Tanishka : 12ನೇ ವಯಸ್ಸಿಗೆ 12ನೇ ತರಗತಿ ಪಾಸ್ ಆಗಿ ಎಲ್ಲರಿಗೂ ಸ್ಪೂರ್ತಿಯಾದ ಬಾಲಕಿ

ತನಿಷ್ಕಾ ಅವರು ವಿಶ್ವವಿದ್ಯಾಲಯದ ತಕ್ಷಶಿಲಾ ಕ್ಯಾಂಪಸ್‌ನ (ತಕ್ಷಶಿಲಾ) ಸ್ಕೂಲ್ ಆಫ್ ಲೈಫ್ ಲಾಂಗ್ ಲರ್ನಿಂಗ್‌ನಲ್ಲಿ ಬಿಎ ಇನ್ ಸೈಕಾಲಜಿ (Psycology) ಯಲ್ಲಿ ಪ್ರವೇಶ ಪಡೆದರು. 

Written by - Zee Kannada News Desk | Last Updated : Feb 6, 2021, 11:36 AM IST
  • ಚಿಕ್ಕ ವಯಸ್ಸಿನಲ್ಲಿ ಅದ್ಭುತ ಸಾಧನೆಗೈದ ಮಧ್ಯಪ್ರದೇಶದ ತನೀಷ್ಕಾ
  • ತನ್ನ 13 ನೇ ವಯಸ್ಸಿನಲ್ಲಿ, ಬಿಎ ಪ್ರವೇಶ ಪಡೆದ ವಿದ್ಯಾರ್ಥಿ
  • ಅವರು 11 ನೇ ವಯಸ್ಸಿನಲ್ಲಿ 10 ಮತ್ತು 12 ನೇ ವಯಸ್ಸಿನಲ್ಲಿ 12 ನೇ ತರಗತಿ ಪೂರ್ಣಗೊಳಿಸಿರುವ ತನಿಷ್ಕಾ
Tanishka : 12ನೇ ವಯಸ್ಸಿಗೆ 12ನೇ ತರಗತಿ ಪಾಸ್ ಆಗಿ ಎಲ್ಲರಿಗೂ ಸ್ಪೂರ್ತಿಯಾದ ಬಾಲಕಿ  title=
13 year old tanishka took ba admission

ನವದೆಹಲಿ: ಯಾವುದೇ ಕೆಲಸಕ್ಕೆ ವಯಸ್ಸು ಒಂದು ವಿಷಯವೇ ಅಲ್ಲ ಎಂದು ಸಾಮಾನ್ಯವಾಗಿ ಹೇಳಿರುವುದನ್ನು ಎಲ್ಲರೂ ಕೇಳಿರಬಹುದು. ಅದು ನೂರಕ್ಕೆ ನೂರರಷ್ಟು ಸತ್ಯವಾದ ಮಾತು. ಅದಕ್ಕೆ ಉತ್ತಮ ನಿದರ್ಶನ ಎಂದರೆ ಮಧ್ಯಪ್ರದೇಶದ ತನಿಷ್ಕಾ ಎಂಬ ಬಾಲಕಿ. ಇಂದೋರ್‌ನ ತನೀಷ್ಕಾ ಡಿಎವಿವಿಯಲ್ಲಿ 13 ನೇ ವಯಸ್ಸಿನಲ್ಲಿ ಬಿಎ ವಿದ್ಯಾರ್ಥಿಯಾಗಿದ್ದಾರೆ. ಅವರು ತಮ್ಮ 11 ನೇ ವಯಸ್ಸಿನಲ್ಲಿ 10 ನೇ ತರಗತಿ ಪೂರ್ಣಗೊಳಿಸಿದ್ದಾರೆ. 12 ನೇ ವಯಸ್ಸಿನಲ್ಲಿ 12 ನೇ ತರಗತಿಯನ್ನೂ ಪೂರ್ಣಗೊಳಿಸಿರುವ ಈಕೆ ಏಷ್ಯಾ ಬುಕ್ ಆಫ್ ಪ್ರಶಸ್ತಿ ಪಡೆದಿದ್ದಾರೆ.

ಕರೋನಾದಿಂದ ನಿಧನರಾದ ತಂದೆ  :
ತನಿಷ್ಕಾ ಅವರು ವಿಶ್ವವಿದ್ಯಾಲಯದ ತಕ್ಷಶಿಲಾ ಕ್ಯಾಂಪಸ್‌ನ (ತಕ್ಷಶಿಲಾ) ಸ್ಕೂಲ್ ಆಫ್ ಲೈಫ್ ಲಾಂಗ್ ಲರ್ನಿಂಗ್‌ನಲ್ಲಿ ಸೈಕಾಲಜಿ (Psycology) ಯಲ್ಲಿ ಬಿಎ ಪ್ರವೇಶ ಪಡೆದಿದ್ದಾರೆ. ಅವಳು ತಾಯಿ ಅನುಭಾ ಜೊತೆ ವಾಸಿಸುತ್ತಾಳೆ. ಸ್ವಲ್ಪ ಸಮಯದ ಹಿಂದೆ ಅವರ ತಂದೆ ಕರೋನಾದಿಂದ ಮೃತಪಟ್ಟಿದ್ದಾರೆ. ಉಪಕುಲಪತಿ ಮತ್ತು ಉನ್ನತ ಶಿಕ್ಷಣ ಇಲಾಖೆಯ ವಿಶೇಷ ಅನುಮತಿಯೊಂದಿಗೆ ಈಕೆಯ ಪದವಿ ಪ್ರವೇಶ ಪ್ರಕ್ರಿಯೆ ಪೂರ್ಣಗೊಂಡಿದೆ  ಎಂದು ವರದಿಯಾಗಿದೆ.

