ನವದೆಹಲಿ: ಶ್ರೀನಗರದಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬುಧವಾರದಂದು ಪಾಕ್ ಮೂಲದ ಉಗ್ರನನ್ನು ಬಂಧಿಸಿದ್ದಾರೆ. ಬಂಧಿತನಾಗಿರುವ ಉಗ್ರನು ಬಾರಾಮುಲ್ಲಾ ಜಿಲ್ಲೆಯಲ್ಲಿ ಭಯೋತ್ಪಾದನೆಯನ್ನು ಪುನರುಜ್ಜೀವನಗೊಳಿಸಲು ಯೋಜನೆ ರೂಪಿಸಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
SSP Baramulla, Abdul Qayoom: His name is Mohammad Waqar, a resident of Mohalla Miana, Mianwali, Punjab, Pakistan. He came here in July 2017 by crossing the border, he was operating in Srinagar for over a year. His plan was to resurrect militancy in Baramulla. pic.twitter.com/BWUEkdQj50
— ANI (@ANI) April 24, 2019
ಈ ವಿಚಾರವಾಗಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಪೊಲೀಸ್ ಅಧೀಕ್ಷಕ ಬಾರಾಮುಲ್ಲಾ ಅಬ್ದುಲ್ ಕ್ಯೂಮ್, ಹೇಳುವಂತೆ ಬಂಧಿಸಲ್ಪಟ್ಟಿರುವ ಉಗ್ರನನ್ನು ಮೊಹಮ್ಮದ್ ವಕಾರ್ ಎಂದು ಗುರುತಿಸಲಾಗಿದ್ದು, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮಿಯಾನ್ವಾಲಿಯ ಮೊಹಲ್ಲ ಮಿಯಾನಾ ನಿವಾಸಿ ಎಂದು ಹೇಳಲಾಗಿದೆ.ವಕ್ವಾರ್ ಜುಲೈ 2017 ರಲ್ಲಿ ಭಾರತದ ಗಡಿಯನ್ನು ಪ್ರವೇಶಿಸುವುದರ ಮೂಲಕ ಬಾರಾಮುಲ್ಲಾದಲ್ಲಿ ಉಗ್ರ ಕಾರ್ಯಾಚರಣೆಯನ್ನು ಪುನರುಜ್ಜೀವನಗೊಳಿಸುವ ಯೋಜನೆ ರೂಪಿಸಿದ್ದನು ಎನ್ನಲಾಗಿದೆ.
ಕಾಶ್ಮೀರದಲ್ಲಿ ಮುಸ್ಲಿಮರಿಗೆ ನಮಾಜ್ ನಡೆಸಲು ಅನುಮತಿ ನೀಡುವುದಿಲ್ಲ, ಇಲ್ಲಿನ ಮುಸ್ಲಿಂರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ತಿಳಿದು ಪಾಕ್ ಮೂಲದ ಉಗ್ರ ಸಂಘಟನೆ ಲಷ್ಕರ್-ಇ-ತೊಯ್ಬಾಗೆ ಸೇರ್ಪಡೆಯಾಗಿದ್ದನು ಎಂದು ತಿಳಿದುಬಂದಿದೆ. ಆ ಮೂಲಕ ಪಾಕ್ ತನ್ನ ದೇಶದಲ್ಲಿ ಉಗ್ರವಾದವನ್ನು ಪ್ರತಿಪಾದಿಸಲು ಯುವಕರನ್ನು ಯಾವ ರೀತಿಯಲ್ಲಿ ಬಳಸಿಕೊಳ್ಳಲಾಗುತ್ತದೆ ಎನ್ನುವುದಕ್ಕೆ ಈ ವ್ಯಕ್ತಿ ಉದಾಹರಣೆ ಎಂದು ಪೊಲೀಸರು ತಿಳಿಸಿದ್ದಾರೆ.