ಕಾಲ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದವನಿಗೆ 3.5 ಕೋಟಿ ರೂ. ತೆರಿಗೆ ನೋಟಿಸ್...!

ಪ್ರಸ್ತುತ ಪಂಜಾಬ್‌ನ ಕಾಲ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿರುವ ಮಧ್ಯಪ್ರದೇಶದ ಭಿಂದ್ ಜಿಲ್ಲೆಯ ವ್ಯಕ್ತಿಯೊಬ್ಬರು ಆದಾಯ ತೆರಿಗೆ ಇಲಾಖೆಯಯಿಂದ 3.49 ಕೋಟಿ ರೂ, ತೆರಿಗೆ ನೋಟಿಸ್ ಕಳಿಸಲಾಗಿದೆ. 2011-12ರಲ್ಲಿ 132 ಕೋಟಿ ರೂ. ವಹಿವಾಟು ನಡೆಸಿದ ಹಿನ್ನಲೆಯಲ್ಲಿ ಅವರಿಗೆ 3.49 ಕೋಟಿ ರೂ, ತೆರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎನ್ನಲಾಗಿದೆ.

Last Updated : Jan 16, 2020, 07:39 PM IST
ಕಾಲ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದವನಿಗೆ 3.5 ಕೋಟಿ ರೂ. ತೆರಿಗೆ ನೋಟಿಸ್...!  title=
Photo courtesy: ANI

ನವದೆಹಲಿ: ಪ್ರಸ್ತುತ ಪಂಜಾಬ್‌ನ ಕಾಲ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿರುವ ಮಧ್ಯಪ್ರದೇಶದ ಭಿಂದ್ ಜಿಲ್ಲೆಯ ವ್ಯಕ್ತಿಯೊಬ್ಬರು ಆದಾಯ ತೆರಿಗೆ ಇಲಾಖೆಯಯಿಂದ 3.49 ಕೋಟಿ ರೂ, ತೆರಿಗೆ ನೋಟಿಸ್ ಕಳಿಸಲಾಗಿದೆ. 2011-12ರಲ್ಲಿ 132 ಕೋಟಿ ರೂ. ವಹಿವಾಟು ನಡೆಸಿದ ಹಿನ್ನಲೆಯಲ್ಲಿ ಅವರಿಗೆ 3.49 ಕೋಟಿ ರೂ, ತೆರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎನ್ನಲಾಗಿದೆ.

ಲುಧಿಯಾನದಲ್ಲಿ ಬಿಪಿಓ ಕಂಪನಿಯೊಂದರಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಕೆಲಸ ಮಾಡುವ ರವಿ ಗುಪ್ತಾ, ಕಳೆದ ತಿಂಗಳು ನೀಡಿರುವ ನೋಟಿಸ್‌ನಲ್ಲಿ ಮುಂಬೈನಲ್ಲಿ ತೆರೆಯಲಾದ ಬ್ಯಾಂಕ್ ಖಾತೆಯಲ್ಲಿ ಮಾಡಿದ 132 ಕೋಟಿ ರೂ.ಗಳ ವಹಿವಾಟುಗಳನ್ನು ವಿವರಿಸಲು ಐಟಿ ಇಲಾಖೆ ಕೇಳಿದೆ ಎಂದು ಹೇಳಿದರು. ಗುಪ್ತಾ ಅವರು 2011-12ರಲ್ಲಿ ಇಂದೋರ್‌ನ ಬಿಪಿಓವೊಂದರಲ್ಲಿ ಕೆಲಸ ಮಾಡಿದರು, ಅವರಿಗೆ ವಾರ್ಷಿಕ 60,000 ರೂ.ರೂ ಆದಾಯವಿದೆ ಎನ್ನಲಾಗಿದೆ.

ಈ ಕುರಿತಾಗಿ ಪ್ರತಿಕ್ರಿಯಿಸಿರುವ ಅವರು ಕೆಲವು ಮೋಸಗಾರರು ತಮ್ಮ ಪ್ಯಾನ್ ಬಳಸಿ ಬ್ಯಾಂಕ್ ಖಾತೆ ತೆರೆದಿರಬಹುದು ಎಂದು ಅವರು ಹೇಳಿದ್ದಾರೆ, ಆದರೆ ಅದರ ಬಗ್ಗೆ ಅವರಿಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಅವರು ತಿಳಿಸಿದ್ದಾರೆ.

"ಗ್ವಾಲಿಯರ್‌ನ ಐ-ಟಿ ಕಚೇರಿ ಡಿಸೆಂಬರ್ 17 (2019) ರಂದು ನನಗೆ ನೋಟಿಸ್ ನೀಡಿದೆ, ಅದರಲ್ಲಿ ಜನವರಿ 17ರೊಳಗೆ 3.49 ಕೋಟಿ ರೂ.ಗಳ ದಂಡವನ್ನು ಪಾವತಿಸಲು ಹೇಳಿದೆ.ಈ ನೋಟೀಸ್ ನನಗೆ ಆಘಾತವನ್ನುಂಟು ಮಾಡಿದೆ' ಎಂದು ಗುಪ್ತಾ ಗುರುವಾರ ಹೇಳಿದ್ದಾರೆ.ವಹಿವಾಟಿನ ಬಗ್ಗೆ ತನಗೆ ತಿಳಿದಿಲ್ಲ, ಗ್ವಾಲಿಯರ್‌ನಲ್ಲಿನ ಆದಾಯ ತೆರಿಗೆ ಅಧಿಕಾರಿಗಳೊಂದಿಗೆ ಅವರು ಈ ವಿಷಯವನ್ನು ಎತ್ತಿದ್ದರೂ, ಅವರು ಕೇಳಲು ಸಿದ್ಧರಿಲ್ಲ ಎಂದು ಅವರು ಹೇಳಿದರು.

Trending News