ನವದೆಹಲಿ: ಆಂಧ್ರಪ್ರದೇಶ ಮುಖ್ಯಮಂತ್ರಿ ಮತ್ತು ತೆಲುಗು ದೇಶಂ ನ ನಾಯಕ ಚಂದ್ರಬಾಬು ನಾಯ್ಡು ಈಗ ಮೋದಿ ಸರ್ಕಾರಕ್ಕೆ ಸೆಡ್ಡು ಹೊಡೆಯಲು ಪ್ರಾದೇಶಿಕ ಪಕ್ಷಗಳ ನಾಯಕರಿಗೆ ಮೊರೆ ಹೋಗಿದ್ದಾರೆ.
ಆ ಮೂಲಕ ಕೇಂದ್ರ ಸರ್ಕಾರದ ವಿರುದ್ದದ ಚಾಟಿ ಬಿಸಿದ್ದಾರೆ. ನಾಯ್ಡು ಈಗ ಎಲ್ಲ ಪ್ರಾದೇಶಿಕ ಪಕ್ಷಗಳ ನಾಯಕರಿಗೆ ಪತ್ರವನ್ನು ಬರೆದಿದ್ದು ಆಂದ್ರಪ್ರದೇಶಕ್ಕಾಗಿರುವ ಅನ್ಯಾಯವನ್ನು ಸರಿ ಪಡಿಸಲು ಈ ಎಲ್ಲ ಪಕ್ಷಗಳ ಸಹಕಾರ ಮತ್ತು ಬೆಂಬಲವನ್ನು ಕೇಳಿದ್ದಾರೆ.
ಮಾರ್ಚ ತಿಂಗಳಲ್ಲಿ ತೆಲಗು ದೇಶಂ ಪಕ್ಷವು ಆಂದ್ರಪ್ರದೇಶಕ್ಕೆ ವಿಶೇಷ ಆರ್ಥಿಕ ಸ್ಥಾನಮಾನದ ವಿಚಾರದಲ್ಲಿ ಕೇಂದ್ರ ಸರ್ಕಾರವು ವಿಳಂಭ ತೋರುತ್ತಿರುವುದನ್ನು ಖಂಡಿಸಿ ಎನ್ಡಿಎ ಮೈತ್ರಿಕೂಟದಿಂದ ಹೊರಬಂದಿದ್ದರು.ಅಂದಿನಿಂದಲೂ ನಾಯ್ಡು ಈಗ ತೃತೀಯ ರಂಗದ ನಾಯಕರ ಬೆಂಬಲವನ್ನು ನಿರೀಕ್ಷಿಸಿದ್ದಾರೆ.
ಚಂದ್ರಬಾಬು ನಾಯ್ಡು ಅವರು ಕೇಂದ್ರ ಸರ್ಕಾರವು ಆಂದ್ರಪ್ರದೇಶದಲ್ಲಿ ವೈಎಸ್ಆರ್ಸಿ ಜೊತೆ ಸೇರಿ ಕಾನೂನು ಸುವ್ಯವಸ್ಥೆಗೆ ಧಕ್ಕೆತರುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಆದ್ದರಿಂದ ಎಲ್ಲ ಪ್ರಾದೇಶಿಕ ಶಕ್ತಿಗಳು ಮೋದಿ ನೇತೃತ್ವದ ಸರ್ಕಾರವನ್ನು ಸೋಲಿಸಲು ಒಂದಾಗಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ.