ಇಂದಿನ ಗೂಗಲ್ ವೆಬ್ಸೈಟ್ಗೆ ನೀವು ಭೇಟಿ ನೀಡಿದ್ದರೆ, ಆಸ್ಪತ್ರೆಯ ಹಿನ್ನೆಲೆಯಲ್ಲಿ ಸೀರೆಯನ್ನುಟ್ಟು, ಸ್ಟೆತಸ್ಕೊಪ್ ಧರಿಸಿದ ಓರ್ವ ಮಹಿಳೆಯ ಚಿತ್ರವನ್ನು ನೋಡಿರುತ್ತೀರಿ. ಆದ್ರೆ ಅವರ್ಯಾರು ಎಂಬುದು ಬಹಳಷ್ಟು ಮಂದಿಗೆ ತಿಳಿದಿರಲಿಕ್ಕಿಲ್ಲ. ಅವರು ಬ್ರಿಟಿಷ್ ಆಡಳಿತದ ಅವಧಿಯಲ್ಲಿ ಭಾರತದಲ್ಲಿದ್ದ ಮೊದಲ ಮಹಿಳಾ ವೈದ್ಯೆ ರುಕ್ಮಾಬಾಯ್ ರೌತ್.
ಮಹಿಳೆಯರಿಗೆ ಲೈಂಗಿಕ ಸಂಭೋಗಕ್ಕಾಗಿ ಒಪ್ಪಿಗೆಯ ವಯಸ್ಸನ್ನು ನಿಗದಿಪಡಿಸುವ ಸಲುವಾಗಿ ಮೊದಲ ಬಾರಿಗೆ ಹೋರಾಡಿದ ಮಹಿಳೆ ಹಾಗೂ ಆ ಮೂಲಕ ವಯಸ್ಸಿನ ಕಾನ್ಸೆಂಟ್ ಆಕ್ಟ್ ಅನ್ನು ಇವರು ಜಾರಿಗೆ ತಂದರು. ಅಷ್ಟೇ ಅಲ್ಲದೆ ಇವರು ಬಾಲ್ಯ ವಿವಾಹ ಮತ್ತು ಮಹಿಳೆಯ ಹಕ್ಕುಗಳ ವಿರುದ್ಧವೂ ಹೋರಾಟ ನಡೆಸಿದರು.
ತಮ್ಮ 11 ನೇ ವಯಸ್ಸಿನಲ್ಲಿ ವಿವಾಹವಾದ ರುಕ್ಮಾಬಾಯ್ ರೌತ್, ತನ್ನ ಅತ್ತೆ ಮನೆಗೆ ಹೋಗಲು ನಿರಾಕರಿಸಿ, ಅವರ ತಾಯಿಯೊಂದಿಗೇ ಉಳಿದರು. ಆದರೆ ಪತಿ, ದಾದಾಜಿ ಭಿಕಾಜಿ ರೌತ್ ಅವರ ಒತ್ತಡವನ್ನು ತಡೆಯಲಾಗದೆ ನ್ಯಾಯಾಲಯದ ಮೊರೆ ಹೋದ ಅವರು ನ್ಯಾಯಾಲಯದ ಪ್ರಕರಣಗಳ ವಿರುದ್ಧ ಹೋರಾಡಿದರು.
ಅಷ್ಟೇ ಅಲ್ಲದೆ, ರುಕ್ಮಾಬಾಯ್ ವೃತ್ತಪತ್ರಿಕೆಯಲ್ಲಿ ಪ್ರಕಟವಾದ ಅವರ ಪತ್ರಗಳಿಗೆ ಹೆಸರುವಾಸಿಯಾಗಿದ್ದರು. ಅವರ ಪೆನ್ ಹೆಸರು `ಎ ಹಿಂದೂ ಲೇಡಿ' ಆಗಿತ್ತು. ಇದರಿಂದ ದೊರೆಯುತ್ತಿದ್ದ ಹಣವು ಅವರ ಔಷಧ ವಿಜ್ಞಾನ ಅಧ್ಯಯನಕ್ಕೆ ನೆರವಾಯಿತು. ಇದೇ ಅಧ್ಯಯನವನ್ನು ಇಂಗ್ಲೆಂಡ್ನಲ್ಲಿ ಮಾಡಿದ ಅವರು, ನಂತರದಲ್ಲಿ ಭಾರತದ ರಾಜ್ಕೊಟ್ನ ಮಹಿಳಾ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಕೆಲಸ ಮಾಡಿದರು.
ಅವರು ಜೀವನ ಕಥೆಯು ಕಾದಂಬರಿಗಳಲ್ಲಿ ಮತ್ತು ಚಲನಚಿತ್ರಗಳ ಪಾತ್ರಗಲಾಗಿ ಪ್ರೇರಣೆ ಪಡೆದವು. ಸೆಪ್ಟೆಂಬರ್ 25, 1955 ರಂದು 91 ನೇ ವಯಸ್ಸಿನಲ್ಲಿ ರುಕ್ಮಾಬಾಯ್ ಕೊನೆಯುಸಿರೆಳೆದರು.