Shocking Video : ಅನ್ನವಿಡಲು ಬಂದವನ ಮೇಲೆಯೇ ದಾಳಿ ಮಾಡಿದ ಮಹಾ ಮೊಸಳೆ

 Viral Video : ಸಾಮಾಜಿಕ ಮಾಧ್ಯಮದಲ್ಲಿ ಪ್ರಾಣಿಗಳು ಮತ್ತು ಪ್ರಾಣಿಗಳ ವೀಡಿಯೊಗಳನ್ನು ಬಹಳಷ್ಟು ಸಂಖ್ಯೆಯಲ್ಲಿ ವೀಕ್ಷಿಸಬಹುದು.  ಇವುಗಳ ಪೈಕಿ ಕೆಲವು ವಿಡಿಯೋಗಳು (Viral video) ಬಹಳ ಮುದ್ದಾಗಿರುತ್ತವೆ.

Written by - Ranjitha R K | Last Updated : Jan 28, 2022, 07:07 PM IST
  • ಸಾಮಾಜಿಕ ಮಾಧ್ಯಮದಲ್ಲಿ ಪ್ರಾಣಿಗಳ ವಿಡಿಯೋ
  • ಇಲ್ಲಿದೆ ಮೊಸಳೆಯ ವಿಡಿಯೋ
  • ನಡುಕ ಹುಟ್ಟಿಸುವ ಮೊಸಳೆ ವಿಡಿಯೋ
Shocking Video : ಅನ್ನವಿಡಲು ಬಂದವನ ಮೇಲೆಯೇ ದಾಳಿ ಮಾಡಿದ ಮಹಾ ಮೊಸಳೆ  title=
ಸಾಮಾಜಿಕ ಮಾಧ್ಯಮದಲ್ಲಿ ಪ್ರಾಣಿಗಳ ವಿಡಿಯೋ (photo instagram)

ನವದೆಹಲಿ : Viral Video : ಸಾಮಾಜಿಕ ಮಾಧ್ಯಮದಲ್ಲಿ ಪ್ರಾಣಿಗಳು ಮತ್ತು ಪ್ರಾಣಿಗಳ ವೀಡಿಯೊಗಳನ್ನು ಬಹಳಷ್ಟು ಸಂಖ್ಯೆಯಲ್ಲಿ ವೀಕ್ಷಿಸಬಹುದು.  ಇವುಗಳ ಪೈಕಿ ಕೆಲವು ವಿಡಿಯೋಗಳು (Viral video) ಬಹಳ ಮುದ್ದಾಗಿರುತ್ತವೆ. ಇನ್ನು ಕೆಲವು ವಿಡಿಯೋಗಳು ನಡುಕ ಹುಟ್ಟಿಸಿ ಬಿಡುತ್ತವೆ. ಅಂಥಹುದೇ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.  ಇದರಲ್ಲಿ  ಮೊಸಳೆಯೊಂದು ತನಗೆ ಆಹಾರ ನೀಡಲು ಬಂದ ವ್ಯಕ್ತಿಯ ಮೇಲೆರಗಿದೆ.   ಆರಂಭದಲ್ಲಿ ಈ ವಿಡಿಯೋ (Video) ನೋಡಲು ಎಷ್ಟು ಮುದ್ದಾಗಿ ಕಾಣಿಸುತ್ತದೆಯೋ, ನಂತರ ಅಷ್ಟೇ ಭಯ ಹುಟ್ಟಿಸುತ್ತದೆ. 

 ವ್ಯಕ್ತಿ ಮೇಲೆ ಮೊಸಳೆ ದಾಳಿ : 
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral) ಆಗುತ್ತಿರುವ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ನದಿಯ ದಡದಲ್ಲಿ ನಿಂತು ಮೊಸಳೆಯನ್ನು ನೋಡುತ್ತಿರುವುದು ಕಂಡು ಬರುತ್ತಿದೆ. ನಂತರನಿಧಾನವಾಗಿ ಆವ್ಯಕ್ತಿ ಮೊಸಳೆಗೆ ಆಹಾರ ನೀಡಲು ಮುಂದಾಗುತ್ತಾನೆ.  ಆಹಾ ತೆಗೆದುಕೊಳ್ಳಲು ಬಂದ ಮೊಸಳೆ, ಆ ವ್ಯಕ್ತಿ ಊಹಿಸಲು ಸಾಧ್ಯವಾಗದ ರೀತಿಯಲ್ಲಿ ದಾಳಿ ಮಾಡಲು ಮುಂದಾಗುತ್ತದೆ. 

ಇದನ್ನೂ ಓದಿ :  Viral Video: ತನ್ನ ಮರಿಯ ಪ್ರಾಣ ರಕ್ಷಣೆಗಾಗಿ ಹಾವಿನ ಜೊತೆ ಸೆಣೆಸಾಡಿ ಗೆದ್ದ ಇಲಿ

ಒಂದು ಕ್ಷಣ ತಡವಾಗಿದ್ದಾರೂ ಭಾರೀ ಅವಘಡ : 
ಕೂಡಲೇ ಅಪಾಯವನ್ನು ಅರಿತ ವ್ಯಕ್ತಿ ತಪ್ಪಿಸಿಕೊಳ್ಳುತ್ತಾನೆ. ಅರೆ ಕ್ಷಣ ತಡವಾದರೂ ವ್ಯಕ್ತಿ ಆ ಮಹಾ ಮೊಸಳೆಗೆ ಆಹಾರವಾಗಿ ಬಿಡುತ್ತಿದ್ದ (Animal video). ಮೊಸಳೆ ತನ್ನನ್ನೇ ಆಹಾರವಾಗಿಸುವ ಉದ್ದೆಶದಿಂದ ಬರುತ್ತಿರುವುದು ಗೊತ್ತಾಗುತ್ತಿದ್ದಂತೆ ವ್ಯಕ್ತಿ ತನ್ನ ಕೈಯಲ್ಲಿರುವ ಆಹಾರವನ್ನು ಎಸೆದು ಅಲ್ಲಿಂದ ಹೊರತು ಬಿಡುತ್ತಾನೆ. 

 

ಈ ವೀಡಿಯೊವನ್ನು (Viral video) ಡಿಸ್ಕವರ್‌ಶಾರ್ಕ್ಸ್ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಈ ವೀಡಿಯೊವನ್ನು ಇಲ್ಲಿಯವರೆಗೆ 9 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.  ಅಲ್ಲದೆ ಈ ವಿಡಿಯೋ ವೀಕ್ಷಿಸಿದವರು , ಈ ವಿಡಿಯೋಗೆ ಕಾಮೆಂಟ್ ಕೂಡಾ ಮಾಡುತ್ತಿದ್ದಾರೆ. 

ಇದನ್ನೂ ಓದಿ : VIRAL VIDEO: Rashmika Mandanna ಗೆ ಊಟಕ್ಕಾಗಿ ದುಡ್ಡು ಕೇಳಿದ ಮಕ್ಕಳು, ನೀಡಿದ ರಿಯಾಕ್ಷನ್ ಗೆ ನೆಟಿಜ(ನ್)ರ ಪ್ರಶ್ನೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News