ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಎಂದು ತಿಳಿಯಲು ಹೀಗೆ ಮಾಡಿ....

ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದೆಯೇ? ಇಲ್ಲವೇ ಎಂದು ತಿಳಿಯಲು ಈ ಸರಳವಾದ 5 ಹಂತಗಳಲ್ಲಿ ತಿಳಿಯಿರಿ.

Last Updated : Mar 28, 2019, 10:43 AM IST
ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಎಂದು ತಿಳಿಯಲು ಹೀಗೆ ಮಾಡಿ.... title=

ನವದೆಹಲಿ: ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಉಳಿದಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಈಗಾಗಾಲೇ ಮತದಾರರ ಪಟ್ಟಿಯನ್ನು ಸಿದ್ಧಗೊಳಿಸಿದೆ. 18 ವರ್ಷ ಮೇಲ್ಪಟ್ಟ ಎಲ್ಲರೂ ಮತದಾನ ಮಾಡಲು ಅರ್ಹರು. ಆದರೆ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರಬೇಕಷ್ಟೇ... ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅರ್ಜಿ ಸಲ್ಲಿಸಿದ್ದು, ನಿಮ್ಮ ಹೆಸರು ಪಟ್ಟಿಯಲ್ಲಿ ಸೇರ್ಪಡೆಯಾಗಿದೆಯೇ, ಇಲ್ಲವೇ ಎಂಬ ಪ್ರಶ್ನೆ ನಿಮ್ಮಲ್ಲಿ ಕಾಡುತ್ತಿರಬಹುದು. ಹಾಗಾದರೆ ನಿಮ್ಮ ಹೆಸರು ಪಟ್ಟಿಯಲ್ಲಿ ಸೇರ್ಪಡೆಯಾಗಿದೆಯೇ? ಇಲ್ಲವೇ ಎಂದು ತಿಳಿಯಲು ಈ ಸರಳವಾದ 5 ಹಂತಗಳಲ್ಲಿ ತಿಳಿಯಿರಿ.

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂದು ತಿಳಿಯುವುದು ಹೇಗೆ?
1. ಮೊದಲು Electoralsearch.in ವೆಬ್ಸೈಟ್ ಅಲ್ಲಿ ಲಾಗಿನ್ ಆಗಿ. ಇದರಲ್ಲಿ ಮತದಾರರ ಹೆಸರು ಹುಡುಕಲು ಎರಡು ಮಾರ್ಗಗಳಿವೆ.
2. ಮೊದಲ ಆಯ್ಕೆಯಲ್ಲಿ ನಿಮ್ಮ ಹೆಸರು, ಹುಟ್ಟಿದ ದಿನಾಂಕ ಮತ್ತು ಇತರ ಅಂಶಗಳನ್ನು ಭರ್ತಿ ಮಾಡಿ  ಮಾಹಿತಿ ಪಡೆಯಬಹುದು.
3. ಎರಡನೇ ಆಯ್ಕೆಯಲ್ಲಿ ನಿಮ್ಮ EPIC(Voter Identification Number) ಸಂಖ್ಯೆ ದಾಖಲಿಸುವ ಮೂಲಕ ಮಾಹಿತಿ ಪಡೆಯಬಹುದು.
4. ಎರಡೂ ಆಯ್ಕೆಗಳಲ್ಲಿ ನಿಮಗೆ ಅಗತ್ಯವಾದ ಸಂಪೂರ್ಣ ಮಾಹಿತಿ ದೊರೆಯುತ್ತದೆ. ಅದನ್ನು ಡೌನ್ಲೋಡ್ ಮಾಡಿಕೊಳ್ಳಿ.
5. ಒಂದು ವೇಳೆ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲವಾದರೆ, ನಿಮಗೆ ಅಗತ್ಯವಾದ ಮಾಹಿತಿ ಲಭ್ಯವಾಗದಿದ್ದರೆ ಚುನಾವಣಾ ಆಯೋಗದ ಟೋಲ್ ಫ್ರೀ ಸಂಖ್ಯೆ 1800111950 ಕರೆ ಮಾಡಿ. 

ಇದಲ್ಲದೆ, ಆನ್ಲೈನ್ ನಲ್ಲಿ ಮತದಾರ ಪಟ್ಟಿಯು ಇತರ ವೆಬ್ಸೈಟ್ ಗಳ ಮೂಲಕವೂ ಲಭ್ಯವಿದ್ದು, ಗೂಗಲ್ ಪ್ಲೇ ಸ್ಟೋರ್'ನಲ್ಲಿ Voter List Online 2019 ಆಫ್ ಡೌನ್ಲೋಡ್ ಮಾಡಿಕೊಂಡೂ ಸಹ ಹೆಸರು ಚೆಕ್ ಮಾಡಬಹುದು. ಒಂದು ವೇಳೆ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲವಾದರೆ ನೀವು ಮತ ಚಲಾಯಿಸಲು ಸಾಧ್ಯವಿಲ್ಲ.

Trending News