ಕ್ವೀನ್ ಎಲಿಜಬೆತ್-2 ಗಿಂತಲೂ ಪವರ್ಫುಲ್ ಅಂತೆ ನಮ್ಮ ವಿತ್ತ ಸಚಿವೆ..

ಇತ್ತೀಚೆಗಷ್ಟೇ ಫೋರ್ಬ್ಸ್ ವಿಶ್ವದ 100 ಮೋಸ್ಟ ಪವರ್ಫುಲ್ ಮಹಿಳೆಯರ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ನಿರ್ಮಲಾ ಸೀತಾರಾಮನ್ 34ನೇ ಸ್ಥಾನದಲ್ಲಿದ್ದಾರೆ. ಇನ್ನೊಂದೆಡೆ ಕ್ವೀನ್ ಎಲಿಜಬೆತ್-2 ಹಾಗೂ ಇವಾಂಕ ಟ್ರಂಪ್ ಸೀತಾರಾಮನ್ ಅವರ ನಂತರದ ಸ್ಥಾನ ಅಲಂಕರಿಸಿದ್ದಾರೆ.

Last Updated : Dec 13, 2019, 04:38 PM IST
ಕ್ವೀನ್ ಎಲಿಜಬೆತ್-2 ಗಿಂತಲೂ ಪವರ್ಫುಲ್ ಅಂತೆ ನಮ್ಮ ವಿತ್ತ ಸಚಿವೆ.. title=

ನವದೆಹಲಿ: ದೇಶದ ಮೊಟ್ಟಮೊದಲ ಮಹಿಳಾ ರಕ್ಷಣಾ ಸಚಿವೆ ಎಂದು ಮನ್ನಣೆ ಪಡೆದ ಹಾಗೂ ಹಾಲಿ ವಿತ್ತ ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್, ಇದೀಗ ತಮ್ಮ ಪ್ರಸಿದ್ಧಿಯನ್ನು ಇಡೀ ವಿಶ್ವಕ್ಕೆ ತೋರಿಸಿದ್ದಾರೆ. ಬಿಸನೆಸ್ ಲೋಕದ ಹಾಗೂ ವಿಶ್ವಾದ್ಯಂತ ಪ್ರಚಲಿತವಿರುವ ಮ್ಯಾಗಜೀನ್ ಫೋರ್ಬ್ಸ್ ಪ್ರಕಾರ ನಿರ್ಮಲಾ ಸೀತಾರಾಮನ್ ಕೀರ್ತಿಯಲ್ಲಿ ಇಂಗ್ಲೆಂಡ್ ರಾಣಿ ಕ್ವೀನ್ ಎಲಿಜಬೆತ್-2 ಹಾಗೂ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಇವಾಂಕ ಟ್ರಂಪ್ ಗಿಂತಲೂ ಪವರ್ ಫುಲ್ ಮಹಿಳೆಯಾಗಿದ್ದಾರೆ ಎಂದು ಹೇಳಿದೆ. ಇತ್ತೀಚೆಗಷ್ಟೇ ಫೋರ್ಬ್ಸ್ ವಿಶ್ವದ 100 ಮೋಸ್ಟ ಪವರ್ಫುಲ್ ಮಹಿಳೆಯರ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ನಿರ್ಮಲಾ ಸೀತಾರಾಮನ್ 34ನೇ ಸ್ಥಾನದಲ್ಲಿದ್ದಾರೆ. ಇನ್ನೊಂದೆಡೆ ಕ್ವೀನ್ ಎಲಿಜಬೆತ್-2 ಹಾಗೂ ಇವಾಂಕ ಟ್ರಂಪ್ ಸೀತಾರಾಮನ್ ಅವರ ನಂತರದ ಸ್ಥಾನ ಅಲಂಕರಿಸಿದ್ದಾರೆ.

