ಕೌಶಂಬಿ: ಶಾಲೆಯಲ್ಲಿ ಕುಡಿಯಲು ನೀರು ಸಿಗದಿದ್ದಕ್ಕೆ ಆಕ್ರೋಶಗೊಂಡ ವಿದ್ಯಾರ್ಥಿಗಳು ಮಾಡಿದ್ದೇನು?

ಕೌಶಂಬಿಯ ಜವಾಹರ್ ನವೋದಯ ವಿದ್ಯಾಲಯದ ಮಕ್ಕಳು ಪದೇ ಪದೇ ದೂರು ನೀಡಿದ ನಂತರವೂ ಸಮಸ್ಯೆ ಬಗೆಹರಿಯದ ಕಾರಣ ಪ್ರತಿಭಟನೆಯ ಹಾದಿಯನ್ನು ಆರಿಸಿಕೊಂಡಿದ್ದಾರೆ.  

Updated: Aug 9, 2019 , 01:46 PM IST
ಕೌಶಂಬಿ: ಶಾಲೆಯಲ್ಲಿ ಕುಡಿಯಲು ನೀರು ಸಿಗದಿದ್ದಕ್ಕೆ ಆಕ್ರೋಶಗೊಂಡ ವಿದ್ಯಾರ್ಥಿಗಳು ಮಾಡಿದ್ದೇನು?

ಕೌಶಂಬಿ: ನೂರಾರು ಮಕ್ಕಳು ವಿದ್ಯಾಭ್ಯಾಸ ಮಾಡುವ ಶಾಲೆಯಲ್ಲಿ ಕುಡಿಯುವ ನೀರೇ ಸಿಗುತ್ತಿಲ್ಲ. ಈ ಬಗ್ಗೆ ಶಾಲಾ ಆಡಳಿತ ಮಂಡಳಿಗೆ ಎಷ್ಟು ಬಾರಿ ದೂರಿದರೂ ಯಾವುದೇ ಪ್ರಯೋಜವೂ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ಮಕ್ಕಳು, ಬೇರೆ ದಾರಿಯಿಲ್ಲದೆ ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ.

ಕೌಶಂಬಿಯ ತೇವಾದಲ್ಲಿರುವ ಜವಾಹರ್ ನವೋದಯ ಶಾಲೆಯ ಮಕ್ಕಳು ತಮ್ಮ ವಿದ್ಯಾಭ್ಯಾಸವನ್ನು ತೊರೆದು ಮುಷ್ಕರ ಆರಂಭಿಸಿದ್ದಾರೆ. ನೂರಾರು ಶಾಲಾ ಮಕ್ಕಳು ಕಾಲೇಜು ಕ್ಯಾಂಪಸ್‌ನಲ್ಲಿ ಬೀಗ ಹಾಕಿ ಗೇಟ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. 

ಶಾಲೆಯಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆಯಿಂದ ಬಳಲುತ್ತಿರುವುದಾಗಿ ತಿಳಿಸಿರುವ ವಿದ್ಯಾರ್ಥಿಗಳು, ಪದೇ ಪದೇ ದೂರು ನೀಡಿದ ನಂತರವೂ ಸಮಸ್ಯೆ ಬಗೆಹರಿಯುತ್ತಿಲ್ಲ. ಪ್ರಾಂಶುಪಾಲರ ಬಳಿ ಎಷ್ಟೇ ಬೇಡಿಕೆ ಇಟ್ಟರು ವಿದ್ಯಾರ್ಥಿಗಳ ಬೇಡಿಕೆಗೆ ಅವರು ಕಿವಿಗೊಡುತ್ತಿಲ್ಲ ಎಂದು ಆರೋಪಿಸಿರುವ ವಿದ್ಯಾರ್ಥಿಗಳು ಶಾಲಾ ಆಡಳಿತ ಮಂಡಳಿ ವಿರುದ್ಧ  ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

ಆದರೆ ಇದು ಪ್ರತಿಭಟನೆ ಮಾಡುವಷ್ಟು ದೊಡ್ಡ ವಿಷಯವಲ್ಲ, ಸಮಸ್ಯೆ ನಿವಾರಣೆಗೆ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದ ನಂತರವೂ ಮಕ್ಕಳು ಬೀಗ ಹಾಕಿ ಪ್ರತಿಭಟಿಸುತ್ತಿದ್ದಾರೆ ಎಂದು ಶಾಲೆಯ ಪ್ರಾಂಶುಪಾಲರು ಹೇಳುತ್ತಾರೆ. 

