Blood Pressure Range: ವಯಸ್ಸಿಗೆ ಅನುಗುಣವಾಗಿ ಮಹಿಳೆ ಮತ್ತು ಪುರುಷರ ರಕ್ತದೊತ್ತಡ ಎಷ್ಟಿರಬೇಕು!

Blood Pressure Range: ವಯಸ್ಸಿಗೆ ಅನುಗುಣವಾಗಿ ಮಹಿಳೆ ಮತ್ತು ಪುರುಷರ ರಕ್ತದೊತ್ತಡ ಇರುತ್ತದೆ ಎಂದು ನಿಮಗೆ ತಿಳಿದಿದೆಯೇ? ಆದಾಗ್ಯೂ, ಅಧಿಕ ರಕ್ತದೊತ್ತಡದ ಸಮಸ್ಯೆ ಪುರುಷರಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಎಂದು ನಂಬಲಾಗಿದೆ. ಹಾಗಿದ್ದರೆ ವಯಸ್ಸಿಗೆ ಅನುಗುಣವಾಗಿ ಯಾವ ವಯಸ್ಸಿನವರಿಗೆ ಎಷ್ಟು ರಕ್ತದೊತ್ತಡ ಇರಬೇಕು ಎಂದು ತಿಳಿಯೋಣ.

Written by - Yashaswini V | Last Updated : Mar 16, 2022, 11:48 AM IST
  • ವಯಸ್ಸಿಗೆ ಅನುಗುಣವಾಗಿ ರಕ್ತದೊತ್ತಡ: ಯಾವ ವಯಸ್ಸಿನವರಿಗೆ ಎಷ್ಟಿರಬೇಕು!
  • ಮಹಿಳೆಯರು ಮತ್ತು ಪುರುಷರ ರಕ್ತದೊತ್ತಡದಲ್ಲಿ ವ್ಯತ್ಯಾಸವಿದೆ
  • ಈ ಬಗ್ಗೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ
Blood Pressure Range: ವಯಸ್ಸಿಗೆ ಅನುಗುಣವಾಗಿ ಮಹಿಳೆ ಮತ್ತು ಪುರುಷರ ರಕ್ತದೊತ್ತಡ ಎಷ್ಟಿರಬೇಕು! title=
BP According To Age

Blood Pressure Range: ಬದಲಾಗುತ್ತಿರುವ ಜೀವನಶೈಲಿಯಲ್ಲಿ ರಕ್ತದೊತ್ತಡವನ್ನು (Blood Pressure) ನಿಯಂತ್ರಿಸುವುದು ಸವಾಲಾಗಿ ಪರಿಣಮಿಸಿದೆ. ಏಕೆಂದರೆ ರಕ್ತದೊತ್ತಡ ಹೆಚ್ಚಾದರೆ ಹೃದಯ ಕಾಯಿಲೆಗಳ ಅಪಾಯವೂ ಹೆಚ್ಚಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇಂತಹ ಪರಿಸ್ಥಿತಿಯಲ್ಲಿ ಹೃದಯ ಸಂಬಂಧಿತ ಸಮಸ್ಯೆ ಬಾರದಂತೆ ತಡೆಯಲು ಬಿಪಿಯನ್ನು ಸಮತೋಲನದಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ಹಾಗಾದರೆ ವಯಸ್ಸಿಗೆ ಅನುಗುಣವಾಗಿ ಮಹಿಳೆಯರು ಮತ್ತು ಪುರುಷರ ರಕ್ತದೊತ್ತಡ  ಎಷ್ಟಿರಬೇಕು ಎಂದು ತಿಳಿಯೋಣ. 

