ಈ ರಾಜ್ಯದಲ್ಲಿ ಸುಮಾರು 13,000 ಕೋಟಿ ರೂ. ವಿದ್ಯುತ್ ಬಿಲ್ ಬಾಕಿ!

ಉತ್ತರ ಪ್ರದೇಶದ ಸರ್ಕಾರಿ ಇಲಾಖೆಗಳು ಮತ್ತು ಅಧಿಕಾರಿಗಳ ನಿವಾಸಗಳಿಂದ ಈವರೆಗೂ ಸುಮಾರು 13,000 ಕೋಟಿ ರೂ. ವಿದ್ಯುತ್ ಬಿಲ್ ಪಾವತಿಯಾಗದೆ ಉಳಿದಿದೆ ಎನ್ನಲಾಗಿದೆ.

Updated: Oct 29, 2019 , 07:27 PM IST
ಈ ರಾಜ್ಯದಲ್ಲಿ ಸುಮಾರು 13,000 ಕೋಟಿ ರೂ. ವಿದ್ಯುತ್ ಬಿಲ್ ಬಾಕಿ!
ಸಾಂಕೇತಿಕ ಚಿತ್ರ

ಲಕ್ನೋ: ರಾಜ್ಯದಲ್ಲಿ ರಾಜಕೀಯ ನಾಯಕರುಗಳು ಹಾಗೂ ಸರ್ಕಾರಿ ಅಧಿಕಾರಿಗಳು ಸರಿಯಾಗಿ ವಿದ್ಯುತ್ ಬಿಲ್ ಭರ್ತಿ ಮಾಡುತ್ತಿಲ್ಲ ಎಂದು ಉತ್ತರ ಪ್ರದೇಶ ಸರ್ಕಾರದ ಇಂಧನ ಮತ್ತು ಹೆಚ್ಚುವರಿ ಇಂಧನ ಮೂಲ ಸಚಿವ ಶ್ರೀಕಾಂತ್ ಶರ್ಮಾ ಹೇಳಿದ್ದಾರೆ.

ಇದನ್ನು ಗಮನದಲ್ಲಿಟ್ಟುಕೊಂಡು ನಾಯಕರು ಮತ್ತು ಅಧಿಕಾರಿಗಳ ಅಧಿಕೃತ ನಿವಾಸದಲ್ಲಿ ಪ್ರಿಪೇಯ್ಡ್ ಮೀಟರ್ ಅಳವಡಿಸಲು ನಿರ್ಧರಿಸಲಾಗಿದೆ. ಒಂದು ಲಕ್ಷ ಪ್ರಿಪೇಯ್ಡ್ ಮೀಟರ್‌ಗೆ ಆದೇಶ ನೀಡಲಾಗಿದೆ ಸಚಿವ ಶ್ರೀಕಾಂತ್ ಶರ್ಮಾ ತಿಳಿಸಿದ್ದಾರೆ. ಈ ಮೀಟರ್‌ಗಳು ಬರುತ್ತಿದ್ದಂತೆ ಅವುಗಳನ್ನು ಸರ್ಕಾರಿ ಅಧಿಕಾರಿಗಳ ಮನೆಗಳಲ್ಲಿ ಅಳವಡಿಸಲಾಗುವುದು. ಎಲ್ಲರಿಗೂ ತಮ್ಮ ನಿವಾಸದಲ್ಲಿ ಪ್ರಿಪೇಯ್ಡ್ ಮೀಟರ್ ಅಳವಡಿಸಲು ಮನವಿ ಮಾಡಲಾಗುವುದು ಎಂದು ಅವರು ಹೇಳಿದರು.

ಉತ್ತರ ಪ್ರದೇಶದ ಸರ್ಕಾರಿ ಇಲಾಖೆಗಳು ಮತ್ತು ಅಧಿಕಾರಿಗಳ ನಿವಾಸಗಳಿಂದ ಈವರೆಗೂ ಸುಮಾರು 13,000 ಕೋಟಿ ರೂ. ವಿದ್ಯುತ್ ಬಿಲ್ ಪಾವತಿಯಾಗದೆ ಉಳಿದಿದೆ. ರಾಜ್ಯ ಸರ್ಕಾರವು ಕಂತುಗಳಲ್ಲಿ ಪಾವತಿಸುವ ಆಯ್ಕೆಯನ್ನು ನೀಡಿದೆ. ಅಲ್ಲದೆ, ಉತ್ತರ ಪ್ರದೇಶದಲ್ಲಿ ವಿದ್ಯುತ್ ಕಳ್ಳತನವನ್ನು ತಡೆಗಟ್ಟಲು, ಎಲ್ಲಾ ಐದು ಡಿಸ್ಕೋಮ್‌ಗಳ ಅಡಿಯಲ್ಲಿ 75 ಪೊಲೀಸ್ ಠಾಣೆಗಳನ್ನು ತೆರೆಯಲಾಗುತ್ತಿದೆ. ಇದಕ್ಕಾಗಿ ಸರ್ಕಾರ 2,050 ಹುದ್ದೆಗಳನ್ನು ರಚಿಸಿದೆ. ಈವರೆಗೆ 68 ಪೊಲೀಸ್ ಠಾಣೆಗಳನ್ನು ತೆರೆಯಲಾಗಿದೆ. ಅವುಗಳಲ್ಲಿ ಪೋಸ್ಟ್ ಮಾಡಲಾದ ಪೊಲೀಸರಿಗೆ ಸಂಬಳ ಮತ್ತು ಇತರ ಖರ್ಚಿನ ಹೊಣೆಯನ್ನು ವಿದ್ಯುತ್ ನಿಗಮವು ಭರಿಸಲಿದೆ. ಈ ಪೊಲೀಸ್ ಠಾಣೆಗಳಿಗೆ 75 ಇನ್ಸ್‌ಪೆಕ್ಟರ್‌ಗಳು, 375 ಸಬ್ ಇನ್ಸ್‌ಪೆಕ್ಟರ್‌ಗಳು, 675 ಚೀಫ್ ಕಾನ್‌ಸ್ಟೆಬಲ್‌ಗಳು, 150 ಚೀಫ್ ಕಾನ್‌ಸ್ಟೆಬಲ್ ಕನ್ಸೋಲ್ ಆಪರೇಟರ್‌ಗಳು ಮತ್ತು 675 ಸೈನಿಕರ ಹುದ್ದೆಗಳನ್ನು ಮಂಜೂರು ಮಾಡಲಾಗಿದೆ. ಈ ಪೊಲೀಸ್ ಠಾಣೆಗಳಲ್ಲಿ ಪೋಲಿಸ್ ಮತ್ತು ಇತರ ನೌಕರರ ಕೆಲಸವು ಜಿಲ್ಲೆಯ ಪ್ರತಿಯೊಂದು ಪ್ರದೇಶದಲ್ಲೂ ವಿದ್ಯುತ್ ಕಳ್ಳತನ ತಪ್ಪಿಸುವುದು ಎಂದು ಅವರು ತಿಳಿಸಿದರು.