ಹೈದ್ರಾಬಾದ್ ಎನ್ಕೌಂಟರ್ ಪ್ರಶ್ನಿಸಿದ BJP ಮಹಿಳಾ ಸಂಸದೆ

ಕಾರ್ಯಾಚರಣೆಯನ್ನು ಖಂಡಿಸಿರುವ ಮೇನಕಾ ಗಾಂಧಿ, “ಹೈದ್ರಾಬಾದ್ ನಲ್ಲಿ ನಡೆದಿದ್ದು ದೇಶದ ದೃಷ್ಟಿಯಿಂದ ಭಯಾನಕವಾಗಿದೆ" ಎಂದಿದ್ದಾರೆ.

Last Updated : Dec 6, 2019, 02:26 PM IST
ಹೈದ್ರಾಬಾದ್ ಎನ್ಕೌಂಟರ್ ಪ್ರಶ್ನಿಸಿದ BJP ಮಹಿಳಾ ಸಂಸದೆ title=
Photo courtesy: ANI

ನವದೆಹಲಿ:ಹೈದ್ರಾಬಾದ್ ನಲ್ಲಿ ಮಹಿಳಾ ಪಶುವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಬಳಿಕ ಆಕೆಯ ದೇಹವನ್ನು ಸುಟ್ಟು ಹಾಕಿದ ನಾಲ್ವರು ಆರೋಪಿಗಳನ್ನು ಇಂದು ಬೆಳಗ್ಗೆ ಪೊಲೀಸರು ಎನ್ಕೌಂಟರ್ ನಡೆಸುವ ಮೂಲಕ ಹೊಡೆದುರುಳಿಸಿದ್ದಾರೆ. ಪೊಲೀಸರು ನಡೆಸಿದ ಈ ಕಾರ್ಯಾಚರಣೆಯನ್ನು ಭಾರತೀಯ ಜನತಾಪಕ್ಷದ ಸಂಸದೆ ಮತ್ತು ಮಾಜಿ ಕೇಂದ್ರ ಸಚಿವೆಯಾಗಿರುವ ಮೇನಕಾ ಗಾಂಧಿ ಪ್ರಶ್ನಿಸಿದ್ದಾರೆ.

ಈ ಕಾರ್ಯಾಚರಣೆಯನ್ನು ಖಂಡಿಸಿರುವ ಮೇನಕಾ ಗಾಂಧಿ, “ಹೈದ್ರಾಬಾದ್ ನಲ್ಲಿ ನಡೆದಿದ್ದು ದೇಶದ ದೃಷ್ಟಿಯಿಂದ ಭಯಾನಕವಾಗಿದೆ. ಕೇವಲ ನೀವು ಬಯಸಿದ್ದೀರಿ ಎಂಬ ಕಾರಣಕ್ಕಾಗಿ ಜನರನ್ನು ಕೊಲ್ಲಲು ಸಾಧ್ಯವಿಲ್ಲ. ನೀವು ಕಾನೂನನ್ನು ನಿಮ್ಮ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ. ಹೇಗೂ ನ್ಯಾಯಾಲಯ ಅವರಿಗೆ ಮರಣ ದಂಡನೆ ಶಿಕ್ಷೆ ವಿಧಿಸುತ್ತಿತ್ತು. ಒಂದು ವೇಳೆ ಬಂದೂಕುಗಳಿಂದ ನ್ಯಾಯ ದೊರೆತರೆ ಈ ದೇಶದಲ್ಲಿ ನ್ಯಾಯಾಲಯ ಮತ್ತು ಪೊಲೀಸರ ಅವಶ್ಯಕತೆ ಏನು"? ಎಂದು ಮೇನಕಾ ಪ್ರಶ್ನಿಸಿದ್ದಾರೆ.

Trending News