ನವದೆಹಲಿ: ಮಾಜಿ ಕ್ರಿಕೆಟಿಗ ಮತ್ತು ಪಂಜಾಬ್ ಸಚಿವ ನವಜೋತ್ ಸಿಂಗ್ ದಕ್ಷಿಣ ಭಾರತಕ್ಕಿಂತ ಪಾಕಿಸ್ತಾನವೇ ಉತ್ತಮ ಎಂದು ಹೇಳುವ ಮೂಲಕ ಹೊಸ ವಿವಾದ ಹುಟ್ಟು ಹಾಕಿದ್ದಾರೆ.
ಕಸೌಲಿ ಸಾಹಿತ್ಯಗೋಷ್ಠಿಯೊಂದರಲ್ಲಿ ಭಾಗವಹಿಸಿ ಪಂಜಾಬ್ ಮತ್ತು ಪಾಕಿಸ್ತಾನದ ನಡವಿನ ಸಾಮ್ಯತೆಯ ಕುರಿತಾಗಿ ಮಾತನಾಡುತ್ತಾ ಎರಡು ಪ್ರದೇಶಗಳಲ್ಲಿನ ಸಂಸ್ಕೃತಿ ಎಂದು ಒಂದೇ ಎಂದು ತಿಳಿಸಿದರು.
''ನಾನು ತಮಿಳುನಾಡಿಗೆ ಹೋದಾಗ ಅಲ್ಲಿನ ಭಾಷೆಯೇ ನನಗೆ ಅರ್ಥವಾಗುವುದಿಲ್ಲ. ಇನ್ನು ಅಲ್ಲಿನ ತಿಂಡಿ-ತಿನಿಸು ಮೊದಲೇ ಇಷ್ಟವಾಗುವುದಿಲ್ಲ. ಅವುಗಳನ್ನು ಧೀರ್ಘ ಕಾಲ ಸೇವಿಸುವುದು ಕೂಡ ಕಷ್ಟ. ಅಲ್ಲಿನ ಸಂಸ್ಕೃತಿಯೇ ಸಂಪೂರ್ಣ ಭಿನ್ನವಾಗಿರುತ್ತದೆ . ಆದರೆ ಅದೇ ಪಾಕಿಸ್ತಾನಕ್ಕೆ ಹೋದರೆ ಇಂತಹ ಯಾವುದೇ ಸಮಸ್ಯೆ ಇರುವುದಿಲ್ಲ . ಅವರು ಪಂಜಾಬಿ ಮತ್ತು ಇಂಗ್ಲಿಷ್ ಮಾತನಾಡುತ್ತಾರೆ ಆ ಮೂಲಕ ಅವರಿಗೆ ನಾನು ಹೆಚ್ಚು ಹೋಲಿಕೆ ಮಾಡಬಹುದು ಎಂದು ಸಿಧು ತಿಳಿಸಿದ್ದಾರೆ.
ಸಚಿವ ಸಿಧು ಅವರ ಹೇಳಿಕೆ ಖಂಡಿಸಿರುವ ಶಿರೋಮಣಿ ಅಕಾಲಿದಳ ವಕ್ತಾರ ದಲ್ಜಿತ್ ಸಿಂಗ್ " ಸಚಿವರಾಗಿ ಸಿಧು ತಮ್ಮ ಹೇಳಿಕೆಯನ್ನು ನೀಡುವಾಗ ಎಚ್ಚರಿಕೆ ವಹಿಸಬೇಕು ಇನ್ನೊಬ್ಬರನ್ನು ಹೊಗಳುವ ಬರದಲ್ಲಿ ತಮ್ಮ ದೇಶವನ್ನು ಕೀಳಾಗಿ ಕಾರಣಬಾರದು" ಎಂದು ಅವರು ತಿಳಿಸಿದ್ದಾರೆ.