ಇಂಧನ ಬೆಲೆ 50 ರೂ.ಗೆ ಇಳಿಯಬೇಕಾದರೆ ಬಿಜೆಪಿಯನ್ನು ಸಂಪೂರ್ಣವಾಗಿ ಸೋಲಿಸಬೇಕು: ಸಂಜಯ್ ರಾವತ್

ಅಬಕಾರಿ ಸುಂಕವನ್ನು ಕಡಿತಗೊಳಿಸುವ ಕೇಂದ್ರದ ನಿರ್ಧಾರದ ನಂತರ, ಅನೇಕ ರಾಜ್ಯಗಳು ವಿಶೇಷವಾಗಿ ಬಿಜೆಪಿ ಆಡಳಿತವಿರುವ ರಾಜ್ಯಗಳು ಸಹ ಇಂಧನಗಳ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್) ಕಡಿತಗೊಳಿಸಿದವು.

Written by - Puttaraj K Alur | Last Updated : Nov 5, 2021, 08:11 AM IST
  • ಇಂಧನ ಬೆಲೆಯನ್ನು 50 ರೂ.ಗೆ ಇಳಿಸಲು ಬಿಜೆಪಿಯನ್ನು ಸಂಪೂರ್ಣವಾಗಿ ಸೋಲಿಸಬೇಕು
  • ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಶಿವಸೇನಾ ಸಂಸದ ಸಂಜಯ್ ರಾವತ್ ವಾಗ್ದಾಳಿ
  • ಇಂಧನ ಬೆಲೆಯನ್ನು 100ರೂ.ಗೆ ಏರದಂತೆ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ ಎಂದ ಶಿವಸೇನಾ ಎಂಪಿ
ಇಂಧನ ಬೆಲೆ 50 ರೂ.ಗೆ ಇಳಿಯಬೇಕಾದರೆ ಬಿಜೆಪಿಯನ್ನು ಸಂಪೂರ್ಣವಾಗಿ ಸೋಲಿಸಬೇಕು: ಸಂಜಯ್ ರಾವತ್ title=
ಕೇಂದ್ರದ ವಿರುದ್ಧ ಸಂಜಯ್ ರಾವತ್ ಆಕ್ರೋಶ

ಮುಂಬೈ: ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರುವ ಜನಸಾಮಾನ್ಯರಿಗೆ ಕೊಂಚ ರಿಲೀಫ್ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್(Petrol and Diesel Price) ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್ ಗೆ ಕ್ರಮವಾಗಿ 5 ರೂ. ಮತ್ತು 10 ರೂ.ನಷ್ಟು ಕಡಿತಗೊಳಿಸಿದೆ. ಇದನ್ನು ಬಿಜೆಪಿಯ ಪ್ರಮುಖ ನಾಯಕರು ದೀಪಾವಳಿ ಹಬ್ಬಕ್ಕೆ ದೇಶದ ಜನರಿಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೀಡಿರುವ ಗಿಫ್ಟ್ ಎಂದು ಸಂಭ್ರಮಾಚರಣೆ ಮಾಡಿದ್ದಾರೆ. ಇದರ ಬೆನಲ್ಲೇ ಶಿವಸೇನಾ ಪಕ್ಷದ ಸಂಸದ ಸಂಜಯ್ ರಾವತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂಧನ ಬೆಲೆಯನ್ನು 50 ರೂ.ಗೆ ಇಳಿಸಲು ಬಿಜೆಪಿಯನ್ನು ಸಂಪೂರ್ಣವಾಗಿ ಸೋಲಿಸಬೇಕು ಎಂದು ಸಂಜಯ್ ರಾವತ್(Sanjay Raut) ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ದೇಶದ ಜನರಿಗೆ ಹೊರೆಯಾಗಿರುವ ಇಂಧನ ಬೆಲೆಯನ್ನು 100ರೂ.ಗೆ ಏರದಂತೆ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ ಅಂತಾ ಹೇಳಿದ್ದಾರೆ. ದೇಶದಲ್ಲಿ ಕೆಲ ದಿನಗಳಿಂದ ನಿಂತರವಾಗಿ ತೈಲಬೆಲೆ ಏರಿಕೆಯಾಗುತ್ತಿದ್ದು, ಪೆಟ್ರೋಲ್ ಬೆಲೆ 100 ರೂ.ಗಿಂತಲೂ ಅಧಿಕವಾಗಿದೆ.

