Davanagere SBI bank: ಈ SBI ಬ್ಯಾಂಕ್ ಜನವಸತಿ ಕಡಿಮೆ ಇರುವ ಪ್ರದೇಶದಲ್ಲಿದೆ. SBI ಬ್ಯಾಂಕ್ ಸುತ್ತಮುತ್ತ ಸಾಕಷ್ಟು ಗಿಡಗಂಟಿಗಳು ಬೆಳೆದಿವೆ. ಖದೀಮರು ಸೋಮವಾರ ರಾತ್ರಿ ಬ್ಯಾಂಕಿನ ಕಿಟಕಿಯನ್ನು ಗ್ಯಾಸ್ ಕಟರ್ನಿಂದ ಕಟ್ ಮಾಡಿ ಒಳಗೆ ಪ್ರವೇಶಿಸಿದ್ದಾರೆ. ಬಳಿಕ ಲಾಕರ್ ಅನ್ನು ಸಹ ಗ್ಯಾಸ್ ಕಟರ್ನಿಂದ ಕಟ್ ಮಾಡಿ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾರೆ.
Viral Video: ಮೃತ ವಿದ್ಯಾರ್ಥಿನಿ ಜೆಇಇ ಪರೀಕ್ಷೆ ಬರೆದಿದ್ದು, ಪರೀಕ್ಷೆಯಲ್ಲಿ ತೇರ್ಗಡೆಯಾಗಿರಲಿಲ್ಲ. ಈ ಘಟನೆ ಶುಕ್ರವಾರ ನಡೆದಿದ್ದು, ಆತ್ಮಹತ್ಯೆಗೂ ಮುನ್ನ ಬಾಲಕಿ ಡೆತ್ನೋಟ್ ಸಹ ಬರೆದಿದ್ದಳು. ಪೊಲೀಸರು ಸೂಸೈಡ್ ನೋಟ್ ಅನ್ನು ವಶಪಡಿಸಿಕೊಂಡಿದ್ದಾರೆ.
ಬಾಲಕೃಷ್ಣ ಪೂಜಾರಿ ಮತ್ತು ಪತ್ನಿ ಪ್ರತಿಮಾ 17 ವರ್ಷದ ಹಿಂದೆ ಮದುವೆಯಾಗಿದ್ದು, ಎರಡು ಮಕ್ಕಳು ಸಹ ಇವೆ. ಪತಿ ಬಾಲಕೃಷ್ಣ ಕಾಲೇಜು ಕ್ಯಾಂಟೀನ್ ನಡೆಸುತ್ತಿದ್ದರು, ಪ್ರತಿಮಾ ಅಜೆಕಾರು ಜಂಕ್ಷನ್ನಲ್ಲಿ ಬ್ಯೂಟಿ ಪಾರ್ಲರ್ ಮಾಡಿಕೊಂಡಿದ್ದಳು. ಆದರೆ ಈ ದಂಪತಿ ಬಾಳಲ್ಲಿ ದಿಲೀಪ್ ಹೆಗ್ಡೆ ಎಂಟ್ರಿಯಾಗಿ ಬಿರುಗಾಳಿ ಎದ್ದಿತ್ತು.
Viral Video: ವಿದ್ಯಾರ್ಥಿನಿ ಜೊತೆಗೆ ಅಸಭ್ಯವಾಗಿ ವರ್ತಿಸಿರುವ ವಿಡಿಯೋ ವೈರಲ್ ಆದ ನಂತರ ಬಾಬಾ ಬಾಲಕ್ನಾಥ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಘಟನೆ ಬಗ್ಗೆ ವಿದ್ಯಾರ್ಥಿನಿಯು ಅತ್ಯಾಚಾರದ ಆರೋಪ ಹೊರಿಸಿದ್ದರಿಂದ ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.
SHOCKING NEWS: ರಿಯಲ್ ಎಸ್ಟೇಟ್ ಉದ್ಯಮಿ ಸೇರಿದಂತೆ ಅವರ ಮನೆಯರು ರೀನಾಳ ಮೇಲೆ ಅಪಾರ ನಂಬಿಕೆ ಇಟ್ಟಿದ್ದರು. ಆಕೆಯನ್ನು ತಮ್ಮ ಕುಟುಂಬದ ಸದಸ್ಯಳಂತೆ ನಡೆಸಿಕೊಂಡಿದ್ದರು. ಆಕೆಯ ಕಷ್ಟಗಳಿಗೂ ನೆರವು ನೀಡಿದ್ದರಂತೆ.
