ಈ ಸಮಸ್ಯೆ ಇದ್ದವರು ಹೂಕೋಸು ಮುಟ್ಟಿಯೂ ನೋಡುವಂತಿಲ್ಲ!ಗಂಭೀರ ಕಾಯಿಲೆಗಳಿಗೆ ದೂಡಿ ಬಿಡುತ್ತದೆ ಕಾಲಿಫ್ಲವರ್

ಕೆಲವು ಸಮಸ್ಯೆ ಇದ್ದವರು ಹೂ ಕೋಸನ್ನು ಸೇವಿಸುವಂತಿಲ್ಲ. ಇದು ಅವರ ಆರೋಗ್ಯವನ್ನು ಬಿಗಡಾಯಿಸುವ ಸಾಧ್ಯತೆ ಇರುತ್ತದೆ.  

Written by - Ranjitha R K | Last Updated : Oct 28, 2024, 12:54 PM IST
  • ಗೋಬಿ ಮಂಚೂರಿಗಂತೂ ವರ್ಷವಿಡೀ ಬೇಡಿಕೆ ಇರುತ್ತದೆ.
  • ಇದನ್ನು ಮಕ್ಕಳಿಂದ ಮುದುಕರವರೆಗೆ ಬಹಳ ಇಷ್ಟಪಟ್ಟು ತಿನ್ನುತ್ತಾರೆ
  • ಹೂ ಕೋಸು ಸೇವಿಸುವುದರಿಂದ ಆಗುವ ಸಮಸ್ಯೆಗಳು
ಈ ಸಮಸ್ಯೆ ಇದ್ದವರು ಹೂಕೋಸು ಮುಟ್ಟಿಯೂ ನೋಡುವಂತಿಲ್ಲ!ಗಂಭೀರ ಕಾಯಿಲೆಗಳಿಗೆ ದೂಡಿ ಬಿಡುತ್ತದೆ ಕಾಲಿಫ್ಲವರ್   title=

ಬೆಂಗಳೂರು : ಚಳಿಗಾಲವಿರಲಿ, ಬೇಸಿಗೆಯಿರಲಿ ಹೂಕೋಸು ತಿನ್ನಲು ಇಷ್ಟಪಡದವರು  ಬಹಳ ಕಡಿಮೆ. ಗೋಬಿ ಮಂಚೂರಿಗಂತೂ ವರ್ಷವಿಡೀ ಬೇಡಿಕೆ ಇರುತ್ತದೆ. ಎಲ್ಲಾ ಋತುವಿನಲ್ಲಿಯೂ ಇದನ್ನು ಮಕ್ಕಳಿಂದ ಮುದುಕರವರೆಗೆ ಬಹಳ ಇಷ್ಟಪಟ್ಟು ತಿನ್ನುತ್ತಾರೆ. ಹೂಕೋಸು ದೇಹವನ್ನು ಆರೋಗ್ಯಕರವಾಗಿಸಲು ಸಹಾಯ ಮಾಡುವ ಪೋಷಕಾಂಶಗಳನ್ನು ಒಳಗೊಂಡಿದೆ.ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಬಿ ಯಂತಹ ಪೋಷಕಾಂಶಗಳು ಹೂಕೋಸಿನಲ್ಲಿ  ಕಂಡುಬರುತ್ತವೆ.ಆದರೆ ಕೆಲವು ಸಮಸ್ಯೆ ಇದ್ದವರು ಹೂ ಕೋಸನ್ನು ಸೇವಿಸುವಂತಿಲ್ಲ. ಇದು ಅವರ ಆರೋಗ್ಯವನ್ನು ಬಿಗಡಾಯಿಸುವ ಸಾಧ್ಯತೆ ಇರುತ್ತದೆ.

ಹೂ ಕೋಸು ಸೇವಿಸುವುದರಿಂದ ಆಗುವ ಸಮಸ್ಯೆಗಳು : 
ಹೊಟ್ಟೆ ಉಬ್ಬುವುದು : 

ಗ್ಯಾಸ್ ಮತ್ತು ಅಸಿಡಿಟಿ ಸಮಸ್ಯೆಯಿಂದ ಬಳಲುತ್ತಿರುವವರು ಹೂಕೋಸು ಸೇವನೆಯಿಂದ ದೂರವಿರಬೇಕು. ಹೂಕೋಸು ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತದೆ. ಇದು ಜೀರ್ಣಕಾರಿ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಹೂಕೋಸನ್ನು ಯಾವುದೇ ಮಾದರಿಯಲ್ಲಿ ತಿಂದರೂ ಗ್ಯಾಸ್ ಮತ್ತುಆಸಿಡಿಟಿ ಸಮಸ್ಯೆ ಉಂಟಾಗಬಹುದು.

