close

News WrapGet Handpicked Stories from our editors directly to your mailbox

ಜಮ್ಮು-ಕಾಶ್ಮೀರ: ಸೊಪೋರ್‌ನಲ್ಲಿ ಓರ್ವ ಎಲ್ಇಟಿ ಉಗ್ರನನ್ನು ಹೊಡೆದುರುಳಿಸಿದ ಸೇನೆ

 ಜಮ್ಮು ಮತ್ತು ಕಾಶ್ಮೀರದ ಸೊಪೋರ್‌ನಲ್ಲಿ ಬುಧವಾರ ಬೆಳಿಗ್ಗೆ ನಡೆದ ಎನ್‌ಕೌಂಟರ್‌ನಲ್ಲಿ ಲಷ್ಕರ್-ಎ-ತೊಯ್ಬಾ ಉಗ್ರನನ್ನು ಭಾರತಿಯ ಸೇನೆ ಹೊಡೆದುರುಳಿಸಿದೆ.

Updated: Sep 11, 2019 , 10:56 AM IST
ಜಮ್ಮು-ಕಾಶ್ಮೀರ: ಸೊಪೋರ್‌ನಲ್ಲಿ ಓರ್ವ ಎಲ್ಇಟಿ ಉಗ್ರನನ್ನು ಹೊಡೆದುರುಳಿಸಿದ ಸೇನೆ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಸೊಪೋರ್‌ನಲ್ಲಿ ಬುಧವಾರ ಬೆಳಿಗ್ಗೆ ನಡೆದ ಎನ್‌ಕೌಂಟರ್‌ನಲ್ಲಿ ಲಷ್ಕರ್-ಎ-ತೊಯ್ಬಾ ಉಗ್ರನನ್ನು ಭಾರತಿಯ ಸೇನೆ ಹೊಡೆದುರುಳಿಸಿದೆ.

ಮೃತ ಉಗ್ರನನ್ನು LeTಯ ಆಸಿಫ್ ಎಂದು ಗುರುತಿಸಲಾಗಿದ್ದು, ಸೊಪೋರ್‌ನಲ್ಲಿ ಹಣ್ಣಿನ ವ್ಯಾಪಾರಿಯೊಬ್ಬರ ಕುಟುಂಬದ ಮೂವರು ಸದಸ್ಯರ ಮೇಲೆ ಇತ್ತೀಚೆಗೆ ನಡೆದ ಗುಂಡಿನ ಚಕಮಕಿಯಲ್ಲಿ ಆತ ಭಾಗಿಯಾಗಿದ್ದ ಎಂದು ಶಂಕಿಸಲಾಗಿದೆ. ಗಾಯಗೊಂಡವರಲ್ಲಿ ಅಸ್ಮಾ ಜನ್ ಎಂಬ ಯುವತಿಯೂ ಸೇರಿದ್ದಾಳೆ.

ಸೊಪೋರ್‌ನ ವಲಸೆ ಕಾರ್ಮಿಕ ಶಫಿ ಆಲಂ ಮೇಲೆ ಗುಂಡು ಹಾರಿಸಲು ಆಸಿಫ್ ಸಹ ಕಾರಣ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.