ಮದ್ಯವನ್ನು ಮನೆ ಬಾಗಿಲಿಗೆ ತಲುಪಿಸಲು ಛತ್ತೀಸ್ ಗಡ್ ಸರ್ಕಾರ ನಿರ್ಧಾರ

ಕೇಂದ್ರ ಬಿಡುಗಡೆ ಮಾಡಿದ ಹೊಸ ಲಾಕ್‌ಡೌನ್ ಮಾರ್ಗಸೂಚಿಗಳನ್ನು ಜಾರಿಗೆ ತಂದ ಹಿನ್ನೆಲೆಯಲ್ಲಿ ಛತ್ತೀಸ್‌ಗಡದಲ್ಲಿ ಮದ್ಯದಂಗಡಿಗಳು ಸೋಮವಾರದಿಂದ ಮತ್ತೆ ತೆರೆಯಲಿವೆ. ಈ ಹಿನ್ನಲೆಯಲ್ಲಿ ಈಗ ಕೆಲವು ಸ್ಥಳಗಳಲ್ಲಿ ಮದ್ಯವನ್ನು ಮನೆಗೆ ತಲುಪಿಸಲು ಸಿದ್ಧವಾಗಿದೆ ಎಂದು ರಾಜ್ಯ ಅಬಕಾರಿ ಇಲಾಖೆ ತಿಳಿಸಿದೆ.

Last Updated : May 3, 2020, 11:08 PM IST
ಮದ್ಯವನ್ನು ಮನೆ ಬಾಗಿಲಿಗೆ ತಲುಪಿಸಲು ಛತ್ತೀಸ್ ಗಡ್ ಸರ್ಕಾರ ನಿರ್ಧಾರ  title=
ಸಾಂದರ್ಭಿಕ ಚಿತ್ರ

ನವದೆಹಲಿ: ಕೇಂದ್ರ ಬಿಡುಗಡೆ ಮಾಡಿದ ಹೊಸ ಲಾಕ್‌ಡೌನ್ ಮಾರ್ಗಸೂಚಿಗಳನ್ನು ಜಾರಿಗೆ ತಂದ ಹಿನ್ನೆಲೆಯಲ್ಲಿ ಛತ್ತೀಸ್‌ಗಡದಲ್ಲಿ ಮದ್ಯದಂಗಡಿಗಳು ಸೋಮವಾರದಿಂದ ಮತ್ತೆ ತೆರೆಯಲಿವೆ. ಈ ಹಿನ್ನಲೆಯಲ್ಲಿ ಈಗ ಕೆಲವು ಸ್ಥಳಗಳಲ್ಲಿ ಮದ್ಯವನ್ನು ಮನೆಗೆ ತಲುಪಿಸಲು ಸಿದ್ಧವಾಗಿದೆ ಎಂದು ರಾಜ್ಯ ಅಬಕಾರಿ ಇಲಾಖೆ ತಿಳಿಸಿದೆ.

ಅಬಕಾರಿ ಇಲಾಖೆ ಭಾನುವಾರ ಹೊರಡಿಸಿರುವ ಆದೇಶದನ್ವಯ, ರಾಜ್ಯದ ಮದ್ಯದಂಗಡಿಗಳು ಸೋಮವಾರದಿಂದ ಬೆಳಿಗ್ಗೆ 8 ರಿಂದ ಸಂಜೆ 7 ರವರೆಗೆ ತೆರೆದಿರುತ್ತವೆ ಎನ್ನಲಾಗಿದೆ.ಈ ಕುರಿತಾಗಿ ಮಾತನಾಡಿರುವ ಅಬಕಾರಿ ಸಚಿವ ಕವಾಸಿ ಲಕ್ಮಾ 'ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ನಾವು ಮನೆಗೆ ಮದ್ಯವನ್ನು ತಲುಪಿಸಲು ಸಿದ್ದರಾಗಿದ್ದೇವೆ, ಯಾರಾದರೂ ಮನೆಗೆ ತಲುಪಿಸಲು ಕೇಳಿದಲ್ಲಿ ವಿತರಿಸಲಾಗುವುದು ಎಂದು ತಿಳಿಸಿದರು.ಆದರೆ ಮನೆವರಗೆ ಮದ್ಯ ವಿತರಿಸಲು ಹೆಚ್ಚುವರಿ ಶುಲ್ಕಗಳು ಅನ್ವಯವಾಗಲಿವೆ.

ಮದ್ಯ ವಿತರಣೆಗೆ ಡೆಲಿವರಿ ಮಾಡಲು ಏಜೆನ್ಸಿ ಮೂಲಕ ವ್ಯಕ್ತಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು, ಈ ನೇಮಕವಾದನಂತರ  ಅದರ ಆಧಾರದ ಮೇಲೆ ಮದ್ಯದ ಧರವನ್ನು ನಿರ್ಧರಿಸಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮನೆವರೆಗೂ ಮದ್ಯ ವಿತರಣೆಗಾಗಿ ಯೋಜನೆ ಸಿದ್ಧಗೊಳ್ಳುತ್ತಿದ್ದು ಅದನ್ನು ಸೋಮವಾರದಂದು ಪ್ರಕಟಿಸಲಾಗುವುದು ಎಂದು ಅಬಕಾರಿ ಸಚಿವರು ಹೇಳಿದ್ದಾರೆ. ಯಾವುದೇ ವ್ಯಕ್ತಿಯು ಯಾವುದೇ ಮದ್ಯದಂಗಡಿಯಿಂದ ಒಂದು ಸಮಯದಲ್ಲಿ 5000 ಎಂಎಲ್‌ಗಿಂತ ಹೆಚ್ಚು ಖರೀದಿಸಲು ಅನುಮತಿಸುವುದಿಲ್ಲ ಎಂದು ಸರ್ಕಾರದ ಆದೇಶ ತಿಳಿಸಿದೆ.
 
 

Trending News