Kapil Dev Birthday: ಅವರ ನಾಯಕತ್ವ ಇತಿಹಾಸ. ಅವರ ಆಲ್ ರೌಂಡ್ ಪ್ರದರ್ಶನ ಅದ್ಭುತ.. ಅವರ ಹೆಸರೇ ಟೀಂ ಇಂಡಿಯಾ ತಂಡಕ್ಕೆ ಒಂದು ಶಕ್ತಿ. ಪಾಕಿಸ್ತಾನದಲ್ಲಿ ಹುಟ್ಟಿ, ಭಾರತ ತಂಡಕ್ಕಾಗಿ ತನ್ನ ಜೀವನ ಸವೆಸಿದ ಆ ಆಟಗಾರ ಯಾರು ಎಂದು ತಿಳಿಯಲು ಮುಂದೆ ಓದಿ...
1983 ರಲ್ಲಿ ಭಾರತ ತಂಡ ವಿಶ್ವ ಕಪ್ ಟ್ರೋಫಿ ಕೈಗೆತ್ತಿಕೊಂಡ ಸಮಯ ಯಾರಿಗೂ ಕೂಡ ಮರೆಯಲು ಸಾಧ್ಯವೇ ಇಲ್ಲ ಬಿಡಿ. ಈ ಕ್ಷಣ ಕೋಟ್ಯಾಂತರ ಅಭಿಮಾನಿಗಳ ಕಣ್ಣಲ್ಲಿ ಹೊಸ ಹುಮ್ಮಸ್ಸು ತುಂಬಿಸಿತ್ತು, ತಮ್ಮ ದೇಶದ ಮೇಲೆ ಅಗಾದವಾದ ಭರವಸೆ, ಗರ್ವ. ಅಬ್ಬಬ್ಬಾ ಆ ಕ್ಷಣದಲ್ಲಿ ಬಾರತೀಯರು ಅನುಭವಿಸಿದ್ದ ಸಂತೋಷವನ್ನು ಪದಗಳಿಂದ ವರ್ಣಿಸಲು ಸಾಧ್ಯ ಇಲ್ಲ ಬಿಡಿ.
1983ರಲ್ಲಿ ವಿಶ್ವ ಕಪ್ ಎಂದ ಒಡನೆ ಮೊದಲಿಗೆ ನೆನಪಾಗುವುದು ಕಪಿಲ್ ದೇವ್ ಹೆಸರು. ಹೌದು, ಕಪಿಲ್ ದೇವ್ ಅವರಿಗೆ ಇಂದು 65 ನೇ ಹುಟ್ಟುಹಬ್ಬದ ಸಂಭ್ರಮ. ಇಡೀ ಜಗತ್ತಿಗೆ ಕಪಿಲ್ ದೇವ್ ಹೆಸರು ಹೇಳಿದ ಒಡನೆ ಮೊದಲು ನೆನಪಾಗುವುದು ಅವರೊಬ್ಬ ಖ್ಯಾತ ಕ್ರಿಕೆಟಿಗ ಹಾಗೂ ದೇಶಕ್ಕೆ ವಿಶ್ವಕಪ್ ಗೆದ್ದುಕೊಟ್ಟ ಆಟಗಾರ ಎಂದು. ಆದರೆ, ಕಪಿಲ್ ದೇವ ಇಷ್ಟು ದೊಡ್ಡ ಹೆಸರು ಮಾಡುವುದರ ಹಿಂದೆ ಒಂದು ಕಣ್ಣೀರಿನ ಕಥೆಯಿದೆ.
ಟೀಂ ಇಂಡಿಯಾದ ನಾಯಕನಾಗಿ ಭಾರತೀಯ ಕ್ರಿಕೆಟ್ನ ದಿಕ್ಕನ್ನೇ ಬದಲಿಸಿದ ಕಪಿಲ್ ದೇವ್, ಜನವರಿ 6, 1959 ರಂದು ಪಾಕಿಸ್ತಾನದ ರಾವಲ್ಪಿಂಡಿ ಸಮೀಪದ ಹಳ್ಳಿಯಲ್ಲಿ ಜನಿಸಿದರು. ದೇಶದ ವಿಭಜನೆಯ ಸಮಯದಲ್ಲಿ, ಅವರ ಕುಟುಂಬವು ಭಾರತಕ್ಕೆ ವಲಸೆ ಬಂದು ಚಂಡೀಗಢದಲ್ಲಿ ನೆಲೆಸಿತು. ತಂದೆ ರಾಮಲಾಲ್ ಕಟ್ಟಡಗಳ ಮರದ ವ್ಯಾಪಾರಿ.