ಇದನ್ನೂ ಓದಿ : ಮಧುಮೇಹಕ್ಕೆ ರಾಮಬಾಣ.. ಊಟಕ್ಕೂ ಮುನ್ನ ʼಈʼ ಹಣ್ಣು ತಿಂದ್ರೆ ಸಂಪೂರ್ಣ ನಿಯಂತ್ರಣದಲ್ಲಿರುತ್ತೆ ಬ್ಲಡ್‌ ಶುಗರ್! ಮತ್ತೆಂದೂ ಹೆಚ್ಚಾಗಲ್ಲ!!

ಥೈರಾಯ್ಡ್‌ ಇದ್ದಲ್ಲಿ ಹೂಕೋಸು ತಿನ್ನಬಾರದು : 
ನೀವು ಥೈರಾಯ್ಡ್ ರೋಗಿಗಳಾಗಿದ್ದರೆ ಹೂಕೋಸು ಸೇವಿಸುವುದನ್ನು ತಪ್ಪಿಸಬೇಕು.  ಹೂಕೋಸು ಅಯೋಡಿನ್ ಅನ್ನು ಬಳಸಿಕೊಳ್ಳುವ ಥೈರಾಯ್ಡ್ ಗ್ರಂಥಿಯ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ.ಇದರಿಂದಾಗಿ ಸಮಸ್ಯೆಗಳು ಹೆಚ್ಚಾಗುತ್ತವೆ. ಹೂಕೋಸಿನ ಅತಿಯಾದ ಸೇವನೆಯು T3 ಮತ್ತು T4 ಹಾರ್ಮೋನುಗಳ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ.

 ಕಿಡ್ನಿ ಸ್ಟೋನ್ ರೋಗಿಗಳು : 
ನೀವು ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿದ್ದರೆ ಹೂಕೋಸು ಸೇವನೆಯಿಂದ ದೂರವಿರಬೇಕು. ಹೂಕೋಸು ಸೇವನೆ ನಿಮಗೆ ಹಾನಿಕಾರಕವಾಗಿರುತ್ತದೆ.  ವಿಶೇಷವಾಗಿ ಪಿತ್ತಕೋಶ ಮತ್ತು ಮೂತ್ರಪಿಂಡದ ಕಲ್ಲುಗಳ ಸಮಸ್ಯೆ ಇದ್ದರೆ ಹೂಕೋಸುನ್ನು ಮುಟ್ಟಿಯೂ ನೋಡದಿದ್ದರೆ ಒಳ್ಳೆಯದು. ಹೂಕೋಸು ಕ್ಯಾಲ್ಸಿಯಂ ಅನ್ನು ಹೊಂದಿದ್ದು, ಕಲ್ಲುಗಳ ಸಮಸ್ಯೆಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ : ಮಧುಮೇಹಕ್ಕೆ ದಿವೌಷಧಿ ಈ ಎಲೆ.. ಬೆಳಗ್ಗೆ ಖಾಲಿ ಹೊಟ್ಟೆಗೆ ತಿಂದರೆ ಕಂಪ್ಲೀಟ್‌ ಕಂಟ್ರೋಲ್‌ ಆಗುವುದು ಬ್ಲಡ್‌ ಶುಗರ್‌ !

ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆ :
ನಿಮಗೆ ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆ ಇದ್ದರೆ ಹೂಕೋಸು ಸೇವಿಸದಿದ್ದರೆ ಒಳ್ಳೆಯದು. ಹೂಕೋಸು ಹೇರಳವಾಗಿ ಪೊಟ್ಯಾಸಿಯಮ್ ಅನ್ನು ಹೊಂದಿರುತ್ತದೆ.  ಇದು ದೇಹದಲ್ಲಿನ ರಕ್ತವನ್ನು ದಪ್ಪವಾಗಿಸುತ್ತದೆ ಮತ್ತು ಸಮಸ್ಯೆಯನ್ನು ಉಲ್ಬಣಗೊಳಿಸುತ್ತದೆ.ಆದ್ದರಿಂದ, ಹೂಕೋಸು ಸೇವನೆಯನ್ನು ಮಿತಿಗೊಳಿಸಿ ಅಥವಾ ತಿನ್ನಬೇಡಿ.

(ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News