close

News WrapGet Handpicked Stories from our editors directly to your mailbox

ಮಥುರಾದಲ್ಲಿ ಎರಡನೇ ಬಾರಿ ಸಂಸದೆಯಾಗಿ ಡ್ರೀಮ್ ಗರ್ಲ್ ಆಯ್ಕೆ!

ಮಥುರಾ ಕ್ಷೇತ್ರದಲ್ಲಿ RLD ಪಕ್ಷದಿಂದ ಸ್ಪರ್ಧಿಸಿದ್ದ ಕುನ್ವರ್ ನರೇಂದ್ರ ಸಿಂಗ್ ವಿರುದ್ಧ 2,93,471 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 

Updated: May 24, 2019 , 02:20 PM IST
ಮಥುರಾದಲ್ಲಿ ಎರಡನೇ ಬಾರಿ ಸಂಸದೆಯಾಗಿ ಡ್ರೀಮ್ ಗರ್ಲ್ ಆಯ್ಕೆ!

ನವದೆಹಲಿ: ಉತ್ತರಪ್ರದೇಶದ ಮಥುರಾ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಾಲಿವುಡ್ ನಟಿ, ಡ್ರೀಮ್ ಗರ್ಲ್ ಹೇಮಮಾಲಿನಿ ಅವರನ್ನು ಜನತೆ ಮತ್ತೊಂದು ಅವಧಿಗೆ ಸಂಸದರಾಗಿ ಆಯ್ಕೆ ಮಾಡಿದ್ದಾರೆ.

ಚುನಾವಣಾ ಆಯೋಗದ ವೆಬ್ಸೈಟ್ ಮಾಹಿತಿ ಪ್ರಕಾರ, ಮಥುರಾ ಕ್ಷೇತ್ರದಲ್ಲಿ RLD ಪಕ್ಷದಿಂದ ಸ್ಪರ್ಧಿಸಿದ್ದ ಕುನ್ವರ್ ನರೇಂದ್ರ ಸಿಂಗ್ ವಿರುದ್ಧ 2,93,471 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಹೇಮಮಾಲಿನಿ ಅವರು 6,71,293 ಮತಗಳನ್ನು ಗಳಿಸಿ ಜಯಭೇರಿ ಬಾರಿಸಿದರೆ, ಸಿಂಗ್ 3,77,822 ಮತಗಳನ್ನು ಗಳಿಸುವ ಮೂಲಕ ಪರಾಭವಗೊಂಡಿದ್ದಾರೆ. ಇನ್ನು, ಕಾಂಗ್ರೆಸ್ ಅಭ್ಯರ್ಥಿ ಮಹೇಶ್ ಪಾಠಕ್ ಕೇವಲ 28, 084 ಮತಗಳನ್ನು ಗಳಿಸಿದ್ದಾರೆ.

2014 ರಲ್ಲಿ ಉತ್ತರ ಪ್ರದೇಶದ ಮಥುರಾ ಲೋಕಸಭಾ ಕ್ಷೇತ್ರದಲ್ಲಿ ಆರ್ಎಲ್ಡಿ ನಾಯಕ ಜಯಂತ್ ಚೌಧರಿ ವಿರುದ್ಧ ಬಿಜೆಪಿ ಅಭ್ಯರ್ಥಿ ಹೇಮಮಾಲಿನಿ ಸ್ಪರ್ಧಿಸಿದ್ದರು. ಆ ಚುನಾವಣೆಯಲ್ಲಿ ಹೇಮಾ ಮಾಲಿನಿ 3,30,743 ಮತಗಳಿಂದ ಜಯಂತ್ ಚೌಧರಿ ಅವರನ್ನು ಸೋಲಿಸಿದ್ದರು. 2014 ರ ಚುನಾವಣೆಯಲ್ಲಿ ಆರ್ಎಲ್ಡಿ ಎರಡನೇ ಸ್ಥಾನದಲ್ಲಿ, ಬಿಎಸ್ಪಿ ಮೂರನೇ ಮತ್ತು ಎಸ್ಪಿ ನಾಲ್ಕನೇ ಸ್ಥಾನದಲ್ಲಿತ್ತು. ಮಥುರಾ ಲೋಕಸಭಾ ಕ್ಷೇತ್ರದಲ್ಲಿ ಐದು ವಿಧಾನಸಭಾ ಕ್ಷೇತ್ರಗಳಿದ್ದು,2014ರ ಅಂಕಿ ಅಂಶಗಳ ಪ್ರಕಾರ 9.3 ಮಿಲಿಯನ್ ಪುರುಷರು ಮತ್ತು 7 ಮಿಲಿಯನ್'ಗೂ ಅಧಿಕಮಹಿಳಾ ಮತದಾರಿದ್ದಾರೆ. ಒಟ್ಟಾರೆ, 1.7 ದಶಲಕ್ಷ ಮತದಾರರನ್ನು ಮಧುರಾ ಕ್ಷೇತ್ರ ಹೊಂದಿದೆ.