7th Pay Commission: ದೀಪಾವಳಿಗೆ ತನ್ನ ನೌಕರರಿಗೆ ಭರ್ಜರಿ ಉಡುಗೊರೆ ಕೊಟ್ಟು ಆದೇಶ ಹೊರಡಿಸಿದ ಸರ್ಕಾರ

7th Pay Commission Update: ಇತೀಚೆಗಷ್ಟೇ ಡಿಎ ಮತ್ತು ಡಿಆರ್ ಹೆಚ್ಚಿಸಿ ಆದೇಶ ಹೊರಡಿಸಿದ್ದ ಕೇಂದ್ರ ಸರ್ಕಾರ ಇದೀಗ ತನ್ನ ನೌಕರರಿಗೆ ಮತ್ತೊಂದು ಬಂಬಾಟ್ ಸುದ್ದೀಯನ್ನು ಪ್ರಕಟಿಸಿದೆ. ಕೇಂದ್ರ ವಿತ್ತ ಸಚಿವಾಲಯ ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿ ಹಬ್ಬಕ್ಕೆ ಒಂದು ತಿಂಗಳ ವೇತನವನ್ನು ಆಡ್ಹಾಕ್  ಬೋನಸ್ ರೂಪದಲ್ಲಿ ನೀಡಲು ಅಧಿಕೃತ ಆದೇಶ ಹೊರಡಿಸಿದೆ. ಇತ್ತೀಚೆಗಷ್ಟೇ ಸರ್ಕಾರ ಈ ಕುರಿತು ಘೋಷಣೆಯನ್ನು ಮಾಡಿತ್ತು.  

Written by - Nitin Tabib | Last Updated : Oct 15, 2022, 01:40 PM IST
  • ನಮ್ಮ ಪಾಲುದಾರ ವೆಬ್‌ಸೈಟ್ Zee ಬ್ಯುಸಿನೆಸ್ ನಲ್ಲಿ ಪ್ರಕಟಗೊಂಡ ಪ್ರಕಾರ,
  • ಗ್ರೂಪ್ ಬಿ ಮತ್ತು ಗ್ರೂಪ್ ಸಿ ಯಲ್ಲಿ ಬರುವ ಗೆಜೆಟೆಡ್ ಅಲ್ಲದ ಕೇಂದ್ರ ಸರ್ಕಾರಿ ನೌಕರರಿಗೆ ಈ ಬೋನಸ್ ನೀಡಲಾಗುತ್ತಿದೆ.
  • ಇವರು ಯಾವುದೇ ಉತ್ಪಾದಕತೆ ಲಿಂಕ್ಡ್ ಬೋನಸ್ ಯೋಜನೆಯ ಅಡಿಯಲ್ಲಿ ಬರದ ಉದ್ಯೋಗಿಗಳಾಗಿದ್ದಾರೆ.
7th Pay Commission: ದೀಪಾವಳಿಗೆ ತನ್ನ ನೌಕರರಿಗೆ  ಭರ್ಜರಿ ಉಡುಗೊರೆ ಕೊಟ್ಟು ಆದೇಶ ಹೊರಡಿಸಿದ ಸರ್ಕಾರ title=
7th Pay Commission Update

NPL Bonus To Government Employees: ಕೇಂದ್ರ ಉದ್ಯೋಗಿಗಳಿಗೆ ಸಂತಸದ ಸುದ್ದಿಯಿದೆ. ಕೇಂದ್ರ ನೌಕರರಿಗೆ ಕೇಂದ್ರ ಸರ್ಕಾರ ಭರ್ಜರಿ ಗಿಫ್ಟ್ ನೀಡಿದೆ. ದೀಪಾವಳಿಯಂದು ನೌಕರರಿಗೆ ಬೋನಸ್ ನೀಡುವುದಾಗಿ ಸರ್ಕಾರ ಘೋಷಿಸಿದೆ. ಹಣಕಾಸು ಸಚಿವಾಲಯ ನೀಡಿದ ಮಾಹಿತಿಯ ಪ್ರಕಾರ, ಕೇಂದ್ರದ ಉದ್ಯೋಗಿಗಳಿಗೆ 30 ದಿನಗಳ ಸಂಬಳಕ್ಕೆ ಸಮಾನವಾದ ಉತ್ಪಾದಕತೆ ಆಧಾರಿತ ಬೋನಸ್ (ಆಡ್-ಹಾಕ್ ಬೋನಸ್) ನೀಡಲಾಗುವುದು. ಇದರಲ್ಲಿ ಕೇಂದ್ರ ಸರ್ಕಾರದ ಗ್ರೂಪ್ ಸಿ ಮತ್ತು ಗ್ರೂಪ್ ಬಿ ವರ್ಗದ ನೌಕರರು ಶಾಮೀಲಾಗಿದ್ದಾರೆ.