ಇದನ್ನೂ ಓದಿ: Amarinder Singh : 'ನನ್ನನ್ನು ಪದಚ್ಯುತಗೊಳಿಸಲು ಮಧ್ಯರಾತ್ರಿ ಸಂಚು': 7 ಪುಟಗಳ ಪತ್ರದಲ್ಲಿ ಸೋನಿಯಾ ಗಾಂಧಿ ವಿರುದ್ಧ ಅಮರಿಂದರ್ ಸಿಂಗ್ ವಾಗ್ದಾಳಿ

ಅಗತ್ಯ ವಸ್ತುಗಳ ಜೊತೆಗೆ ಪೆಟ್ರೋಲ್-ಡೀಸೆಲ್ ಬೆಲೆ(Petrol & Diesel Price) ಗಗನಮುಖಿಯಾಗಿದ್ದರಿಂದ ದೇಶದ ಜನರು ಪರದಾಡುವಂತಾಗಿದೆ. ಹೀಗಾಗಿ ಕೇಂದ್ರದ ವಿರುದ್ಧ ಸಂಜಯ್ ರಾವತ್ ಹರಿಹಾಯ್ದಿದ್ದಾರೆ. ಪೆಟ್ರೋಲ್ ಬೆಲೆಯಲ್ಲಿ 5 ರೂ. ಕಡಿತ ಮಾಡಿರುವುದರಿಂದ ಯಾವುದೇ ಉದ್ದೇಶ  ಸಾಧಿಸಿದಂತಲ್ಲ. ಇದನ್ನು ಕನಿಷ್ಠ 25ಕ್ಕೆ ರೂ.ಗೆ, ತದನಂತರ 50 ರೂ.ಗೆ ಇಳಿಸಬೇಕು ಅಂತಾ ಅವರು ಆಗ್ರಹಿಸಿದ್ದಾರೆ.

ಇತ್ತೀಚೆಗೆ ನಡೆದ ಕೆಲವು ಉಪಚುನಾವಣೆಯಲ್ಲಿ ಜನರು ಬಿಜೆಪಿ(BJP)ಯನ್ನು ಸೋಲಿಸಿದ ನಂತರ ಕೇಂದ್ರ ಸರ್ಕಾರ ಪೆಟ್ರೋಲ್ ಬೆಲೆಯಲ್ಲಿ 5 ರೂ. ಕಡಿತ ಮಾಡಿದೆ. ಇದನ್ನು 50 ರೂ.ಗೆ ಇಳಿಸಲು ಬಿಜೆಪಿಯನ್ನು ಸಂಪೂರ್ಣವಾಗಿ ಸೋಲಿಸಬೇಕು ಅಂತಾ ಹೇಳಿದ್ದಾರೆ. ದೇಶದ ಜನರು ಸಾಲ ಪಡೆದು ದೀಪಾವಳಿ ಹಬ್ಬವನ್ನು ಆಚರಿಸಬೇಕಾಗಿದೆ. ಹಣದುಬ್ಬರ ಕಾರಣದಿಂದ ಹಬ್ಬದ ವಾತವಾರಣವೇ ಇಲ್ಲದಂತಾಗಿದೆ ಎಂದು ಅವರು ಪ್ರಧಾನಿ ಮೋದಿಯವರನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.  

ಇದನ್ನೂ ಓದಿ: ದೀಪಾವಳಿಗೂ ಮುನ್ನ ಸಿಎಂ ಕೇಜ್ರಿವಾಲ್ ಭರ್ಜರಿ ಗಿಫ್ಟ್, ದೆಹಲಿ ನಿವಾಸಿಗಳಿಗೆ ಆಗಲಿದೆ ಲಾಭ

ಅಬಕಾರಿ ಸುಂಕ(Excise Duty)ವನ್ನು ಕಡಿತಗೊಳಿಸುವ ಕೇಂದ್ರದ ನಿರ್ಧಾರದ ನಂತರ, ಅನೇಕ ರಾಜ್ಯಗಳು ವಿಶೇಷವಾಗಿ ಬಿಜೆಪಿ ಆಡಳಿತವಿರುವ ರಾಜ್ಯಗಳು ಸಹ ಇಂಧನಗಳ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್) ಕಡಿತಗೊಳಿಸಿದವು. ಅಕ್ಟೋಬರ್ 30ರಂದು ನಡೆದ ಉಪಚುನಾವಣೆಯಲ್ಲಿ ಹಿಮಾಚಲ ಪ್ರದೇಶದ ಎಲ್ಲಾ 3 ವಿಧಾನಸಭಾ ಸ್ಥಾನಗಳು ಮತ್ತು ಉತ್ತರ ರಾಜ್ಯದ ಮಂಡಿ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಕಳೆದುಕೊಂಡಿತು. ಮಹಾರಾಷ್ಟ್ರದ ದೆಲ್ಗೂರ್ ವಿಧಾನಸಭಾ ಉಪಚುನಾವಣೆ ಮತ್ತು ನೆರೆಯ ದಾದ್ರಾ ಮತ್ತು ನಗರ್ ಹವೇಲಿ ಲೋಕಸಭಾ ಸ್ಥಾನದ ಉಪಚುನಾವಣೆಯನ್ನೂ ಗೆಲ್ಲಲು ಬಿಜೆಪಿ ವಿಫಲವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News