ಮನೆ ಮಂದಿ ಕಳೆದ ಸೋಮವಾರದಂದು ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ಇಂದು ಮಧ್ಯಾಹ್ನ ಬಂದು ನೋಡಿದಾಗ ಕಳ್ಳತನ ಕೃತ್ಯ ಬೆಳಕಿಗೆ ಬಂದಿದೆ. ಮನೆಯಲ್ಲಿ ಯಾರೂ ಇಲ್ಲದಿದ್ದನ್ನು ಗಮನಿಸಿ ಕಳ್ಳರು ಬಾಗಿಲು ಮೀಟಿ ಕೃತ್ಯ ಎಸಗಿದ್ದಾರೆ.
ತಂದೆಯ ಸಾವಿನ ಸುದ್ದಿ ತಿಳಿದು ಬೆಂಗಳೂರಿನಿಂದ ಬೆಳಗಾವಿಗೆ ಬಂದಿದ್ದ ಸಂತೋಷ ಪುತ್ರಿ ಸಂಜಾನಾ ಅಂತ್ಯಕ್ರಿಯೆ ಬಳಿಕ ಸಿಸಿ ಕ್ಯಾಮರಾ ಪುಟೇಜ್ ತೋರಿಸುವಂತೆ ತಾಯಿಗೆ ಕೆಳಿದ್ದಾಳೆ. ಆಗ ಉಮಾ ಈಗಷ್ಟೆ ಅಂತ್ಯಕ್ರಿಯೆ ಮುಗಿದಿದೆ, ಸ್ನಾನ ಮಾಡಿ ಬರೋಗು ಎಂದು ಪುತ್ರಿ ಸಂಜನಾಗೆ ಹೇಳಿದ್ದಳು... ನಂತರ ಆಗಿದ್ದೇನು..?..
Suicide Case: ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಸಾಹಿಲ್ ಕನ್ನಡಿಯ ಮೇಲೆ "ನಾನು ಈ ಜೀವನ ಮತ್ತು ದೇಹವನ್ನು ಸಾಕಷ್ಟು ಆನಂದಿಸಿದ್ದೇನೆ. ನಾನು ಮರುಪ್ರಾರಂಭಿಸಲು ಬಯಸುತ್ತೇನೆʼ ಅಂತಾ ಬರೆದುಕೊಂಡಿದ್ದಾನೆ.
Crime News: Pune Murder Case: ಅಪರಾಧ ನಡೆದ ರಾತ್ರಿ ಅನಿಲ್, ಆಕೆಯ ತಾಯಿ ಮತ್ತು ಆಕೆಯ ಪ್ರಿಯಕರ ಪ್ರಫುಲ್ ನಡುವೆ ಜಗಳವಾಗಿತ್ತು. ಕೋಪದ ಭರದಲ್ಲಿ ಪ್ರಫುಲ್ ಮತ್ತು ಸುಮಿತ್ರಾ ಸೇರಿಕೊಂಡು ಅನಿಲ್ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದರು.
Bengaluru Crime News: ಪತಿಯ ಆರ್ಥಿಕ ಸಂಕಷ್ಟದಿಂದ ಪತ್ನಿ ಮಮತಾ ಆತ್ಮಹತ್ಯೆಗೆ ನಿರ್ಧರಿಸಿದ್ದಾರೆ. ಮೊದಲಿಗೆ ತನ್ನ ಇಬ್ಬರು ಮಕ್ಕಳ ಕತ್ತು ಹಿಸುಕಿ ಕೊಂದು ಬಳಿಕ ತಾನು ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಗಂಡನಿಗೆ ಕರೆ ಮಾಡಿ ಮಮತಾ ಮಾತನಾಡಿದ್ದರಂತೆ.
ವಿನಯ್ ಕುಲಕರ್ಣಿ ದಾಖಲಿಸಿರುವ ಕೇಸ್ ಸಹ ಸಿಐಡಿಗೆ. ಶಾಸಕ ವಿನಯ್ ಕುಲಕರ್ಣಿ ವಿರುದ್ಧ ರೈತ ಮಹಿಳೆ ದೂರು. ವಿನಯ್ ವಿರುದ್ಧ ಜೀವ ಬೆದರಿಕೆ , ಅತ್ಯಾಚಾರ ದೂರು. ಬೆಂಗಳೂರಲ್ಲಿ ಅತ್ಯಾಚಾರ ಎಸಗಿದ್ದರು ಎಂದು ದೂರು.
Road accident in Bidar: ಜಗನ್ನಾಥ (35), ರೇಣುಕಾ (34), ವಿನೋದ್ ಕುಮಾರ್ (14) ಮೃತ ದುರ್ದೈವಿಗಳು ಎಂದು ತಿಳಿದುಬಂದಿದೆ. ಮೃತರು ತೆಲಂಗಾಣ ರಾಜ್ಯದ ಸಂಗಾರೆಡ್ಡಿ ಜಿಲ್ಲೆಯ ಗಣೇಶಪುರ ಗ್ರಾಮದವರು ಎಂದು ತಿಳಿದುಬಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.