ನವದೆಹಲಿ: ಕೇಜ್ರಿವಾಲ್ ಭಯೋತ್ಪಾದಕನಲ್ಲ ಎನ್ನುವುದನ್ನು ಜನ ಸಾಬೀತುಪಡಿಸಿದ್ದಾರೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷವು ಭರ್ಜರಿ ಗೆಲುವು ಸಾಧಿಸಿರುವ ಬೆನ್ನಲ್ಲೇ ಕೇಜ್ರಿವಾಲ್ ಅವರ ಈ ಹೇಳಿಕೆ ಬಂದಿದೆ.
'ದೇಶವನ್ನು ಮುಂದೆ ಸಾಗದಂತೆ ತಡೆಯಲು ಬಯಸುವ ದೊಡ್ಡ ಶಕ್ತಿಗಳಿವೆ, ಅದಕ್ಕಾಗಿ ಪಂಜಾಬ್ (Punjab) ನಲ್ಲಿ ಷಡ್ಯಂತ್ರಗಳಿದ್ದವು. ಎಲ್ಲರೂ ಎಎಪಿ ಮೇಲೆ ಗುಂಪುಗೂಡಿದರು, ಅಂತಿಮವಾಗಿ, ಅವರೆಲ್ಲರೂ ಕೇಜ್ರಿವಾಲ್ ಭಯೋತ್ಪಾದಕ ಎಂದು ಹೇಳಿದರು.ಈ ಫಲಿತಾಂಶಗಳ ಮೂಲಕ ದೇಶದ ಜನರು ಕೇಜ್ರಿವಾಲ್ ಭಯೋತ್ಪಾದಕರಲ್ಲ ಎನ್ನುವುದನ್ನು ಸಾಬೀತುಪಡಿಸಿದ್ದಾರೆ.ಈ ದೇಶವನ್ನು ಲೂಟಿ ಮಾಡುವವರು ಭಯೋತ್ಪಾದಕರು' ಎಂದು ಅವರು ಹೇಳಿದರು.
'ಆಮ್ ಆದ್ಮಿ ಪಕ್ಷವು ಕೇವಲ ಪಕ್ಷಕ್ಕಿಂತ ಹೆಚ್ಚಾಗಿ ಅದೊಂದು ಕ್ರಾಂತಿಯಾಗಿದೆ, ಹಾಗಾಗಿ ಇದು ಬದಲಾವಣೆಯ ಸಮಯ, ಆದ್ದರಿಂದ ನಾನು ನಿಮ್ಮೆಲ್ಲರನ್ನು ಎಎಪಿಗೆ ಸೇರಲು ಒತ್ತಾಯಿಸುತ್ತೇನೆ.ಎಎಪಿ ಕೇವಲ ಒಂದು ಪಕ್ಷವಲ್ಲ. ಇದು ಕ್ರಾಂತಿಯ ಹೆಸರು" ಎಂದು ಅವರು ಹೇಳಿದರು.
ಇದನ್ನೂ ಓದಿ: Arvind Kejriwal : ಮೊಬೈಲ್ ರಿಪೇರಿ ಮಾಡಿದವನು ಸಿಎಂ ಚನ್ನಿಯನ್ನು ಸೋಲಿಸಿದ : ಸಿಎಂ ಕೇಜ್ರಿವಾಲ್
'ನನ್ನನ್ನು ಟಿವಿಯಲ್ಲಿ ನೋಡುತ್ತಿರುವವರು ಯಾರೇ ಆಗಲಿ, ನಿಮಗೆ ಎಲ್ಲಾ ಅನ್ಯಾಯದ ಬಗ್ಗೆ ಕೋಪ ಬರಬೇಕು. ಆದ್ದರಿಂದ ನೀವು ಆಪ್ ಗೆ ಸೇರಿಕೊಳ್ಳಿ.. ಮೊದಲು ದೆಹಲಿಯಲ್ಲಿ ಕ್ರಾಂತಿಯಾಯಿತು, ನಂತರ ಪಂಜಾಬ್‌ನಲ್ಲಿ ಮತ್ತೊಂದು ಕ್ರಾಂತಿಯಾಗಿದೆ, ಈಗ ಅದು ಇನ್ನ್ಮುಂದೆ ದೇಶದೆಲ್ಲೆಡೆ ಹರಡುತ್ತದೆ." ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
'ಆಮ್ ಆದ್ಮಿ (ಸಾಮಾನ್ಯ ವ್ಯಕ್ತಿ) ಚರಂಜಿತ್ ಸಿಂಗ್ ಚನ್ನಿ, ನವಜೋತ್ ಸಿಧು, ಅಮರಿಂದರ್ ಸಿಂಗ್, ಬಿಕ್ರಮ್ ಮಜಿಥಿಯಾ ಅವರನ್ನು ಸೋಲಿಸಿದ್ದಾರೆ...ಸಾಮಾನ್ಯ ಜನರನ್ನು ಅಸಮಾಧಾನಗೊಳಿಸಬೇಡಿ, ಅವರು ಅತ್ಯಂತ ಶಕ್ತಿಶಾಲಿಗಳಿಗೆ ಸಹ ಬಾಗಿಲು ತೋರಿಸುತ್ತಾರೆ" ಎಂದು ಅವರು ಹೇಳಿದರು. ಪಂಜಾಬ್ ನಲ್ಲಿ ಇಬ್ಬರು ಅಪರಿಚಿತ ಎಎಪಿ ಅಭ್ಯರ್ಥಿಗಳು ಚನ್ನಿ, ಸಿಧು ಮತ್ತು ಮಜಿಥಿಯಾ ಅವರನ್ನು ಸೋಲಿಸಿದ್ದಾರೆ.
ಇದನ್ನೂ ಓದಿ: Arvind Kejriwal : ನಾನು ವಿಶ್ವದ ಅತ್ಯಂತ ಸ್ವೀಟ್ ಭಯೋತ್ಪಾದಕ : ಸಿಎಂ ಕೇಜ್ರಿವಾಲ್
"ಕಳೆದ 75 ವರ್ಷಗಳಲ್ಲಿ ಈ ಪಕ್ಷಗಳು ಬ್ರಿಟಿಷ್ ವ್ಯವಸ್ಥೆಯನ್ನು ಜೀವಂತವಾಗಿಟ್ಟು, ದೇಶದ ಜನರನ್ನು ಬಡವರು ಮತ್ತು ವಂಚಿತರನ್ನಾಗಿ ಮಾಡಿರುವುದು ದುಃಖಕರವಾಗಿದೆ.ಎಎಪಿ ಈ ವ್ಯವಸ್ಥೆಯನ್ನು ಬದಲಾಯಿಸಿದೆ.ನಾವು ಪ್ರಾಮಾಣಿಕ ರಾಜಕೀಯವನ್ನು ಪ್ರಾರಂಭಿಸಿದ್ದೇವೆ" ಎಂದು ಕೇಜ್ರಿವಾಲ್ ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.