ಜಮ್ಮು-ಕಾಶ್ಮೀರದಲ್ಲಿ ಕಂದಕಕ್ಕೆ ಬಿದ್ದು ಮೇಜರ್ ಸಾವು; ಸೇನೆಯಿಂದ ಶ್ರದ್ಧಾಂಜಲಿ

ಚೀನಾದ ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಕೆ.ಜೆ. ಧಿಲ್ಲನ್ ಮತ್ತು ಎಲ್ಲಾ ಶ್ರೇಯಾಂಕದ ಸೈನಿಕರು ಮೇಜರ್ ಸಿಂಗ್ಗೆ ಬಾದಾಮಿಬಾಗ್ ಕಂಟೋನ್ಮೆಂಟ್ನಲ್ಲಿ ಗೌರವ ಸಲ್ಲಿಸಿದ್ದಾರೆ.

Last Updated : Apr 15, 2019, 03:05 PM IST
ಜಮ್ಮು-ಕಾಶ್ಮೀರದಲ್ಲಿ ಕಂದಕಕ್ಕೆ ಬಿದ್ದು ಮೇಜರ್ ಸಾವು; ಸೇನೆಯಿಂದ ಶ್ರದ್ಧಾಂಜಲಿ title=

ಶ್ರೀನಗರ: ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಕಂದಕಕ್ಕೆ ಬಿದ್ದು ಮೃತಪಟ್ಟ ಭಾರತೀಯ ಸೇನಾ ಪಡೆಯ ಮೇಜರ್ ವಿಕಾಸ್ ಸಿಂಗ್ ಅವರಿಗೆ ಭಾರತೀಯ ಸೇನೆ ಸೋಮವಾರ ಶ್ರದ್ಧಾಂಜಲಿ ಅರ್ಪಿಸಿದೆ. 

ಈ ಬಗ್ಗೆ ಮಾಹಿತಿ ನೀಡಿದ ಸೇನೆಯ ವಕ್ತಾರರು ಚೀನಾದ ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಕೆ.ಜೆ. ಧಿಲ್ಲನ್ ಮತ್ತು ಎಲ್ಲಾ ಶ್ರೇಯಾಂಕದ ಸೈನಿಕರು ಮೇಜರ್ ಸಿಂಗ್ಗೆ ಬಾದಾಮಿಬಾಗ್ ಕಂಟೋನ್ಮೆಂಟ್ನಲ್ಲಿ ಗೌರವ ಸಲ್ಲಿಸಿದ್ದಾರೆಂದು ಹೇಳಿದ್ದಾರೆ. "ಕುಪ್ವಾರಾ ಜಿಲ್ಲೆಯ ನಿಯಂತ್ರಣ ರೇಖೆಯ ಮ್ಯಾಚಿಲ್ ಸೆಕ್ಟರ್ ನಲ್ಲಿ ಏಪ್ರಿಲ್ 14 ರಂದು ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಕೆಚ್ಚೆದೆಯ ಅಧಿಕಾರಿ ತನ್ನ ಪ್ರಾಣ ತ್ಯಾಗ ಮಾಡಿದ್ದಾರೆ" ಎಂದು ತಿಳಿಸಿದ್ದಾರೆ.

ನಿಯಂತ್ರಣ ರೇಖೆಯ ಮೇಲೆ ಮ್ಯಾಚಿಲ್ ವಿಭಾಗದಲ್ಲಿನ ಗಸ್ತು ಸಂದರ್ಭದಲ್ಲಿ ಕಂದಕದಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಮೇಜರ್ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಇದರ ನಂತರ ಅವರು ಚಿಕಿತ್ಸೆಗಾಗಿ ಬಾದಾಮಿಬಾಗ್ ಕಂಟೋನ್ಮೆಂಟ್ನಲ್ಲಿರುವ ಸೇನೆಯ 92 ಬೇಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾರೆ.

ಉತ್ತರಪ್ರದೇಶದ ಗಾಜೀಪುರ ನಿವಾಸಿಯಾಗಿದ್ದ ವಿಕಾಸ್ ಸಿಂಗ್ ಅವರು 2010ರಲ್ಲಿ ಸೈನ್ಯಕ್ಕೆ ಸೇರ್ಪಡೆಯಾಗಿದ್ದರು. 

Trending News