ನಿಂಬೆಯಲ್ಲಿ ವಿಟಮಿನ್-ಸಿ ಜೊತೆಗೆ ಕ್ಯಾಲ್ಸಿಯಂ, ಪೊಟ್ಯಾಶಿಯಂ ಇತ್ಯಾದಿ ಅಂಶಗಳು ಅಡಗಿವೆ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಕೆಲವು ಆರೋಗ್ಯ ಸಮಸ್ಯೆಗಳಿರುವಾಗ ಇದನ್ನು ಸೇವಿಸಬಾರದು.
ಆಸಿಡಿಟಿ ಇದ್ದಾಗ ನಿಂಬೆ ಹಣ್ಣು ಮತ್ತಷ್ಟು ಹಾನಿ ಉಂಟು ಮಾಡಬಹುದು. ಈ ಸಮಯದಲ್ಲಿ ನಿಂಬೆ ಹಣ್ಣನ್ನು ಸೇವಿಸಬಾರದು.
ಐರನ್ ಮಾತ್ರೆ ತೆಗೆದುಕೊಳ್ಳುತ್ತಿದ್ದರೆ ಆ ಹೊತ್ತಿನಲ್ಲಿ ನಿಂಬೆ ಹಣ್ಣಿನ ಸೇವನೆ ಮಾಡಬಾರದು.
ನಿಂಬೆಯಲ್ಲಿ ಆಸಿಡ್ ಇರುತ್ತದೆ. ಬಾಯಿ ಹುಣ್ಣಿನ ಸಮಸ್ಯೆ ಇದ್ದಾಗ ತಪ್ಪಿಯೂ ನಿಂಬೆ ಹಣ್ಣು ಸೇವಿಸಬಾರದು.
ಹೊಟ್ಟೆ ಹುಣ್ಣಿನ ಸಮಯದಲ್ಲಿಯೂ ನಿಂಬೆ ಸೇವಿಸಬಾರದು. ಇದು ಅಲ್ಸರ್ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಬಹುದು.
ಹಲ್ಲು ನೋವು ಅಥವಾ ಸೆನ್ಸಿಟಿವಿಟಿಯಿಂದ ಬಳಲುತ್ತಿದ್ದರೆ ನಿಂಬೆ ಸೇವಿಸಬಾರದು. ಇದು ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸುತ್ತದೆ.
ನಿಂಬೆ ಅನೇಕ ರೋಗಗಳಲ್ಲಿ ಪ್ರಯೋಜನಕಾರಿಯಾಗಿದ್ದರೂ ಅತಿಯಾದ ನಿಂಬೆ ಸೇವನೆ ಹೊಟ್ಟೆ ಸೆಳೆತಕ್ಕೆ ಕಾರಣವಾಗುತ್ತದೆ.
ಹೆಚ್ಚು ನಿಂಬೆ ಸೇವನೆ ಗಂಟಲು ಹುಣ್ಣಿಗೂ ಕಾರಣವಾಗುತ್ತದೆ. ಹಾಗಾಗಿ ಗಂಟಲು ನೋವು ಟಾನ್ಸಿಲ್ ಸಮಸ್ಯೆ ಕಾಣಿಸಿಕೊಳ್ಳಬಹುದು.
ನೀವು ಕೂಡಾ ಹೆಚ್ಚು ನಿಂಬೆ ಸೇವಿಸುತ್ತಿದ್ದರೆ ಈ ರೋಗದ ಸಮಯದಲ್ಲಿ ಜಾಗರೂಕರಾಗಿರಿ.