ಪ್ರಿಯಾಂಕಾ ಗಾಂಧಿ ಕಳ್ಳನ ಹೆಂಡತಿ: ಉಮಾ ಭಾರತಿ

ಪ್ರಿಯಾಂಕಾ ಗಾಂಧಿಯನ್ನು ಇಡೀ ದೇಶವೇ ಕಳ್ಳನ ಹೆಂಡತಿಯಂತೆ ಕಾಣುತ್ತಿದೆ ಎಂದು ಕೇಂದ್ರ ಸಚಿವೆ ಉಮಾ ಭಾರತಿ ಹೇಳಿದ್ದಾರೆ.

Last Updated : Apr 17, 2019, 07:19 AM IST
ಪ್ರಿಯಾಂಕಾ ಗಾಂಧಿ ಕಳ್ಳನ ಹೆಂಡತಿ: ಉಮಾ ಭಾರತಿ title=

ದುರ್ಗ್: ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿಯನ್ನು ಇಡೀ ದೇಶವೇ ಕಳ್ಳನ ಹೆಂಡತಿಯಂತೆ ಕಾಣುತ್ತಿದೆ ಎಂದು ಕೇಂದ್ರ ಸಚಿವೆ ಉಮಾ ಭಾರತಿ ವಿವಾದತ್ಮಕ ಹೇಳಿಕೆ ನೀಡಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ವಾರಣಾಸಿ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಬಗ್ಗೆ ಛತ್ತೀಸ್ಗಢದ ದುರ್ಗ್ ನಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಉಮಾ ಭಾರತಿ, ಪ್ರಜಾಪ್ರಭುತ್ವದಲ್ಲಿ ಯಾರು ಎಲ್ಲಿ ಬೇಕಾದರೂ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಆದರೆ, ಉತ್ತರಪ್ರದೇಶ ಲೋಕಸಭಾ ಚುನಾವಣೆ ಫಲಿತಾಂಶದ ಮೇಲೆ ಪ್ರಿಯಾಂಕಾ ಸ್ಪರ್ಧೆ ಯಾವುದೇ ಪ್ರಭಾವ ಬೀರುವುದಿಲ್ಲ ಎಂದಿದ್ದಾರೆ.

ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ನಾಯಕರ ಪ್ರಭಾವ ಕುರಿತು ಪ್ರತಿಕ್ರಿಯಿಸಿದ  ಉಮಾ,  ಏನಿಲ್ಲ. ಆ ಮಹಿಳೆಯ ಗಂಡ ಮೇಲೆ ಕಳ್ಳತನದ ಆರೋಪ ಇದೆ... ಜನರಿಗೆ ಆಕೆ ಬಗ್ಗೆ ಎಂಥ ಅಭಿಪ್ರಾಯ ಇರಬಹುದು...ಕಳ್ಳನ ಹೆಂಡತಿಗೆ ಎಂಥ ಸ್ಥಾನ ಇರುತ್ತದೆ-ಅಂಥದೇ ಸ್ಥಾನ ಹಿಂದೂಸ್ತಾನದಲ್ಲಿ ಆಕೆಗೆ ಇರುತ್ತದೆ ಎಂದು ಉಮಾ ಭಾರತಿ ಹೇಳಿದ್ದಾರೆ. ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾರನ್ನು ಹಲವು ಪ್ರಕರಣಗಳಲ್ಲಿ ವಿಚಾರಣೆ ನಡೆಸಲಾಗುತ್ತಿದೆ.

ಇದೇ ವೇಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಉಮಾ ಭಾರತಿ, ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸುವ ಮೂಲಕ ಅಮೇಥಿ ಮತ್ತು ವಯನಾಡು ಕ್ಷೇತ್ರಗಳಲ್ಲಿ ರಾಹುಲ್ ಸೋಲನುಭವಿಸಲಿದ್ದಾರೆ ಎಂದರು.

Trending News