ಕಣ್ಣಿಗೆ ಬಟ್ಟೆ ಕಟ್ಟಿ ಬರೆಯುವ ಸಾಮರ್ಥ್ಯ ಹೊಂದಿರುವ ತನಿಷ್ಕಾ :
ತನೀಷ್ಕಾ ಕಣ್ಣುಮುಚ್ಚಿ ಬರೆಯಬಹುದು ಮತ್ತು ಓದಬಹುದು ಎಂಬುದು ಆಕೆಗಿರುವ ಮತ್ತೊಂದು ವಿಶೇಷ ಸಾಮರ್ಥ್ಯವಾಗಿದೆ. ಅವರ ಗುಣಮಟ್ಟದ ದೃಷ್ಟಿಯಿಂದ, ಅವರು ಅಸಾಮಾನ್ಯ ವಿದ್ಯಾರ್ಥಿಯ ಸ್ಥಾನಮಾನವನ್ನೂ ಪಡೆದಿದ್ದಾರೆ. ತನೀಷ್ಕಾ ಎರಡೂವರೆ ವರ್ಷದಿಂದಲೂ ಓದುತ್ತಿದ್ದಾರೆ. ಈಕೆ 8 ನೇ ವಯಸ್ಸಿನಲ್ಲಿ 5 ನೇ ತರಗತಿ ಅಧ್ಯಯನ ಮಾಡಿದ್ದಾರೆ. ಇದರ ನಂತರ, ಮನೆ ಶಾಲಾ ಶಿಕ್ಷಣವನ್ನು ಪ್ರಾರಂಭಿಸಿದರು.

ಇದನ್ನೂ ಓದಿ - CBSE Board Exam 2021: CBSE ಹೊಸ ನಿಯಮ, ಈ ಪರೀಕ್ಷೆಯಲ್ಲಿ ಯಾರಿಗೂ ಕೂಡ Fail ಮಾಡಲಾಗುವುದಿಲ್ಲ

11 ನೇ ವಯಸ್ಸಿನಲ್ಲಿ 10 ನೇ ತರಗತಿ ಪಾಸ್ :
11 ನೇ ವಯಸ್ಸಿನಲ್ಲಿ ವಿಶೇಷ ಅನುಮತಿಯೊಂದಿಗೆ ತನೀಷ್ಕಾ 10 ನೇ ತರಗತಿಯಲ್ಲಿ (Class 10) ತನ್ನ ಖಾಸಗಿ ಫಾರ್ಮ್ ಅನ್ನು ಭರ್ತಿ ಮಾಡುವ ಮೂಲಕ ಮಾಲ್ವಾ ಕನ್ಯಾ ಶಾಲೆಯಲ್ಲಿ (Malwa Kanya School)  ಪ್ರಥಮ ದರ್ಜೆಯಲ್ಲಿ (1st Class) ಉತ್ತೀರ್ಣರಾದರು. ಇದರ ನಂತರ, ಖಾಸಗಿ ಫಾರ್ಮ್ ಅನ್ನು ಭರ್ತಿ ಮಾಡುವ ಮೂಲಕ 12 ನೇ ತರಗತಿ ಸಹ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು. ಆ ನಂತರ ಸ್ಥಳೀಯ ಸಂಸದ ಶಂಕರ್ ಲಾಲ್ವಾನಿ ಅವರ ಸಹಾಯದಿಂದ ಸರ್ಕಾರದಿಂದ ವಿಶೇಷ ಅನುಮತಿ ಪಡೆದ ನಂತರ ಅವರು ಡಿಎವಿವಿಯಲ್ಲಿ ಪ್ರವೇಶ ಪಡೆದರು.

ಇದನ್ನೂ ಓದಿ -  ರಾಜ್ಯದಲ್ಲಿ ಶೀಘ್ರವೇ 1 -8 ನೇ ತರಗತಿ ಆರಂಭ : ಶಿಕ್ಷಣ ಸಚಿವ ಸುರೇಶ್ ಕುಮಾರ್

ಮಗಳು ಉತ್ತಮ ಶಿಕ್ಷಣ ಪಡೆಯಬೇಕೆಂಬುದು ತಂದೆಯ ಕನಸಾಗಿತ್ತು :
ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು, ಉತ್ತಮ ಶಿಕ್ಷಣ ಪಡೆಯಬೇಕು ಎಂಬುದು ತನ್ನ ತಂದೆಯ ಕನಸು ಎಂದು ತನೀಷ್ಕಾ ತಿಳಿಸಿದ್ದಾರೆ. ನನ್ನ ತಂದೆ ಕೆಲವು ದಿನಗಳ ಹಿಂದೆ ಮಹಾಮಾರಿ ಕರೋನಾವೈರಸ್ (Coronavirus) ಗೆ ಬಲಿಯಾದರು. ಈಗ ನಾನು ನನ್ನ ತಂದೆ ಕನಸನ್ನು ಈಡೇರಿಸಲು ನಿರಂತರವಾಗಿ ಕೆಲಸ ಮಾಡುತ್ತಿದ್ದೇನೆ. ನಾನು ಬಿಎ ಎಲ್ ಎಲ್ ಬಿ  ಮಾಡಬೇಕೆಂದಿದ್ದೇನೆ. ಆದರೆ ನನ್ನ ವಯಸ್ಸಿನ ಕಾರಣ ನನಗೆ ಸದ್ಯಕ್ಕೆ ಎಲ್ ಎಲ್ ಬಿ ಮಾಡಲು ಅನುಮೋದನೆ ಸಿಕ್ಕಿಲ್ಲ ಎಂದವರು ವಿವರಿಸಿದ್ದಾರೆ.
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News