ನವದೆಹಲಿ: ಹೂಸ್ಟನ್ ನಲ್ಲಿ ನಡೆದ ಹೌಡಿ ಮೋದಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಭಾರತದಲ್ಲಿ ಎಲ್ಲವು ಚೆನ್ನಾಗಿದೆ ಎಂದು ಹೇಳಿದ್ದರು. ವಿಶೇಷವೆಂದರೆ ಭಾರತ ಮೇ ಸಬ್ ಅಚ್ಚಾ ಹೈ ಎನ್ನುವ ಹೇಳಿಕೆಯನ್ನು ಅವರು ಎಂಟು ಭಾಷೆಗಳಲ್ಲಿ ಹೇಳಿದ್ದರು.
ಈಗ ಪ್ರಧಾನಿ ಮೋದಿ ಹೇಳಿಕೆಯನ್ನು ವಿರೋಧಿಸಿ ಟ್ವೀಟ್ ಮಾಡಿರುವ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರು 'ಭಾರತ್ ಮೇ ಸಬ್ ಅಚಾ ಹೈ. ನಿರುದ್ಯೋಗ, ಅಸ್ತಿತ್ವದಲ್ಲಿರುವ ಉದ್ಯೋಗಗಳ ನಷ್ಟ, ಕಡಿಮೆ ವೇತನ, ಜನಸಮೂಹ ಹಿಂಸೆ, ಕಾಶ್ಮೀರದಲ್ಲಿ ಬೀಗ ಹಾಕುವುದು ಮತ್ತು ಪ್ರತಿಪಕ್ಷದ ನಾಯಕರನ್ನು ಜೈಲಿಗೆ ಎಸೆಯುವುದು ಹೊರತುಪಡಿಸಿ 'ಎಂದು ಟ್ವೀಟ್ ಮಾಡಿದ್ದಾರೆ.
Bharat mai sab achha hai.
Except for unemployment, loss of existing jobs, lower wages, mob violence, lockdown in Kashmir and throwing Opposition leaders in prison.
— P. Chidambaram (@PChidambaram_IN) September 23, 2019
ಪ್ರಧಾನಿ ಮೋದಿ ಭಾನುವಾರದಂದು ಭಾರತೀಯ-ಅಮೇರಿಕನ್ ರನ್ನು ಉದ್ದೇಶಿಸಿ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಮಾತನಾಡಿದ್ದರು. ವಿಶೇಷವೆಂದರೆ ಸುಮಾರು 50 ಸಾವಿರಕ್ಕೂ ಅಧಿಕ ಜನರನ್ನೊಳಗೊಂಡ ಈ ಕಾರ್ಯಕ್ರಮಕ್ಕೆ ಡೊನಾಲ್ಡ್ ಟ್ರಂಪ್ ವಿಶೇಷ ಆಹ್ವಾನಿತರಾಗಿದ್ದರು.
ಸೋಮವಾರದಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ದೆಹಲಿಯ ತಿಹಾರ್ ಜೈಲಿಗೆ ಭೇಟಿ ನೀಡಿ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರನ್ನು ಭೇಟಿ ಮಾಡಿದ್ದಾರೆ. ಐಎನ್ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 5 ರಿಂದ ಬಂಧಿತರಾಗಿದ್ದಾರೆ. ಮಾಜಿ ಸಚಿವ ಚಿದಂಬರ್ ಜೈಲಿನಲ್ಲಿದ್ದರೂ ಕೂಡ ಸರ್ಕಾರದ ನೀತಿಗಳನ್ನು ಟ್ವೀಟ್ ಮೂಲಕ ನಿರಂತರವಾಗಿ ಟಿಕಿಸುತ್ತಿದ್ದಾರೆ. ಆದರೆ ಅವರು ಈ ಟ್ವಿಟ್ಟರ್ ಖಾತೆಯನ್ನು ಅವರ ಕುಟುಂಬ ಸದಸ್ಯರು ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.