ಇಂದು ಇಡೀ ಪ್ರಪಂಚವು ಯೋಗವನ್ನು ಮಾಡುತ್ತಿದೆ, ಇದು ದೇಶದ ಹೆಮ್ಮೆ: ರಾಂಚಿಯಲ್ಲಿ ಪ್ರಧಾನಿ ಮೋದಿ

ಭಾರತ ಸೇರಿದಂತೆ ವಿಶ್ವದ ಅನೇಕ ಭಾಗಗಳಲ್ಲಿ ಇಂದು ಯೋಗ ದಿನವನ್ನು ಆಚರಿಸಲಾಗುತ್ತಿದೆ. ಮಹಾರಾಷ್ಟ್ರದ ನಾಂದೇಡ್ನಲ್ಲಿ ಬೆಳಿಗ್ಗೆ ಯೋಗುಗುರು ಬಾಬಾ ರಾಮದೇವ್ ಯೋಗ ಮಾಡಿದರು.

Last Updated : Jun 21, 2019, 07:25 AM IST
ಇಂದು ಇಡೀ ಪ್ರಪಂಚವು ಯೋಗವನ್ನು ಮಾಡುತ್ತಿದೆ, ಇದು ದೇಶದ ಹೆಮ್ಮೆ: ರಾಂಚಿಯಲ್ಲಿ ಪ್ರಧಾನಿ ಮೋದಿ title=
Pic Courtesy: ANI

ನವದೆಹಲಿ: ಎಲ್ಲೆಡೆ ಇಂದು ಐದನೇ ಅಂತರಾಷ್ಟ್ರೀಯ ಯೋಗದಿನವನ್ನು ಆಚರಿಸಲಾಗುತ್ತಿದೆ. ಇಂದು ಇಡೀ ಪ್ರಪಂಚವು ಯೋಗವನ್ನು ಮಾಡುತ್ತಿದೆ, ಇದು ಭಾರತಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 27, 2014 ರಂದು ಯೋಗ ದಿನವನ್ನು ಆಚರಿಸಲು ಕರೆ ನೀಡಿದ್ದರು. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಈ ಪ್ರಸ್ತಾಪವನ್ನು ಸ್ವೀಕರಿಸಿದ ಮೂರು ತಿಂಗಳಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಘೋಷಿಸಲಾಯಿತು. 

ಅದರ ನಂತರ, ವಿಶ್ವದಾದ್ಯಂತ 170 ದೇಶಗಳು ಜೂನ್ 21 ರಂದು ವಿಶ್ವ ಯೋಗ ದಿನವನ್ನು ಆಚರಿಸುತ್ತವೆ. ಐದನೇ ಅಂತರಾಷ್ಟ್ರೀಯ ಯೋಗ ದಿನದಂದು ರಾಂಚಿಯ ಪ್ರಭಾತ್ ತಾರಾ ಮೈದಾನದಲ್ಲಿ ಪ್ರಧಾನಿ ಮೋದಿ ಯೋಗದ ಭಂಗಿಯನ್ನು ಮಾಡುತ್ತಿದ್ದಾರೆ.

ರಾಂಚಿಯ ಪ್ರಭಾತ್ ತಾರಾ ಮೈದಾನದಲ್ಲಿ ಯೋಗದ ಭಂಗಿಗೆ ಮುಂಚಿತವಾಗಿ ಪ್ರಧಾನಿ ಮೋದಿ ಅಲ್ಲಿ ಹಾಜರಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದರು. "ಇಂದು ಇಡೀ ಪ್ರಪಂಚವು ಯೋಗವನ್ನು ಮಾಡುತ್ತಿದೆ, ಇದು ಭಾರತಕ್ಕೆ ಹೆಮ್ಮೆಯ ವಿಷಯ"ವಾಗಿದೆ ಎಂದು ಅವರು ಹೆಮ್ಮೆಯಿಂದ ನುಡಿದರು.

ರಾಂಚಿಯಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, 'ಯೋಗವನ್ನು ಬುಡಕಟ್ಟು ಜನರ ಜೀವನದ ಭಾಗವಾಗಿಸುವ ಗುರಿ ಹೊಂದಲಾಗಿದೆ'. ಯೋಗವು ಸಿರಿವಂತ-ಬಡತನ ಎಂಬ ಗಡಿ ಮೀರಿದ್ದು ಎಲ್ಲರೂ ಇದನ್ನು ಮಾಡಬಹುದು ಎಂದು ತಿಳಿಸಿದರು.
 

Trending News