಗಳು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಸಾಮಾನ್ಯ ಸೋಂಕುಗಳಿಂದ ನಮ್ಮನ್ನು ರಕ್ಷಿಸುತ್ತದೆ. ಅಂತಹ ಕೆಲವು ಚಹಾಗಳ ಬಗ್ಗೆ ಇಲ್ಲಿದೆ ಮಾಹಿತಿ...

ವಾಸ್ತವವಾಗಿ, ಸಾಮಾನ್ಯ ಶೀತ, ನೆಗಡಿಗೆ ಚಳಿಗಾಲದಲ್ಲಿ ಇಂಗ್ಲಿಷ್ ಮೆಡಿಸಿನ್ ಬದಲಿಗೆ ಆಯುರ್ವೇದ ಚಿಕಿತ್ಸೆ ಅದರಲ್ಲೂ ಮನೆಯಲ್ಲಿಯೇ ತಯಾರಿಸಬಹುದಾದ ಗಿಡಮೂಲಿಕೆ ಚಹಾಗಳು ಹೆಚ್ಚು ಪ್ರಯೋಜನಕಾರಿ ಆಗಿವೆ. ಇವುಗಳಲ್ಲಿ ಗ್ರೀನ್ ಟೀ, ಶುಂಠಿ ಟೀ, ಶುಂಠಿ ಜೇನುತುಪ್ಪದ ಟೀ, ಏಲಕ್ಕಿ ಟೀ, ಮಸಾಲಾ ಚಹಾಗಳು ಸೇರಿವೆ. ಇದು ಸಮೃದ್ಧವಾದ ವಿಟಮಿನ್ ಸಿ, ಬಿ 3, ಬಿ 6 ಕಬ್ಬಿಣ, ಪೊಟ್ಯಾಸಿಯಮ್ ಅನ್ನು ಹೊಂದಿರುತ್ತದೆ. 

ಇದನ್ನೂ ಓದಿ- Weight Loss Tips: ತೂಕ ನಷ್ಟಕ್ಕೆ ಪರಿಣಾಮಕಾರಿ ಈ ಡ್ರೈ ಫ್ರೂಟ್‌

ಹರ್ಬಲ್ ಟೀ ನಮ್ಮ ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿ: 
ಉತ್ತಮ ಜೀರ್ಣಕ್ರಿಯೆ:

ಚಳಿಗಾಲದಲ್ಲಿ ಕರಿದ ಆಹಾರಗಳನ್ನು ಹೆಚ್ಚು ಸೇವಿಸುವುದರಿಂದ ಅದು ಜೀರ್ಣಕ್ರಿಯೆಯ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆ ಇದ್ದರೆ, ನೀವು ಶುಂಠಿ, ಪುದೀನಾ, ಜೇನುತುಪ್ಪದ ಚಹಾವನ್ನು ತೆಗೆದುಕೊಳ್ಳಬೇಕು. ಇದರಿಂದ ಗ್ಯಾಸ್ ಸಮಸ್ಯೆ, ಹೊಟ್ಟೆ ನೋವು ಸೇರಿದಂತೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಹಲವು ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು.

ಶೀತ, ನೆಗಡಿ, ಕೆಮ್ಮು:
ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವುದು ಬಹಳ ಮುಖ್ಯ. ಇದಕ್ಕಾಗಿ, ಸಾಮಾನ್ಯ ಚಹಾದ ಬದಲಿಗೆ, ಶುಂಠಿ ಮತ್ತು ಜೇನುತುಪ್ಪದ ಚಹಾವನ್ನು ತೆಗೆದುಕೊಳ್ಳಬಹುದು. ಇದರಿಂದ ಶೀತ, ನೆಗಡಿ, ಕೆಮ್ಮಿನಂತಹ ಸಾಮಾನ್ಯ ಆರೋಗ್ಯ ಸಮಸ್ಯೆಗಳಿಂದ ಶೀಘ್ರದಲ್ಲೇ ಪರಿಹಾರ ಪಡೆಯಬಹುದು. 

ಇದನ್ನೂ ಓದಿ- Pimple: ಮೊಡವೆಗಳನ್ನು ಬುಡಸಮೇತ ಕಿತ್ತುಹಾಕಲು ಈ 3 ಆರೋಗ್ಯಕರ ಪಾನೀಯಗಳು ಸೇವಿಸಿ

ದೇಹವನ್ನು ಬೆಚ್ಚಗಿಡಲು ಸಹಕಾರಿ:
ಚಳಿಗಾಲದಲ್ಲಿ ನಡುಗುವ ಚಳಿಯಿಂದ ಪರಿಹಾರ ಪಡೆಯಲು ಹರ್ಬಲ್ ಟೀ ಬಹಳ ಪ್ರಯೋಜನಕಾರಿ ಆಗಿದೆ. ಏಲಕ್ಕಿ ಚಹಾ ಸೇವನೆಯಿಂದ ರಕ್ತ ಪರಿಚಲನೆ ಹೆಚ್ಚಳವಾಗುತ್ತದೆ.  

ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ಪಡೆಯಿರಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News