ಜಾರಿಗೊಳಿಸಲಾಗಿರುವ ಶ್ರೇಯಾಂಕ ಪಟ್ಟಿಯ ಪ್ರಕಾರ ಕ್ವೀನ್ ಎಲಿಜಬೆತ್-2, 40ನೇ ಸ್ಥಾನದಲ್ಲಿದ್ದರೆ. ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರ ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಇವಾಂಕ ಟ್ರಂಪ್ 42ನೇ ಸ್ಥಾನ ಅಲಂಕರಿಸಿದ್ದಾರೆ. ನಿರ್ಮಲಾ ಸೀತಾರಾಮನ್ ಎಷ್ಟು ಶಕ್ತಿಶಾಲಿಯಾಗಿದ್ದಾರೆ ಎಂದರೆ ನ್ಯೂಜಿಲ್ಯಾಂಡ್ ಪ್ರಧಾನಿ ಜೆಸಿಂದ್ರಾ ಆರ್ಡನ್ ಕೂಡ ಶ್ರೇಯಾಂಕ ಪಟ್ಟಿಯಲ್ಲಿ ನಿರ್ಮಲಾ ಸೀತಾರಾಮನ್ ಅವರಿಗಿಂತ ಕೆಳಗಿನ ಸ್ಥಾನದಲ್ಲಿದಾರೆ.

ಕೇಂದ್ರ ವಿತ್ತ ಸಚಿವರ ಈ ಸ್ಥಾನ ಅಲಂಕರಣೆಯನ್ನು ತಜ್ಞರು ವಿಶ್ವದಲ್ಲಿ ಭಾರತದ ಕೀರ್ತಿಯ ಜೊತೆಗೂ ಸಹ ತುಲನೆ ಮಾಡಲಾರಂಭಿಸಿದ್ದಾರೆ. ಜಾಗತಿಕ ವ್ಯವಹಾರಗಳಲ್ಲಿ ಭಾರತದ ಪಕ್ಷ ಹಾಗೂ ಅಂತಾರಾಷ್ಟ್ರೀಯ ಶಕ್ತಿಯ ಜೊತೆಗೂ ಕೂಡ ಜೋಡಿಸಿ ಇದನ್ನು ಗಮನಿಸಲಾಗುತ್ತಿದೆ. ಆದರೆ, ದೇಶದ ಕೆಲ ಆಂತರಿಕ ವಿಷಯಗಳಲ್ಲಿ ನಿರ್ಮಲಾ ಸೀತಾರಾಮನ್ ಇನ್ನೂ ಕಿರಿಕಿರಿ ಎದುರಿಸುತ್ತಲೇ ಇದ್ದಾರೆ. ಉದಾಹರಣೆಗಾಗಿ ಕಳೆದ ಕೆಲ ತಿಂಗಳಿನಲ್ಲಿ ಜಿಡಿಪಿ ಕುಸಿತ ಹಾಗೂ ಅರ್ಥವ್ಯವಸ್ಥೆಯಲ್ಲಿನ ವೇಗ ಕುಸಿತದ ಕಾರಣ ಪ್ರತಿಪಕ್ಷಗಳು ಅವರನ್ನು ಸುತ್ತುವರೆಯುತ್ತಲೇ ಇದ್ದಾರೆ.

ನಿರ್ಮಲಾ ಸೀತಾರಾಮನ್ ಅವರನ್ನು ಹೊರತುಪಡಿಸಿ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಭಾರತೀಯ ಮಹಿಳೆಯರಲ್ಲಿ ರೋಶನಿ ನಾಡಾರ್ ಮಲ್ಹೊತ್ರಾ ಹಾಗೂ ಕಿರಣ್ ಮಜುಂದಾರ್ ಶಾ ಕೂಡ ಶಾಮೀಲಾಗಿದ್ದಾರೆ. ಈ ಪಟ್ಟಿಯಲ್ಲಿ ಅಂತಾರಾಷ್ಟ್ರೀಯ ಪಾಪ್ ಗಾಯಕಿ ಬ್ಯೊಂಸೆ ಹಾಗೂ ಟೇಲರ್ ಸ್ವಿಫ್ಟ್ ಕೂಡ ಸ್ಥಾನ ಪಡೆದಿದ್ದಾರೆ. ಖ್ಯಾತ ಟೆನ್ನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಹಾಗೂ ಪರಿಸರ ಹಕ್ಕುಗಳಿಗಾಗಿ ಇತ್ತೀಚೆಗಷ್ಟೇ ಚರ್ಚೆಗೆ ಬಂದಿರುವ ಗ್ರೇಟಾ ಥೂನ್ ಬರ್ಗ್ ಅವರಿಗೂ ಕೂಡ ಈ ಪಟ್ಟಿಯಲ್ಲಿ ಸ್ಥಾನ ಲಭಿಸಿದೆ.

Trending News