ಪ್ರಪಾತಕ್ಕೆ ಕಾರು ಬಿದ್ದು ನಾಲ್ವರು ಸಾವು, ಓರ್ವನಿಗೆ ಗಂಭೀರ ಗಾಯ

ಚಂಬಾ ಜಿಲ್ಲೆಯ ಡಕಾಗ್-ತುಂಡಾ ರಸ್ತೆಯ ಭರ್ಮೋರ್‌ನ ತಾರೆಲ್ಲಾದಲ್ಲಿ ಕಾರು ನಿಯಂತ್ರಣ ತಪ್ಪಿದ ಪರಿಣಾಮ ಸುಮಾರು 600 ಮೀಟರ್ ಆಳದ ಕಮರಿಗೆ ಬಿದ್ದು ಈ ಅಪಘಾತ ಸಂಭವಿಸಿದೆ.

Last Updated : Oct 7, 2019, 07:58 AM IST
ಪ್ರಪಾತಕ್ಕೆ ಕಾರು ಬಿದ್ದು ನಾಲ್ವರು ಸಾವು, ಓರ್ವನಿಗೆ ಗಂಭೀರ ಗಾಯ title=

ಚಂಬಾ: ಎಸ್‌ಯುವಿ ಕಾರೊಂದು ಪ್ರಪಾತಕ್ಕೆ ಉರುಳಿ ಬಿದ್ದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, ಓರ್ವ ಗಂಭೀರ ಗಾಯಗೊಂಡಿರುವ ಘಟನೆ ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ. 

ಚಂಬಾ ಜಿಲ್ಲೆಯ ಡಕಾಗ್-ತುಂಡಾ ರಸ್ತೆಯ ಭರ್ಮೋರ್‌ನ ತಾರೆಲ್ಲಾದಲ್ಲಿ ಕಾರು ನಿಯಂತ್ರಣ ತಪ್ಪಿದ ಪರಿಣಾಮ ಸುಮಾರು 600 ಮೀಟರ್ ಆಳದ ಕಮರಿಗೆ ಬಿದ್ದು ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಮೃತರನ್ನು ಚಂಬಾ ಜಿಲ್ಲೆಯ ರಾಜಿಂದರ್ ಕುಮಾರ್(30), ರಮೇಶ್ ಕುಮಾರ್ (34), ಸಂಜೀವ್ ಕುಮಾರ್(30) ಮತ್ತು ಸುರಿಂದರ್ ಕುಮಾರ್(34) ಎಂದು ಗುರುತಿಸಲಾಗಿದ್ದು, ಗಾಯಗೊಂಡ ಚಾಲಕ ಬಿಟ್ಟು(27) ಅವರನ್ನು ಚಂಬಾದಲ್ಲಿನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಈ ಘಟನೆಗೆ ತೀವ್ರ ಸಂತಾಪ ಸೂಚಿಸಿದ್ದಾರೆ.

ಮೇಲ್ನೋಟಕ್ಕೆ ಚಾಲಕನ ನಿರ್ಲಕ್ಷ್ಯ ಮತ್ತು ವೇಗದ ಚಾಲನೆಯಿಂದಾಗಿ ಅಪಘಾತ ಸಂಭವಿಸಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 279(ರಾಶ್ ಡ್ರೈವಿಂಗ್), 304 ಎ(ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಅಡಿಯಲ್ಲಿ ಭಾರರ್ ಪೊಲೀಸ್ ಠಾಣೆಯಲ್ಲಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 

Trending News