ದೇಶೀಯ ಕ್ರಿಕೆಟ್ ನಲ್ಲಿ ಜನಪ್ರಿಯತೆ ಗಳಿಸಿದ್ದ ಕಪಿಲ್ ದೇವ್ 1978ರಲ್ಲಿ ಭಾರತ ತಂಡವನ್ನು ಪ್ರವೇಶಿಸಿದ್ದರು. ಅಕ್ಟೋಬರ್ 1 ರಂದು ಪಾಕಿಸ್ತಾನ ವಿರುದ್ಧದ ODI ಪಂದ್ಯದಲ್ಲಿ ಅವರು ತಮ್ಮ ಅಂತರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದರು. ದೇ ತಿಂಗಳ 16 ರಂದು ಪಾಕಿಸ್ತಾನದ ವಿರುದ್ಧ ತಮ್ಮ ವೃತ್ತಿಜೀವನದ ಮೊದಲ ಟೆಸ್ಟ್ ಪಂದ್ಯವನ್ನು ಆಡಿದ್ದರು. ಅಲ್ಲಿಂದ ಅವರು ಭಾರತೀಯ ಕ್ರಿಕೆಟ್ ತಂಡದಲ್ಲಿ ಉತ್ತಮ ವೇಗದ ಆಲ್ರೌಂಡರ್ ಆಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡರು.
ಕರಾಚಿಯಲ್ಲಿ ನಡೆದ ಆ ಸರಣಿಯ ಮೂರನೇ ಟೆಸ್ಟ್ನಲ್ಲಿ 33 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಅತಿವೇಗವಾಗಿ ಅರ್ಧಶತಕ ಬಾರಿಸಿದ ಭಾರತೀಯ ಬ್ಯಾಟ್ಸ್ಮನ್ ಎಂಬ ದಾಖಲೆ ನಿರ್ಮಿಸಿದರು. ವೆಸ್ಟ್ ಇಂಡೀಸ್ ತಂಡದ ವಿರುದ್ಧ ದೆಹಲಿಯ ಕೋಟ್ಲಾ ಮೈದಾನದಲ್ಲಿ ಫಿರೋಜ್ ಶಾ 124 ಎಸೆತಗಳಲ್ಲಿ 126 ರನ್ ಗಳಿಸುವ ಮೂಲಕ ತಮ್ಮ ವೃತ್ತಿಜೀವನದ ಮೊದಲ ಟೆಸ್ಟ್ ಶತಕ ದಾಖಲಿಸಿದರು.
1983ರ ವಿಶ್ವಕಪ್ ನಲ್ಲಿ ಭಾರತವನ್ನು ಮುನ್ನಡೆಸಿದ್ದ ಕಪಿಲ್ ದೇವ್ ತಂಡವನ್ನು ವಿಶ್ವ ಚಾಂಪಿಯನ್ ಪಟ್ಟಕ್ಕೇರಿಸಿದರು. ಕಪಿಲ್ದೇವ್ ನಾಯಕತ್ವದಲ್ಲಿ ಭಾರತ ತಂಡದ ಗೆಲುವಿನೊಂದಿಗೆ ದೇಶದ ಕ್ರಿಕೆಟ್ನ ಹಂತವೇ ಬದಲಾಯಿತು. ನಂತರ ದೇಶದಲ್ಲಿ ಕ್ರಿಕೆಟಿನ ಮೇಲಿದ್ದ ಆಸಕ್ತಿ ಹಾಗೂ ಮರ್ಯಾದೆ ದುಪ್ಪಟ್ಟಾಯಿತು.
ಕಪಿಲ್ ದೇವ್ ಟೆಸ್ಟ್ ಕ್ರಿಕೆಟ್ನಲ್ಲಿ 5,000 ರನ್ ಗಳಿಸಿದ ನಂತರ 400 ಕ್ಕೂ ಹೆಚ್ಚು ವಿಕೆಟ್ಗಳನ್ನು ಪಡೆದ ಮೊದಲ ಆಲ್ರೌಂಡರ್ ಎಂಬ ದಾಖಲೆಯನ್ನು ನಿರ್ಮಿಸಿದರು. ಇದಲ್ಲದೆ, ಏಕದಿನ ಕ್ರಿಕೆಟ್ನಲ್ಲಿ ಭಾರತ ತಂಡಕ್ಕಾಗಿ ಶತಕ ದಾಖಲಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು ಒಟ್ಟು 17 ವರ್ಷಗಳ ಕಾಲ ಭಾರತೀಯ ಕ್ರಿಕೆಟ್ಗೆ ಸೇವೆ ಸಲ್ಲಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.