Gurugram: ರಸ್ತೆ ಅಪಘಾತದಲ್ಲಿ ನಾಲ್ವರ ದಾರುಣ ಸಾವು

Accident in Gurugram: ಗುರುವಾರ ಬೆಳಗ್ಗೆ ಸೈಬರ್ ಸಿಟಿ ಗುರುಗ್ರಾಮ್‌ನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದು, ಒಬ್ಬರು ಗಾಯಗೊಂಡಿದ್ದಾರೆ. ಅಪಘಾತದ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾರು ಚಾಲಕ ಮತ್ತು ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 

Written by - Nitin Tabib | Last Updated : Mar 3, 2022, 02:10 PM IST
  • ಗುರುಗ್ರಾಮ್ ನಲ್ಲಿ ಭೀಕರ ರಸ್ತೆ ಅಪಘಾತ.
  • ಅಪಘಾತದಲ್ಲಿ ನಾಲ್ವರು ಸಾವು
  • ಎಲ್ಲರೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
Gurugram: ರಸ್ತೆ ಅಪಘಾತದಲ್ಲಿ ನಾಲ್ವರ ದಾರುಣ ಸಾವು title=
Accident in Gurugram (File Photo)

ನವದೆಹಲಿ: Car Accident In Gurugram - ದೆಹಲಿಗೆ (Delhi) ಹೊಂದಿಕೊಂಡಂತೆ ಇರುವ ಗುರುಗ್ರಾಮದಲ್ಲಿ (Gurugram) ಮತ್ತೊಮ್ಮೆ ಅತಿ ವೇಗದ ಅವಾಂತರ ಕಂಡು ಬಂದಿದೆ. ನಗರದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ (Golf Course Road)  ವೇಗವಾಗಿ ಬಂದ ಸ್ಕೋಡಾ ಕಾರು, ಎರಡು ಪ್ರತ್ಯೇಕ  ಬೈಕ್‌ಗಳಲ್ಲಿ ಚಲಿಸುತ್ತಿದ್ದ ನಾಲ್ವರು ಸ್ವಿಗ್ಗಿ ಕಂಪನಿಯ ಡೆಲಿವರಿ (Swiggy Delivery Boys Death) ಬಾಯ್ ಗಳನ್ನು ಹೊಸಗಿಹಾಕಿದೆ. 

ಇದನ್ನೂ ಓದಿ-Pushkar Temple: ವಿವಾಹಿತ ಪುರುಷರು ಭೇಟಿ ನೀಡಲು ಹೆದರುವ ದೇಶದ ಏಕೈಕ ದೇವಸ್ಥಾನ ಇದು

ಚಿಕಿತ್ಸೆಯ ಸಮಯದಲ್ಲಿ ಸಾವು (Swiggy Delivery Boys Death Case)
ಈ ನಾಲ್ವರೂ ಯುವಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ  ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇದೇ ವೇಳೆ  ಈ ಅಪಘಾತದಲ್ಲಿ ಒಬ್ಬರು ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ವಿಷಯ ತಿಳಿಯುತ್ತಿದ್ದಂತೆ ಡಿಎಲ್‌ಎಫ್ ಒಂದನೇ ಹಂತದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಪೊಲೀಸರು ಕಾರಿನ ಚಾಲಕ ಹಾಗೂ ಕಾರನ್ನು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ. ನಿನ್ನೆ ತಡರಾತ್ರಿ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಗುರುಗ್ರಾಮ ಪೊಲೀಸರು ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

ಇದನ್ನೂ ಓದಿ-ಉಕ್ರೇನ್‌ನಲ್ಲಿ ಪಾರ್ಶ್ವವಾಯುನಿಂದ ಪಂಜಾಬ್‌ನ ಬರ್ನಾಲಾ ವಿದ್ಯಾರ್ಥಿ ಸಾವು

ಕಾರಿನ ಎಷ್ಟೊಂದು ವೇಗವಾಗಿ ಚಲಿಸುತ್ತಿತ್ತು ಎಂದರೆ ಬೈಕ್ ಗಳು ಚಿಂದಿ ಚಿಂದಿಯಾಗಿ ಹಾರಿ ಹೋಗಿವೆ ಎನ್ನಲಾಗಿದೆ. ಅಷ್ಟೇ ಅಲ್ಲ ಕಾರು ಸಂಪೂರ್ಣ ಜಖಂಗೊಂಡಿದೆ. ಕಾರು ಚಾಲಕನನ್ನು ಬಂಧಿಸಿರುವ ಪೊಲೀಸರು ಯುವಕ ಮದ್ಯದ ಅಮಲಿನಲ್ಲಿದ್ದಾನಾ ಎಂಬ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ-ಉಕ್ರೇನ್‌ನಲ್ಲಿ ಭಾರತೀಯ ವಿದ್ಯಾರ್ಥಿಯ ಸಾವಿನ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದ ರಷ್ಯಾ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News