Punjab Assembly Elections 2022: ಪಂಜಾಬ್ ಚುನಾವಣೆಯ ಭವಿಷ್ಯ ನುಡಿದಿದ್ದ ಜೋಫ್ರಾ ಆರ್ಚರ್!

Punjab Assembly Elections 2022: ಪಂಜಾಬ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಬಹುಮತ ಗಳಿಸಿದೆ. ಏತನ್ಮಧ್ಯೆ, ವೇಗದ ಬೌಲರ್ ಜೋಫ್ರಾ ಆರ್ಚರ್ ಮಾಡಿದ ಟ್ವೀಟ್ ವೈರಲ್ ಆಗುತ್ತಿದೆ, ಇದನ್ನು ಜನರು ಚುನಾವಣಾ ಭವಿಷ್ಯಕ್ಕೆ ಲಿಂಕ್ ಮಾಡುವ ಮೂಲಕ ನೋಡುತ್ತಿದ್ದಾರೆ. ಇದನ್ನು ಸ್ವತಃ ಎಎಪಿ ರಿಟ್ವೀಟ್ ಮಾಡಿದೆ.

Written by - Yashaswini V | Last Updated : Mar 11, 2022, 07:08 AM IST
  • ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷದ ಐತಿಹಾಸಿಕ ಗೆಲುವು
  • ಈ ಗೆಲುವನ್ನು 'ಕ್ರಾಂತಿಕಾರಿ ಗೆಲುವು' ಎಂದು ಬಣ್ಣಿಸಿದ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್
  • ಏತನ್ಮಧ್ಯೆ, ವೇಗದ ಬೌಲರ್ ಜೋಫ್ರಾ ಆರ್ಚರ್ ಮಾಡಿದ ಟ್ವೀಟ್ ವೈರಲ್
Punjab Assembly Elections 2022: ಪಂಜಾಬ್ ಚುನಾವಣೆಯ ಭವಿಷ್ಯ ನುಡಿದಿದ್ದ ಜೋಫ್ರಾ ಆರ್ಚರ್! title=
AAP historical victory in Punjab elections; a tweet by fast bowler Jofra Archer is going viral

Punjab Assembly Elections 2022: ಪಂಜಾಬ್ ವಿಧಾನಸಭಾ ಚುನಾವಣೆ 2022 ರಲ್ಲಿ, ಆಮ್ ಆದ್ಮಿ ಪಕ್ಷವು 117 ರಲ್ಲಿ 92 ಸ್ಥಾನಗಳನ್ನು ಗೆಲ್ಲುವ ಮೂಲಕ ಐತಿಹಾಸಿಕ ಗೆಲುವು ಸಾಧಿಸಿದೆ. ಆಮ್ ಆದ್ಮಿ ಪಕ್ಷ ರಾಜ್ಯದಲ್ಲಿ ಮೊದಲ ಬಾರಿಗೆ ಸರ್ಕಾರ ರಚಿಸಲಿದ್ದು, ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಪಂಜಾಬ್‌ನಲ್ಲಿ ಇದು 'ಕ್ರಾಂತಿ' ಎಂದು ಬಣ್ಣಿಸಿದ್ದಾರೆ. ಈ ವಿಷಯ ರಾಜಕೀಯವಾಗಿದ್ದರೂ ಈಗ ಅದಕ್ಕೆ ಕ್ರಿಕೆಟಿಗನ ಹೆಸರೂ ಸೇರಿಕೊಂಡಿದೆ.

ಜೋಫ್ರಾ ಆರ್ಚರ್ ಅವರ ಟ್ವೀಟ್ ಅನ್ನು  ಹಂಚಿಕೊಂಡ ಆಮ್ ಆದ್ಮಿ ಪಕ್ಷ :
ಆಮ್ ಆದ್ಮಿ ಪಕ್ಷವು (Aam Aadmi Party) ಇಂಗ್ಲೆಂಡ್ ವೇಗದ ಬೌಲರ್ ಜೋಫ್ರಾ ಆರ್ಚರ್ ಅವರ ಟ್ವೀಟ್ ಅನ್ನು ಹಂಚಿಕೊಂಡಿದೆ , ಅದರಲ್ಲಿ ಆರ್ಚರ್ - 'ಸ್ವೀಪ್?!'...  ಎಂದು ಬರೆದಿದ್ದಾರೆ. ಇದನ್ನು ರೀಟ್ವೀಟ್ ಮಾಡುವ ಮೂಲಕ ಆಮ್ ಆದ್ಮಿ ಪಕ್ಷವು ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ 'ಹೌದು' #AAPSweepsPunjab ಎಂದು ಬರೆದಿದೆ. 

