2021 ರಲ್ಲಿ ಹಿಂದುಳಿದ ಜಾತಿಗಳ ಗಣತಿಗೆ ಮುಂದಾದ ಸರ್ಕಾರ!

ಜನಗಣತಿ 2021 ಮೊದಲಬಾರಿಗೆ ಹಿಂದುಳಿದ ಜಾತಿಗಳ (ಒಬಿಸಿ) ಡೇಟಾವನ್ನು ಸಂಗ್ರಹಿಸುವುದಾಗಿ ಗೃಹ ಸಚಿವಾಲಯ ಶುಕ್ರವಾರ ಘೋಷಿಸಿದೆ. 

Last Updated : Aug 31, 2018, 05:26 PM IST
2021 ರಲ್ಲಿ ಹಿಂದುಳಿದ ಜಾತಿಗಳ ಗಣತಿಗೆ ಮುಂದಾದ ಸರ್ಕಾರ! title=

ನವದೆಹಲಿ: ಜನಗಣತಿ 2021 ಮೊದಲಬಾರಿಗೆ ಹಿಂದುಳಿದ ಜಾತಿಗಳ (ಒಬಿಸಿ) ಡೇಟಾವನ್ನು ಸಂಗ್ರಹಿಸುವುದಾಗಿ ಗೃಹ ಸಚಿವಾಲಯ ಶುಕ್ರವಾರ ಘೋಷಿಸಿದೆ. ಜನಗಣತಿ 2021ನ್ನು ನಡೆಸಿದ ನಂತರ  ಮೂರು ವರ್ಷಗಳಲ್ಲಿ ಅದನ್ನು ಅಂತಿಮಗೊಳಿಸಲಾಗುತ್ತದೆ ಎಂದು ಹೇಳಲಾಗಿದೆ. ಈ ಹಿಂದೆ ಏಳು ಮತ್ತು ಎಂಟು ವರ್ಷಗಳಲ್ಲಿ ಅಂತಿಮಗೊಳಿಸಲಾಗುತಿತ್ತು ಎಂದು ಗೃಹ ಸಚಿವಾಲಯದ ವಕ್ತಾರರು ಪಿಟಿಐಗೆ ತಿಳಿಸಿದ್ದಾರೆ.

ಈ ಘೋಷಣೆ ಪ್ರಮುಖವಾಗಿ ಗೃಹ ಸಚಿವ ರಾಜನಾಥ್ ಸಿಂಗ್ ಅವರು 2021ರ ಜನಗಣತಿ ನೀಲ ನಕ್ಷೆ ಕುರಿತಾಗಿ ಚರ್ಚಿಸಿದ ನಂತರ ಬಂದಿದೆ. ಪ್ರಸ್ತುತ, ಸಂಪೂರ್ಣ ಡೇಟಾವನ್ನು ಬಿಡುಗಡೆ ಮಾಡಲು ಏಳರಿಂದ ಎಂಟು ವರ್ಷಗಳು ಬೇಕಾಗುತ್ತದೆ.ಸುಮಾರು 25 ಲಕ್ಷ ಜನರನ್ನು ಈ ಕಾರ್ಯದಲ್ಲಿ ಬಳಸಿಕೊಳ್ಳಲಾಗುತ್ತದೆ. 

ಜನಗಣತಿ 2021ರಲ್ಲಿ ಮನೆ ಗಣಿತಿಯ ಸಮಯದಲ್ಲಿ ನಕ್ಷೆಗಳು ಮತ್ತು ಜಿಯೋ-ರೆಫರೆನ್ಸಿಂಗ್ ಬಳಕೆ ಸಹ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ.ನಾಗರಿಕ ನೋಂದಣಿ ವ್ಯವಸ್ಥೆಯಲ್ಲಿ ಸುಧಾರಣೆ ಅಗತ್ಯ, ವಿಶೇಷವಾಗಿ ಜನನ ಮತ್ತು ದೂರದ ಪ್ರದೇಶಗಳಲ್ಲಿ ಸಾವುಗಳ ನೋಂದಣಿ ಮತ್ತು ಶಿಶು ಮರಣ ಪ್ರಮಾಣ,ತಾಯಿಯ ಮರಣ ಪ್ರಮಾಣ ಮತ್ತು ಫಲವತ್ತತೆ ದರಗಳಂತಹ ಅಂದಾಜು ಮಾಹಿತಿಗಾಗಿ ಮಾದರಿ ನೋಂದಣಿ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವನ್ನು ಸಚಿವರು ತಿಳಿಸಿದ್ದಾರೆ.

Trending News