ಆರೋಗ್ಯವರ್ಧಕ ದಾಳಿಂಬೆ ಹಣ್ಣನ್ನು ಸುಲಭವಾಗಿ ಹೀಗೆ ಕಟ್ ಮಾಡಿ...

ಇಂಜಿನಿಯರಿಂಗ್ ಎಂಬ ಟ್ವಿಟ್ಟರ್ ಖಾತೆಯಲ್ಲಿ ದಾಳಿಂಬೆಯನ್ನು ಸುಲಭವಾಗಿ ಕತ್ತರಿಸುವ ಟೆಕ್ನಿಕ್ ಅನ್ನು ವೀಡಿಯೋ ಮೂಲಕ ತಿಳಿಸಲಾಗಿದೆ. ಇದುವರೆಗೆ 1 ಲಕ್ಷಕ್ಕೂ ಅಧಿಕ ಮಂದಿ ಈ ವೀಡಿಯೋ ಲೈಕ್ ಮಾಡಿದ್ದು, 24 ಸಾವಿರಕ್ಕೂ ಅಧಿಕ ರಿಟ್ವೀಟ್ ಆಗಿದೆ. 

Last Updated : Oct 24, 2019, 12:56 PM IST
ಆರೋಗ್ಯವರ್ಧಕ ದಾಳಿಂಬೆ ಹಣ್ಣನ್ನು ಸುಲಭವಾಗಿ ಹೀಗೆ ಕಟ್ ಮಾಡಿ... title=

ಬೆಂಗಳೂರು: ಹಲವು ಆರೋಗ್ಯ ಸಮಸ್ಯೆಗಳಿಗೆ ಉತ್ತಮ ಔಷಧಿಯಾಗಿ ಕಾರ್ಯನಿರ್ವಹಿಸುವ ದಾಳಿಂಬೆ ಹಣ್ಣನ್ನು ಸುಲಭವಾಗಿ ಕತ್ತರಿಸುವುದು ಹೇಗೆ ಎಂಬುದು ಸಾಕಷ್ಟು ಮಂದಿಗೆ ತಿಳಿದಿಲ್ಲ. ಕೆಲವರು ದಾಳಿಂಬೆಯನ್ನುಕತ್ತರಿಸುವಾಗಲೇ ಸಾಕಷ್ಟು ಕಾಳುಗಳನ್ನು, ಅದರ ರಸವನ್ನು ವೇಸ್ಟ್ ಮಾಡಿಬಿಡುತ್ತಾರೆ. ಅಂತಹವರಿಗಾಗಿಯೇ ದಾಳಿಂಬೆಯನ್ನು ಸುಲಭವಾಗಿ ಕತ್ತರಿಸುವುದು ಹೇಗೆ ಎಂಬುದನ್ನು ತಿಳಿಸಲು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ವೀಡಿಯೋವೊಂದು ಇದೀಗ ಸಖತ್ ವೈರಲ್ ಆಗಿದೆ. 

ಇಂಜಿನಿಯರಿಂಗ್ ಎಂಬ ಟ್ವಿಟ್ಟರ್ ಖಾತೆಯಲ್ಲಿ ದಾಳಿಂಬೆಯನ್ನು ಸುಲಭವಾಗಿ ಕತ್ತರಿಸುವ ಟೆಕ್ನಿಕ್ ಅನ್ನು ವೀಡಿಯೋ ಮೂಲಕ ತಿಳಿಸಲಾಗಿದೆ. ಇದುವರೆಗೆ 1 ಲಕ್ಷಕ್ಕೂ ಅಧಿಕ ಮಂದಿ ಈ ವೀಡಿಯೋ ಲೈಕ್ ಮಾಡಿದ್ದು, 24 ಸಾವಿರಕ್ಕೂ ಅಧಿಕ ರಿಟ್ವೀಟ್ ಆಗಿದೆ. ವಿಡಿಯೋ ನೋಡಿದವರೆಲ್ಲಾ, ದಾಳಿಂಬೆ ಕತ್ತರಿಸುವುದು ಇಷ್ಟು ಸುಲಭವೇ ಎಂದು ಹುಬ್ಬೇರಿಸಿದ್ದಾರೆ. ಆ ವೈರಲ್ ವೀಡಿಯೋನ ನೀವೂ ವೀಕ್ಷಿಸಿ...

Trending News