ಯಾವ ಉದ್ಯೋಗಿಗಳು ಈ ಪ್ರಯೋಜನ ಪಡೆಯುತ್ತಾರೆ?
ನಮ್ಮ ಪಾಲುದಾರ ವೆಬ್‌ಸೈಟ್ Zee ಬ್ಯುಸಿನೆಸ್ ನಲ್ಲಿ ಪ್ರಕಟಗೊಂಡ ಪ್ರಕಾರ, ಗ್ರೂಪ್ ಬಿ ಮತ್ತು ಗ್ರೂಪ್ ಸಿ ಯಲ್ಲಿ ಬರುವ ಗೆಜೆಟೆಡ್ ಅಲ್ಲದ ಕೇಂದ್ರ ಸರ್ಕಾರಿ ನೌಕರರಿಗೆ ಈ ಬೋನಸ್ ನೀಡಲಾಗುತ್ತಿದೆ. ಇವರು ಯಾವುದೇ ಉತ್ಪಾದಕತೆ ಲಿಂಕ್ಡ್ ಬೋನಸ್ ಯೋಜನೆಯ ಅಡಿಯಲ್ಲಿ ಬರದ ಉದ್ಯೋಗಿಗಳಾಗಿದ್ದಾರೆ. ಅಷ್ಟೇ ಅಲ್ಲ, ಕೇಂದ್ರೀಯ ಅರೆಸೇನಾ ಪಡೆಗಳ ಉದ್ಯೋಗಿಗಳಿಗೂ ಅಡ್-ಹಾಕ್ ಬೋನಸ್‌ನ ಲಾಭವನ್ನು ನೀಡಲಾಗುವುದು. ಇದಲ್ಲದೇ ಹಂಗಾಮಿ ಕಾರ್ಮಿಕರಿಗೂ ಸಹ ಇದರ ಲಾಭ ಸಿಗಲಿದೆ.

ಇದನ್ನೂ ಓದಿ-Amul Milk Price Hike: ಸದ್ದಿಲ್ಲದೇ ಹಾಲಿನ ದರ ಹೆಚ್ಚಿಸಿದ ಅಮುಲ್.!

ಆಡ್ಹಾಕ್ ಬೋನಸ್ ಹೇಗೆ ನಿರ್ಧರಿಸಲಾಗುತ್ತದೆ?
ಲೆಕ್ಕಾಚಾರದ ಸೀಲಿಂಗ್ ಪ್ರಕಾರ ಉದ್ಯೋಗಿಗಳ ಸರಾಸರಿ ವೇತನದ ಆಧಾರದ ಮೇಲೆ ಬೋನಸ್ ಅನ್ನು ನಿರ್ಧರಿಸಲಾಗುತ್ತದೆ ಎಂಬುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ. ಅಂದರೆ, 30 ದಿನಗಳ ಉದ್ಯೋಗಿಗಳ ಮಾಸಿಕ ಬೋನಸ್ ಸುಮಾರು ಒಂದು ತಿಂಗಳ ವೇತನಕ್ಕೆ ಸಮನಾಗಿರುತ್ತದೆ. ಉದ್ಯೋಗಿಗಳ ಬೋನಸ್ ಅನ್ನು ಹೇಗೆ ಸೇರಿಸಲಾಗುತ್ತದೆ ಎಂಬುದನ್ನು ನಾವು ಉದಾಹರಣೆಯೊಂದಿಗೆ ಅರ್ಥಮಾಡಿಕೊಳ್ಳಲು ಪ್ರಯತ್ನಿಸೋಣ ಬನ್ನಿ. ಓರ್ವ ಉದ್ಯೋಗಿ ರೂ 7000 ವೇತನ ಪಡೆಯುತ್ತಿದ್ದರೆ, ಲೆಕ್ಕಾಚಾರದ ಪ್ರಕಾರ, ಆತನಿಗೆ 7000 * 30 / 30.4 = ರೂ 6907.89 (ರೂ 6908) ಬೋನಸ್ ಸಿಗಲಿದೆ.