ಪುರುಷರಿಗೆ ಅಧಿಕ ರಕ್ತದೊತ್ತಡದ ಅಪಾಯ ಹೆಚ್ಚು!
ಮಹಿಳೆಯರಿಗಿಂತ ಪುರುಷರು ಅಧಿಕ ರಕ್ತದೊತ್ತಡದ ಸಮಸ್ಯೆಗೆ (Blood Pressure Problems) ಹೆಚ್ಚು ಒಳಗಾಗುತ್ತಾರೆ ಎಂದು ಹಲವು ವರದಿಗಳು ತಿಳಿಸಿವೆ. ಸಾಮಾನ್ಯವಾಗಿ ಯಾರಾದರೂ ತಲೆತಿರುಗುವಿಕೆ ಬಗ್ಗೆ ದೂರು ನೀಡಿದಾಗ ಕಡಿಮೆ ರಕ್ತದೊತ್ತಡದ ಅಂದರೆ ಲೋ ಬಿಪಿ ಸಂಕೇತವಾಗಿದೆ ಎನ್ನುತ್ತೇವೆ. ಇದಲ್ಲದೆ, ಯಾವುದೇ ವ್ಯಕ್ತಿಗೆ ಎದೆ ನೋವು ಕಾಣಿಸಿಕೊಂಡಾಗ, ಅದು ಅಧಿಕ ರಕ್ತದೊತ್ತಡದ ಲಕ್ಷಣವೂ ಆಗಿರಬಹುದು ಎನ್ನುತ್ತೇವೆ. ಹಾಗಿದ್ದರೆ, ವಯಸ್ಸಿಗೆ ಅನುಗುಣವಾಗಿ ರಕ್ತದೊತ್ತಡ ಯಾವ ವಯಸ್ಸಿನವರಿಗೆ ಎಷ್ಟಿರಬೇಕು?

ಇದನ್ನೂ ಓದಿ- Curd Cumin Combination: ಹುರಿದ ಜೀರಿಗೆಯೊಂದಿಗೆ ಮೊಸರು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ

ಪುರುಷರಲ್ಲಿ ರಕ್ತದೊತ್ತಡ ಎಷ್ಟಿರಬೇಕು ?
ಮಾಧ್ಯಮ ವರದಿಗಳ ಪ್ರಕಾರ, ವಯಸ್ಸಿಗೆ ಅನುಗುಣವಾಗಿ ರಕ್ತದೊತ್ತಡದಲ್ಲಿ (BP According To Age) ಬದಲಾವಣೆ ಇದೆ. ಪುರುಷರ ವಯಸ್ಸಿನ ಪ್ರಕಾರ, ರಕ್ತದೊತ್ತಡವು 120 ರಿಂದ 143 ರವರೆಗೆ ತಲುಪಬಹುದು. 21 ರಿಂದ 25 ನೇ ವಯಸ್ಸಿನವರಲ್ಲಿ, SBP 120.5 ಮಿಮೀ ಆಗಿರಬೇಕು. ಅದೇ ಸಮಯದಲ್ಲಿ, 25 ವರ್ಷಗಳ ನಂತರ 50 ವರ್ಷಗಳವರೆಗೆ  ರಕ್ತದೊತ್ತಡವು 115 ಇರಬೇಕು. ಇದಲ್ಲದೆ, ರಕ್ತದೊತ್ತಡವು 56 ರಿಂದ 61 ರ ವ್ಯಾಪ್ತಿಯಲ್ಲಿ 143 ರವರೆಗೆ ಇರಬೇಕು. 

ಇದನ್ನೂ ಓದಿ- Health Tips: ನಿಮ್ಮ ದೇಹದ ಈ ಭಾಗದಲ್ಲಿ ನೋವು ಇದೆಯೇ? ಇದು ಕಿಡ್ನಿ ವೈಫಲ್ಯದ ಲಕ್ಷಣವಾಗಿರಬಹುದು

ಮಹಿಳೆಯರಲ್ಲಿ ವಯಸ್ಸಿಗೆ ಅನುಗುಣವಾಗಿ ರಕ್ತದೊತ್ತಡ ಎಷ್ಟಿರಬೇಕು :
ಮಹಿಳೆಯರಿಗೆ 21 ರಿಂದ 25 ನೇ ವಯಸ್ಸಿನಲ್ಲಿ, ಎಸ್‌ಬಿಪಿ 115.5 ಮಿಮೀ ಆಗಿರಬೇಕು, ಆದರೆ 26 ರಿಂದ 50 ರಲ್ಲಿ, ಬಿಪಿ 124 ವರೆಗೆ ತಲುಪುತ್ತದೆ. ಇದಲ್ಲದೆ, 51 ರಿಂದ 61 ವರ್ಷಗಳವರೆಗೆ ಬಿಪಿ 130 ವರೆಗೆ ಇರಬೇಕು. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News