ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರನ್ನು ಸುಮಾರು 14 ತಿಂಗಳುಗಳ ಕಾಲ ಬಂಧನಕ್ಕೊಳಗಾದ ನಂತರ ಮಂಗಳವಾರ ತಡರಾತ್ರಿ ಬಿಡುಗಡೆ ಮಾಡಲಾಯಿತು.
ಕಳೆದ ವರ್ಷ ಆಗಸ್ಟ್‌ನಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸುವ ಸಂದರ್ಭದಲ್ಲಿ ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್‌ಎ) ಅಡಿಯಲ್ಲಿ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು, ಈ ಕಾಯ್ದೆಯು ಕಠಿಣ ಕಾನೂನು ಮೂರು ತಿಂಗಳವರೆಗೆ ವಿಚಾರಣೆಯಿಲ್ಲದೆ ಬಂಧನ ಮತ್ತು ಬಹು ವಿಸ್ತರಣೆಗೆ ಅವಕಾಶ ನೀಡುತ್ತದೆ.'ಮೆಹಬೂಬಾ ಮುಫ್ತಿ ಬಿಡುಗಡೆಯಾಗುತ್ತಿದ್ದಾರೆ" ಎಂದು ಜೆ & ಕೆ ಪ್ರಧಾನ ಕಾರ್ಯದರ್ಶಿ ರೋಹಿತ್ ಕನ್ಸಾಲ್ ರಾತ್ರಿ 9.17 ಕ್ಕೆ ಟ್ವೀಟ್ ಮಾಡಿದ್ದಾರೆ.
370 ನೇ ವಿಧಿ ರದ್ಧತಿ ಕುರಿತು ಕಾಂಗ್ರೆಸ್ ನಿಲುವು ಖಂಡಿಸಿದ ಮೆಹಬೂಬಾ ಮುಫ್ತಿ
As Ms Mufti’s illegal detention finally comes to an end, Id like to thank everybody who supported me in these tough times. I owe a debt of gratitude to you all. This is Iltija signing off. فی امان اﷲ May allah protect you
— Mehbooba Mufti (@MehboobaMufti) October 13, 2020
ಮೆಹಬೂಬಾ ಮುಫ್ತಿ ಅವರ ಕಾನೂನು ಬಾಹಿರ ಬಂಧನವನ್ನು ಪ್ರಶ್ನಿಸಿ ಅವರ ಮಗಳು ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ್ದಳು, ಈ ವಿಚಾರವಾಗಿ ಸುಪ್ರೀಂಕೋರ್ಟ್ ಈ ವಿಚಾರವಾಗಿ ಗಡುವನ್ನು ನಿಗದಿಪಡಿಸಿತ್ತು, ಈಗ ಈ ಗಡುವು ಮುಗಿಯುವ ಹಂತಕ್ಕೆ ಬಂದ ಬೆನ್ನಲ್ಲೇ ಅವರ ಬಿಡುಗಡೆ ಬಂದಿದೆ.ಸೆಪ್ಟೆಂಬರ್ 29 ರಂದು ನ್ಯಾಯಾಲಯವು ಕೇಂದ್ರ ಮತ್ತು ಜೆ & ಕೆ ಸರ್ಕಾರಗಳನ್ನು, ಮೆಹಬೂಬಾ ಮುಫ್ತಿಯನ್ನು ಎಷ್ಟು ದಿನ ಬಂಧನದಲ್ಲಿಡಬಹುದು?" ಎಂದು ಪ್ರಶ್ನಿಸಿತ್ತು ಅಷ್ಟೇ ಅಲ್ಲದೆ ಜೆ & ಕೆ ಆಡಳಿತಕ್ಕೆ ಎರಡು ವಾರಗಳ (ಅಕ್ಟೋಬರ್ 14) ಕಾಲಾವಕಾಶ ನೀಡಲಾಯಿತು.
ಬಂಧನಕ್ಕೊಳಗಾದ ನಂತರ ತಾಯಿಯ ಟ್ವಿಟ್ಟರ್ ಖಾತೆಯನ್ನು ವಹಿಸಿಕೊಂಡ ಮಗಳು ಇಲ್ಟಿಜಾ ತಾಯಿ ಮುಫ್ತಿ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ, 'ಮುಫ್ತಿ ಅವರ ಅಕ್ರಮ ಬಂಧನವು ಅಂತಿಮವಾಗಿ ಕೊನೆಗೊಳ್ಳುತ್ತಿದ್ದಂತೆ, ಈ ಕಠಿಣ ಕಾಲದಲ್ಲಿ ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ಹೇಳಲು ನಾನು ಬಯಸುತ್ತೇನೆ "ನಾನು ನಿಮ್ಮೆಲ್ಲರಿಗೂ ಕೃತಜ್ಞತೆ ಋಣಿಯಾಗಿದ್ದೇನೆ. ಅಲ್ಲಾಹನು ನಿಮ್ಮನ್ನು ರಕ್ಷಿಸಲಿ". ಎಂದು ಟ್ವೀಟ್ ಮಾಡಿದ್ದಾರೆ.
ತಾಯಿ ಭೇಟಿಯಾಗಲು ಮೆಹಬೂಬಾ ಮುಫ್ತಿ ಮಗಳಿಗೆ ಅನುಮತಿ ನೀಡಿದ ಸುಪ್ರೀಂ
ಮುಫ್ತಿ ಮತ್ತು ಇತರ ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲಾ ಮತ್ತು ಅವರ ಪುತ್ರ ಒಮರ್ ಸೇರಿದಂತೆ ನೂರಾರು ರಾಜಕಾರಣಿಗಳನ್ನು 370 ನೇ ವಿಧಿ ರದ್ದುಗೊಳಿಸುವ ಸಂದರ್ಭದಲ್ಲಿ ಬಂಧಿಸಲಾಗಿತ್ತು. ಕಠಿಣ ಪಿಎಸ್ಎ ಅಡಿಯಲ್ಲಿ ಆರೋಪಿಸಲ್ಪಟ್ಟ ಅಬ್ದುಲ್ಲಾಗಳನ್ನು ಮಾರ್ಚ್ನಲ್ಲಿ ಬಿಡುಗಡೆ ಮಾಡಲಾಯಿತು. ಮುಫ್ತಿ ಬಿಡುಗಡೆಯ ಬಗ್ಗೆ ಕೇಳಿ ಸಂತಸವಾಗಿದೆ ಎಂದು ಒಮರ್ ಅಬ್ದುಲ್ಲಾ ಇಂದು ಟ್ವೀಟ್ ಮಾಡಿದ್ದಾರೆ.
"ಒಂದು ವರ್ಷಕ್ಕೂ ಹೆಚ್ಚು ಕಾಲ ಬಂಧನದಲ್ಲಿದ್ದ ನಂತರ ಮೆಹಬೂಬಾ ಮುಫ್ತಿ ಸಾಹಿಬಾ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಕೇಳಲು ನನಗೆ ಸಂತೋಷವಾಗಿದೆ. ಅವರ ನಿರಂತರ ಬಂಧನವು ಒಂದು ವಿಪರ್ಯಾಸ ಮತ್ತು ಪ್ರಜಾಪ್ರಭುತ್ವದ ಮೂಲ ಸಿದ್ಧಾಂತಗಳಿಗೆ ವಿರುದ್ಧವಾಗಿತ್ತು. ಮೆಹಬೂಬಾ ಅವರನ್ನು ಸ್ವಾಗತಿಸಿ" ಎಂದು ಹೇಳಿದ್ದಾರೆ.