ವಿದ್ಯಾರ್ಥಿ ಅಜಯ್ ಪಾಲ್ ಅವರ ಪ್ರಕಾರ, ನಮ್ಮ ಶಾಲೆಯಲ್ಲಿ ನೀರು ದೊಡ್ಡ ಸಮಸ್ಯೆಯಾಗಿದೆ. ನಾವು ನೀರಿಲ್ಲದೆ ಅಧ್ಯಯನ ಮಾಡಲು ಸಾಧ್ಯವಿಲ್ಲ. ಸುಮಾರು ಒಂದು ತಿಂಗಳಿನಿಂದ ನೀರಿನ ಸಮಸ್ಯೆಯಿಂದ ಮಕ್ಕಳು ತೊಂದರೆಗೀಡಾಗಿದ್ದಾರೆ. ಈ ಎಲ್ಲಾ ಮಾಹಿತಿಯನ್ನು ಎಲ್ಲಾ ಶಿಕ್ಷಕರು ಮತ್ತು ಪ್ರಾಂಶುಪಾಲರಿಗೆ ಒಂದು ವಾರದ ಹಿಂದೆ ನೀಡಲಾಗಿದೆ. ಆದರೆ ಸಮಸ್ಯೆಯಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ. ಎಲ್ಲಾ ಟ್ಯಾಪ್, ಹ್ಯಾಂಡ್ ಪಂಪ್‌ಗಳು ಮತ್ತು ವಾಟರ್ ಕೂಲರ್‌ಗಳು ದೋಷಯುಕ್ತವಾಗಿವೆ. ಕುಡಿಯುವ ನೀರಿನ ತೀವ್ರ ಸಮಸ್ಯೆ ಇದೆ ಎನ್ನಲಾಗಿದೆ.

ತನ್ನ ಶಾಲೆಯಲ್ಲಿ ಹಲವು ಸಮಸ್ಯೆಗಳಿವೆ. ಪ್ರಾಂಶುಪಾಲರಿಗೆ ದೂರು ನೀಡಿದ ನಂತರವೂ ಸಮಸ್ಯೆಯನ್ನು ಪರಿಹರಿಸಲಾಗಲಿಲ್ಲ. ದೊಡ್ಡ ಸಮಸ್ಯೆ ಕುಡಿಯುವ ನೀರು. ಇದರಿಂದಾಗಿ ಓದುವ ಕಡೆಯೂ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆ ಬಗೆ ಹರಿಯುವವರೆಗೂ ನಾವು ನಮ್ಮ ಪ್ರತಿಭಟನೆ ಹಿಂತೆಗೆದುಕೊಳ್ಳುವುದಿಲ್ಲ ಎನ್ನುತ್ತಾರೆ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಅಂಕಿತಾ ಯಾದವ್.

ಅಂತರ್ಜಲ ಮಟ್ಟ ಕುಸಿಯುತ್ತಿರುವುದರಿಂದ ಈ ಸಮಸ್ಯೆ ಬಂದಿದೆ. ಮಕ್ಕಳ ಸಂಖ್ಯೆಯನ್ನು ಪರಿಗಣಿಸಿ, ಹೊರಗಿನ ಟ್ಯಾಂಕರ್‌ಗಳನ್ನು ಜೋಡಿಸುವ ಮೂಲಕ ಕುಡಿಯುವ ನೀರನ್ನು ತಯಾರಿಸಲಾಗಿದೆ. ಇದರ ನಂತರವೂ ಮಕ್ಕಳನ್ನು ಗದ್ದಲದಿಂದ ಶಾಲೆಗೆ ಬೀಗ ಹಾಕಿದ್ದಾರೆ. ಈ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಜಿಲ್ಲಾಧಿಕಾರಿಗೆ ತಿಳಿಸಲಾಗಿದೆ ಎಂದು ಪ್ರಾಂಶುಪಾಲ ವಿನೋದ್ ಕುಮಾರ್ ಶ್ರೀವಾಸ್ತವ ಹೇಳಿದ್ದಾರೆ.