ಇದನ್ನೂ ಓದಿ- Punjab Election Result 2022: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ ಪುಟ್ಟ ಭಗವಂತ ಮಾನ್‌ನ ಫೋಟೋ!

ಪಂಜಾಬ್ ಚುನಾವಣೆಗೆ ಸಂಬಂಧಿಸಿದಂತೆ ಜೋಫ್ರಾ ಆರ್ಚರ್ ಅವರ ಭವಿಷ್ಯವಾಣಿ:
ಇದೀಗ ಪಂಜಾಬ್ ಚುನಾವಣೆಗೆ ಸಂಬಂಧಿಸಿದಂತೆ ಜೋಫ್ರಾ ಆರ್ಚರ್ (Jofra Archer) ಅವರ ಭವಿಷ್ಯವಾಣಿ ಎಂದು ಅಭಿಮಾನಿಗಳು ಅರ್ಥಮಾಡಿಕೊಳ್ಳುತ್ತಿದ್ದಾರೆ. ಆರ್ಚರ್ ಅವರ ಈ ಟ್ವೀಟ್‌ನಿಂದ ಎಲ್ಲರೂ ಶಾಕ್ ಆಗಿದ್ದಾರೆ. ಇದಕ್ಕೂ ಮೊದಲು, ಆರ್ಚರ್‌ನ ಕೆಲವು ಟ್ವೀಟ್‌ಗಳು ವೈರಲ್ ಆಗಿದ್ದು, ಇದು ಭವಿಷ್ಯವಾಣಿಯೊಂದಿಗೆ ಲಿಂಕ್ ಆಗಿರುವುದು ಕಂಡುಬಂದಿದೆ.

ಪಂಜಾಬ್‌ನಲ್ಲಿ ಭಗವಂತ್ ಮಾನ್ ಗೆಲುವು ದಾಖಲಿಸಿದರು:
ರಾಜ್ಯದಲ್ಲಿ ನಡೆದ ಚುನಾವಣೆಯಲ್ಲಿ ಗೆದ್ದ ಪ್ರಮುಖರ ಪೈಕಿ ಎಎಪಿಯ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ (Bhagwant Mann) ಗೆಲುವು ಸಾಧಿಸಿದ್ದಾರೆ. ಮತ್ತೊಂದೆಡೆ, ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಚಮ್ಕೌರ್ ಸಾಹಿಬ್ ಮತ್ತು ಭದೌರ್ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಪ್ರಕಾಶ್ ಸಿಂಗ್ ಬಾದಲ್, ಅಮರಿಂದರ್ ಸಿಂಗ್ ಮತ್ತು ರಾಜಿಂದರ್ ಕೌರ್ ಭಟ್ಟಾಲ್ ಕೂಡ ಸೋತಿದ್ದಾರೆ. ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು, ಹಿರಿಯ ಅಕಾಲಿ ನಾಯಕ ಬಿಕ್ರಮ್ ಸಿಂಗ್ ಮಜಿಥಿಯಾ ಕೂಡ ಈ ಚುನಾವಣೆಯಲ್ಲಿ ನಿರಾಸೆ ಅನುಭವಿಸಿದ್ದಾರೆ.

ಇದನ್ನೂ ಓದಿ- ಶೀಘ್ರದಲ್ಲೇ ಆಮ್ ಆದ್ಮಿ ಪಕ್ಷಕ್ಕೆ ರಾಷ್ಟ್ರೀಯ ಪಕ್ಷದ ಸ್ಥಾನಮಾನ..!

ಪಂಜಾಬ್ 2017 ರಲ್ಲಿ 77 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್:
ಪಂಜಾಬ್‌ನಲ್ಲಿ 2017 ರ ವಿಧಾನಸಭಾ ಚುನಾವಣೆಯಲ್ಲಿ, ಕಾಂಗ್ರೆಸ್ 77 ಸ್ಥಾನಗಳನ್ನು ಗೆದ್ದು 10 ವರ್ಷಗಳ ಅಕಾಲಿದಳ-ಬಿಜೆಪಿ ಸಮ್ಮಿಶ್ರ ಸರ್ಕಾರವನ್ನು ಹೊರಹಾಕಿತು. ಆ ಚುನಾವಣೆಯಲ್ಲಿ ಎಎಪಿ 20 ಸ್ಥಾನಗಳನ್ನು ಪಡೆದಿದ್ದರೆ, ಅಕಾಲಿದಳ-ಬಿಜೆಪಿ ತನ್ನ ಖಾತೆಯಲ್ಲಿ 8 ಸ್ಥಾನಗಳನ್ನು ಹೊಂದಿದ್ದವು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News