ನವದೆಹಲಿ : ತಮಿಳುನಾಡಿನಾದ್ಯಂತ ಸಭ್ರಮದಿಂದ ಆಚರಿಸಲಾಗುತ್ತದೆ. ಪೊಂಗಲ್ ಹಿನ್ನೆಲೆಯಲ್ಲಿ ತಮಿಳುನಾಡಿನ ವಿವಿಧೆಡೆ ಸಾಂಪ್ರದಾಯಿಕ ಹಬ್ಬಗಳಾದ ಜಲ್ಲಿಕಟ್ಟು (Jallikattu), ಗೂಳಿಕಾಳಗ, ಸ್ಪರ್ಧೆಗಳು ನಡೆಯುತ್ತವೆ. ಕೊರೊನಾ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ, ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಜಲ್ಲಿಕಟ್ಟು ಮತ್ತು ಗೂಳಿ ಓಟದ ಸ್ಪರ್ಧೆಗಳನ್ನು ನಿಷೇಧಿಸಲಾಗಿತ್ತು.
ತಮಿಳುನಾಡಿನಾದ್ಯಂತ ಸಂಕ್ರಾತಿ (Sankranti) ಹಿನ್ನೆಲೆಯಲ್ಲಿ ಗೂಳಿ ಕಾಳಗದ ಹಬ್ಬ, ಎತ್ತಿನ ಗಾಡಿ ಓಡಿಸುವ ಸ್ಪರ್ಧೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಪ್ರತಿ ವರ್ಷದಂತೆ ಕಳೆದ ಬಾರಿ ಕೂಡಾ, ರಾಜ್ಯದಲ್ಲಿ ಎತ್ತಿನಗಾಡಿ ಓಡಿಸುವ (Buffalo race) ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯ ವೇಳೆ, ಎತ್ತೊಂದು ಹೆದ್ದಾರಿಯಲ್ಲಿಯೇ ಸೇಡು ತೀರಿಸಿಕೊಂಡ ವಿಡಿಯೋ ಇದೀಗ ವೈರಲ್ (Viral video) ಆಗುತ್ತಿದೆ.
ಇದನ್ನೂ ಓದಿ : Viral Video: ಪುಷ್ಪ ಸಿನಿಮಾದ ‘ಸಾಮಿ-ಸಾಮಿ’ ಹಾಡಿಗೆ ತಾಂಜಾನಿಯಾ ಯುವಕನ ಅದ್ಭುತ ನೃತ್ಯ..!
ಎತ್ತಿನ ಬಂಡಿಯಲ್ಲಿ ಕುಳಿತಿರುವವರು, ಮಿಂಚಿನ ವೇಗದಲ್ಲಿ ಎತ್ತುಗಳನ್ನು ಓಡಿಸುತ್ತಿರುವುದನ್ನು ವಿಡಿಯೋದಲ್ಲಿ (Animal vieo) ಕಾಣಬಹುದು. ಅಲ್ಲದೆ, ಎತ್ತು ವೇಗವಾಗಿ ಓಡುವಂತೆ ಮಾಡಲು, ಎತ್ತಿಗೆ ಆಗಾಗ ಹೊಡೆಯುತ್ತಿರುವ ದೃಶ್ಯ ಕೂಡಾ ವಿಡಿಯೋದಲ್ಲಿ ಕಾಣಿಸುತ್ತದೆ. ಗಾಡಿಯ ಮುಂದೆ ಮತ್ತು ಹಿಂದೆ ದ್ವಿಚಕ್ರ ವಾಹನಗಳನ್ನು ಓಡಿಸುವ ಯುವಕರು ಸಹ ಜೋರಾಗಿ ಶಬ್ದ ಮಾಡಿಕೊಂಡು ಎತ್ತುಗಳನ್ನು ಹುರಿದುಂಬಿಸುತ್ತಿರುವುದು ಕಂಡು ಬರುತ್ತದೆ. ಹೀಗೆ ಎತ್ತಿನ ಬಂಡಿ ಸಾಗುತ್ತಿದ್ದಂತೆಯೇ, ನೋಡ ನೋಡುತ್ತಿದ್ದಂತೆಯೇ ಎತ್ತು ಸವಾರರ ಮೇಲೆ ಸೇಡು ತೀರಿಸಿಕೊಂಡ ಘಟನೆ ನಡೆದಿದೆ.
The buffalo took a perfect revenge, such people shouldn’t be called human. pic.twitter.com/6o1n3LQdQ7
— Singh Varun (@singhvarun) May 23, 2020
ಹೆದ್ದಾರಿಯಲ್ಲಿ ವೇಗವಾಗಿ ಓಡುವ ಎತ್ತು, ಉದ್ದೇಶಪೂರ್ವಕವಾಗಿ ರಸ್ತೆಯ ಡಿವೈಡರ್ ಗೆ ಹೊಡೆದು ತಪ್ಪಿಸಿಕೊಳ್ಳುತ್ತದೆ. ಎತ್ತಿನ ಗಾಡಿಯ ಚಕ್ರಗಳು ಡಿವೈಡರ್ ಗೆ ಡಿಕ್ಕಿ ಹೊಡೆದಿದ್ದರಿಂದ ಗಾಡಿಯಲ್ಲಿದ್ದವರೆಲ್ಲ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ನೆಲಕ್ಕುರುಳಿದ್ದಾರೆ. ಸ್ಪರ್ಧೆಯ ಹಿನ್ನೆಲೆಯಲ್ಲಿ ದೊಡ್ಡ ವಾಹನಗಳು ಯಾವುದು ರಸ್ತೆಗಿಳಿಯದ ಕಾರಣ, ಯಾವುದೇ ಅನಾಹುತ ಸಂಭವಿಸಿಲ್ಲ. ತನ್ನನ್ನು ಹಿಂಸಿಸಿರುವವರ ವಿರುದ್ದ ಈ ಎತ್ತುಗಳು ಮಾತ್ರ, ಸರಿಯಾಗಿಯೇ ಪಾಠ ಕಲಿಸಿದೆ.
ಕಳೆದ ವರ್ಷವೇ ವಿಡಿಯೋ ರಿಲೀಸ್ ಆಗಿದ್ದರೂ, ಈ ವರ್ಷವೂ ಪೊಂಗಲ್ ವೇಳೆ ಈ ವಿಡಿಯೋ ವೈರಲ್ (video viral) ಆಗಿದೆ.
ಇದನ್ನೂ ಓದಿ : Viral Video: ಪಾಪ್ ಸಿಂಗರ್ ಕೆನ್ನೆ ಕಚ್ಚಿದ ಹಾವು!, ಭಯಾನಕ ದೃಶ್ಯ ಹೇಗಿದೆ ನೋಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.