ನವದೆಹಲಿ: ಆನ್ಲೈನ್ನಲ್ಲಿ ಪಿಸ್ತೂಲಿನಿಂದ ಗುಂಡು ಹಾರಿಸುವುದನ್ನು ತೋರಿಸುವ ಟಿಕ್ಟಾಕ್ ವಿಡಿಯೋ ವೈರಲ್ ಆದ ನಂತರ ದೆಹಲಿ ಪೊಲೀಸರು ಇಂದು 32 ವರ್ಷದ ಫೈಜಾನ್ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಆಗಸ್ಟ್ 10-11ರ ಮಧ್ಯದ ರಾತ್ರಿ ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ವೀಡಿಯೊ ವೈರಲ್ ಆಗಿದ್ದು, ಇದರಲ್ಲಿ ಕೈಯಲ್ಲಿ ಆಯುಧ ಹಿಡಿದು ಗಾಳಿಯಲ್ಲಿ ಗುಂಡು ಹಾರಿಸುವುದನ್ನು ಕಾಣಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಈ ವೀಡಿಯೊವನ್ನು ಮೊದಲು ಟಿಕ್-ಟೋಕ್ನಲ್ಲಿ ಅಪ್ಲೋಡ್ ಮಾಡಲಾಯಿತು.ನಂತರ, ಈ ವೀಡಿಯೊ ವಿವಿಧ ಸಾಮಾಜಿಕ ಮಾಧ್ಯಮ ವೆಬ್ಸೈಟ್ಗಳಾದ ವಾಟ್ಸಾಪ್, ಫೇಸ್ಬುಕ್ ಇತ್ಯಾದಿಗಳಲ್ಲಿ ವೈರಲ್ ಆಗಿದೆ ಮತ್ತು ವೀಡಿಯೊವನ್ನು ಪರಿಶೀಲಿಸಿದ ನಂತರ ಚಾಂದನಿ ಮಹಲ್ ಸುಯಿವಾಲನ್ನಲ್ಲಿ ಸಾರ್ವಜನಿಕ ಬೀದಿ ಎನ್ನುವುದು ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಫೈಜಾನ್ ಅವರ ಜನ್ಮದಿನವಾಗಿದ್ದರಿಂದ ಅವರು ಹುಟ್ಟುಹಬ್ಬದಂದು ವಿಭಿನ್ನವಾಗಿ ಮಾಡಲು ಯೋಜಿಸಿದ್ದರು. ಆದ್ದರಿಂದ ಅವರು ಗಾಳಿಯಲ್ಲಿ ಗುಂಡು ಹಾರಿಸುವ ವೀಡಿಯೊವನ್ನು ಮಾಡಲು ನಿರ್ಧರಿಸಿದರು ಎನ್ನಲಾಗಿದೆ. ವೀಡಿಯೊ ರೆಕಾರ್ಡಿಂಗ್ ಮಾಡಲು ಬಳಸಿದ ಬಂದೂಕು ಮತ್ತು ಮೊಬೈಲ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.