ನವದೆಹಲಿ: ದೇಶದೆಲ್ಲೆಡೆ ಮತ್ತೊಮ್ಮೆ ಕೊರೊನಾ ಪ್ರಕರಣಗಳ ಸಂಖ್ಯೆ ತೀವ್ರವಾಗಿರುವ ಹಿನ್ನಲೆಯಲ್ಲಿ ಈಗ ಕೇಂದ್ರ ಸರ್ಕಾರವು ಮುನ್ನೆಚ್ಚರಿಕೆ ಕ್ರಮವಾಗಿ ಕೇರಳ ರಾಜ್ಯಕ್ಕೆ ಪ್ರತಿದಿನದ ಕೊರೊನಾ ಪ್ರಕರಣಗಳ ವರದಿ ನೀಡುವಂತೆ ಸೂಚಿಸಿದೆ.ವಿಶೇಷವಾಗಿ ದೆಹಲಿ ಹಾಗೂ ಕೇರಳದಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿರುವುದು ಎಲ್ಲರಲ್ಲಿಯೂ ಆತಂಕವನ್ನು ತರಿಸಿದೆ.
ಇತ್ತಿಚೇಗಿನ ಮಾಹಿತಿ ಪ್ರಕಾರ ಕೇರಳದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 213 ಸಾವುಗಳು ವರದಿಯಾಗಿವೆ, ಅದರಲ್ಲಿ ಒಂದು ಸಾವು ಎಪ್ರಿಲ್ 17 ರಂದು ವರದಿಯಾಗಿದೆ.ಕೇಂದ್ರದ ಹೊಸ ಮಾರ್ಗಸೂಚಿಗಳು ಮತ್ತು ಸುಪ್ರೀಂ ಕೋರ್ಟ್‌ನ ನಿರ್ದೇಶನಗಳ ಆಧಾರದ ಮೇಲೆ ಮೇಲ್ಮನವಿಗಳನ್ನು ಸ್ವೀಕರಿಸಿದ ನಂತರ 62 ಮಂದಿಯನ್ನು ಕೋವಿಡ್ ಸಾವು ಎಂದು ತಿಳಿದುಬಂದಿದೆ ಮತ್ತು ಉಳಿದ 150 ಸಾವುಗಳನ್ನು ಏಪ್ರಿಲ್ 13 ರಿಂದ 16 ರವರೆಗೆ ಲೆಕ್ಕಾಚಾರ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ತಿಳಿಸಿದೆ.
ಈಗ ದಿನದಿಂದ ದಿನಕ್ಕೆ ಪ್ರಕರಣಗಳು ಅಧಿಕಗೊಳ್ಳುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರವಾಲ್ ಅವರು 'ಭಾರತದಲ್ಲಿ ಒಂದೇ ದಿನದಲ್ಲಿ ಹೊಸ ಪ್ರಕರಣಗಳಲ್ಲಿ ಶೇ 90 ರಷ್ಟು ಹೆಚ್ಚಳ ಮತ್ತು ಸಕಾರಾತ್ಮಕತೆಯಲ್ಲಿ ಶೇ 165 ರಷ್ಟು ಹೆಚ್ಚಳವಾಗಿದೆ ಎಂದು ಅವರು ತಿಳಿಸಿದ್ದಾರೆ.ಈಗಾಗಲೇ ಕೇಂದ್ರ ಆರೋಗ್ಯ ಸಚಿವಾಲಯವು ಎಲ್ಲಾ ರಾಜ್ಯಗಳಿಗೆ ಪ್ರತಿದಿನವೂ ರಾಜ್ಯವಾರು ಪ್ರಕರಣಗಳು ಮತ್ತು ಸಾವುಗಳ ಸಂಖ್ಯೆ ಕುರಿತಾಗಿ ನಿಖರ ವರದಿ ನೀಡುವ ಅಗತ್ಯವನ್ನು ಒತ್ತಿಹೇಳಿದೆ.
ಇದನ್ನು ಓದಿ: RR vs KKR: ಬಟ್ಲರ್ ಶತಕ, ಚಹಾಲ್ ಹ್ಯಾಟ್ರಿಕ್ ಕೈಚಳಕ, ರಾಜಸ್ಥಾನಕ್ಕೆ ಗೆಲುವಿನ ಪುಳಕ
ದೆಹಲಿಯ ಕೊರೋನಾದ ಪಾಸಿಟಿವಿಟಿ ದರವು 7.72% ಕ್ಕೆ ಏರಿದೆ, ಈಗ ನಗರದಲ್ಲಿ 501 ಹೊಸ ಪ್ರಕರಣಗಳು ದಾಖಲಾಗಿವೆ,ಇದು ಈ ಹಿಂದಿನ ದಿನಕ್ಕಿಂತಲೂ ಶೇ 16 ರಷ್ಟು ಕಡಿಮೆ ಎನ್ನಲಾಗಿದೆ.ಕಳೆದ ಬಾರಿ ಜನವರಿ 29 ರಂದು (7.4%) ಮತ್ತು ಜನವರಿ 28 ರಂದು (8.6%) ನಗರದಲ್ಲಿ ಪಾಸಿಟಿವಿಟಿ ದರವು ಶೇಕಡಾ ಏಳಕ್ಕಿಂತ ಹೆಚ್ಚಿತ್ತು ಎಂದು ಅಧಿಕೃತ ದಾಖಲೆಗಳು ತಿಳಿಸಿವೆ.
ಭಾನುವಾರ ಹೊರತುಪಡಿಸಿ, ದೆಹಲಿಯು ಕಳೆದ ಕೆಲವು ದಿನಗಳಲ್ಲಿ ದೈನಂದಿನ ಕೋವಿಡ್ -19 ಪ್ರಕರಣಗಳ ಪಾಸಿಟಿವ್ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ ಎನ್ನಲಾಗಿದೆ.ಸೋಮವಾರದಂದು ಕಡಿಮೆ ಪರೀಕ್ಷೆಗಳ ಹೊರತಾಗಿಯೂ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಶೇ 7.72% ರಷ್ಟು ಹೆಚ್ಚಳವಾಗಿದೆ.
ಕೊರೊನಾ ಪ್ರಕರಣಗಳ ಉಲ್ಬಣದ ಮಧ್ಯೆ, ಉತ್ತರ ಪ್ರದೇಶ ಸರ್ಕಾರವು ಎನ್‌ಸಿಆರ್ ಜಿಲ್ಲೆಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಎಲ್ಲರೂ ಮುಖ ಮುಚ್ಚಿರುವುದನ್ನು ಖಚಿತಪಡಿಸಿಕೊಳ್ಳಲು ಗೌತಮ್ ಬುದ್ಧ ನಗರ ಪೊಲೀಸರು ಸೋಮವಾರ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.ಇನ್ನೊಂದೆಡೆಗೆ ಬಂಗಾಳದಲ್ಲಿ ಕಳೆದ 24 ಗಂಟೆಗಳಲ್ಲಿ ಕೇವಲ 17 ಹೊಸ ಪ್ರಕರಣಗಳು ಪತ್ತೆಯಾಗಿವೆ. ಆ ಮೂಲಕ ಅಲ್ಲಿನ ಒಟ್ಟು ಪ್ರಕರಣಗಳ ಸಂಖ್ಯೆ 20,17,823 ಕ್ಕೆ ತಲುಪಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.