ಇದನ್ನೂ ಓದಿ-Reliance Jio ಬಳಕೆದಾರರಿಗೆ ಬಿಗ್‌ ಶಾಕ್! Free OTT ಸದಸ್ಯತ್ವ ನೀಡುತ್ತಿದ್ದ ಈ 12 ಪ್ಲಾನ್‌ಗಳು ಸ್ಥಗಿತ!

ಯಾವ ಉದ್ಯೋಗಿಗಳು ಎಷ್ಟು ಪ್ರಯೋಜನ ಪಡೆಯುತ್ತಾರೆ?
>> ಸರ್ಕಾರ ಹೊರಡಿಸಿರುವ ಆದೇಶದ ಪ್ರಕಾರ, 31 ಮಾರ್ಚ್ 2021 ರಂದು ಸೇವೆಯಲ್ಲಿರುವ ಕೇಂದ್ರ ಸರ್ಕಾರದ ನೌಕರರು ಮಾತ್ರ ಇದರ ಪ್ರಯೋಜನವನ್ನು ಪಡೆಯುತ್ತಾರೆ.
>> 2020-21ನೇ ಸಾಲಿನಲ್ಲಿ ಯಾವುದೇ ನೌಕರ ಕನಿಷ್ಠ ಆರು ತಿಂಗಳ ಕಾಲ ನಿರಂತರ ಸೇವೆಯಲ್ಲಿರಬೇಕು.
>> ಅಡ್ಹಾಕ್ ಆಧಾರದ ಮೇಲೆ ನೇಮಕಗೊಂಡ ತಾತ್ಕಾಲಿಕ ಉದ್ಯೋಗಿಗಳಿಗೂ ಈ ಬೋನಸ್ ಲಾಭ ಸಿಗಲಿದೆ, ಆದರೆ ಈ ಮಧ್ಯೆ ಅವರ ಸೇವೆಯಲ್ಲಿ ಯಾವುದೇ ಕಡಿತ ಇರಬಾರದು.
>> ಸೇವೆಯಿಂದ ಹೊರಗುಳಿದಿರುವ, ರಾಜೀನಾಮೆ ನೀಡಿದ ಅಥವಾ 31 ಮಾರ್ಚ್ 2022 ರಂದು ಅಥವಾ ಅದಕ್ಕೂ ಮೊದಲು ನಿವೃತ್ತರಾದ ಉದ್ಯೋಗಿಗಳನ್ನು ವಿಶೇಷ ಪ್ರಕರಣದ ಅಡಿ ಪರಿಗಣಿಸಲಾಗುವುದು.
>> ವೈದ್ಯಕೀಯ ಕಾರಣಗಳಿಗಾಗಿ ಮಾರ್ಚ್ 31 ರ ಮೊದಲು ಅಸಾಮಾನ್ಯವಾಗಿ ನಿವೃತ್ತಿ ಹೊಂದಿದ ಅಥವಾ ಮರಣ ಹೊಂದಿದವರಿಗೆ ತಾತ್ಕಾಲಿಕ ಬೋನಸ್ ನೀಡಲಾಗುತ್ತದೆ, ಆದರೆ ಆರ್ಥಿಕ ವರ್ಷದಲ್ಲಿ ಆರು ತಿಂಗಳ ಕಾಲ ನಿಯಮಿತ ಕರ್ತವ್ಯವನ್ನು ಪರಿಗಣಿಸಲಾಗುತ್ತದೆ.
>> ಸಂಬಂಧಪಟ್ಟ ಉದ್ಯೋಗಿಯ ನಿಯಮಿತ ಸೇವೆಯ ಹತ್ತಿರದ ಸಂಖ್ಯೆಯನ್ನು ಆಧರಿಸಿ 'ಪ್ರೊ ರಾಟಾ ಆಧಾರದ ಮೇಲೆ' ಅವರಿಗೆ ಬೋನಸ್ ಅನ್ನು ನಿಗದಿಪಡಿಸಲಾಗುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News