ನವದೆಹಲಿ: ಕಾನೂನಿನ ಹೆಗ್ಗುರುತಾದ ಮಾಹಿತಿ ಹಕ್ಕನ್ನು ದುರ್ಬಲಗೊಳಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಇಂದು ಆರೋಪಿಸಿದ್ದಾರೆ.
ಮಾಹಿತಿ ಹಕ್ಕು ನರೇಂದ್ರ ಮೋದಿ ಸರ್ಕಾರಕ್ಕೆ ತನ್ನ ಬಹುಸಂಖ್ಯಾತ ಕಾರ್ಯಸೂಚಿಯನ್ನು ಜಾರಿಗೊಳಿಸಲು ಒಂದು ಅಡಚಣೆಯಾಗಿದೆ ಎಂದು ಸೋನಿಯಾ ಗಾಂಧಿ ಹೇಳಿದರು.
Statement by Congress President Smt. Sonia Gandhi on the dilution of RTI Act. pic.twitter.com/4Vf0QNtJ9q
— Congress (@INCIndia) October 31, 2019
ನೂತನ ಆರ್‌ಟಿಐ ನಿಯಮಗಳ ಪ್ರಕಾರ ಮಾಹಿತಿ ಆಯುಕ್ತರ ಅಧಿಕಾರಾವಧಿಯನ್ನು ಐದರಿಂದ ಮೂರು ವರ್ಷಗಳವರೆಗೆ ಕೇಂದ್ರವು ಮೊಟಕುಗೊಳಿಸಿದ ಒಂದು ವಾರದ ನಂತರ ಸೋನಿಯಾ ಗಾಂಧಿ ಈಗ ಮೋದಿ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಇನ್ನೊಂದೆಡೆ ಮಾಹಿತಿ ಹಕ್ಕು ಕಾರ್ಯಕರ್ತರು ಈ ಕ್ರಮವನ್ನು ಮಾಹಿತಿ ಆಯುಕ್ತರ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆ ಮೇಲಿನ ಆಕ್ರಮಣ ಎಂದು ಕರೆದಿದ್ದಾರೆ.
ಸರ್ಕಾರದ ವಿರುದ್ಧ ಮಾಹಿತಿಯನ್ನು ಬಿಡುಗಡೆ ಮಾಡಲು ಅನುಮತಿಸುವ ಯಾವುದೇ ಅಧಿಕಾರಿಯನ್ನು ಈಗ ಶೀಘ್ರವಾಗಿ ತೆಗೆದು ಹಾಕಬಹುದು ಅಥವಾ ಕಚೇರಿಯಲ್ಲಿ ಮುಂದುವರಿಸಲಾಗುವುದಿಲ್ಲ. ಇದು ಎಲ್ಲಾ ಮಾಹಿತಿ ಆಯುಕ್ತರು- ಕೇಂದ್ರ ಮತ್ತು ರಾಜ್ಯಗಳ ಮೇಲೆ ಪರಿಣಾಮವನ್ನು ಬೀರುತ್ತದೆ' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಜುಲೈನಲ್ಲಿ ಸಂಸತ್ತಿನ ಉಭಯ ಸದನದಲ್ಲಿ ಮಾಹಿತಿ ಹಕ್ಕು ಕಾಯ್ದೆಗೆ ಸರಕಾರ ತಿದ್ದುಪಡಿಯನ್ನು ತೆರವುಗೊಳಿಸಿತು.