ಭಾರತ ರತ್ನದಂತೆ, ಪಾಕಿಸ್ತಾನದ ದೊಡ್ಡ ಗೌರವ ಯಾವುದು ಗೊತ್ತಾ? ಪಡೆದವರಲ್ಲಿ ಭಾರತೀಯರೂ ಸೇರಿದ್ದಾರೆ!

Pakistan greatest honor: ನಮ್ಮ ದೇಶದ ದೊಡ್ಡ ಪ್ರಶಸ್ತಿ ಭಾರತ ರತ್ನ, ಆದರೆ ನೆರೆಯ ದೇಶದಲ್ಲಿ ನೀಡುವ ದೊಡ್ಡ ಗೌರವ ಯಾವುದು ಗೊತ್ತಾ? ಇಲ್ಲವಾದರೆ ಇದೀಗ ತಿಳಿದುಕೊಳ್ಳೋಣ ಬನ್ನಿ..

Written by - Savita M B | Last Updated : Feb 10, 2024, 08:59 AM IST
  • ಭಾರತದಲ್ಲಿ, ದೇಶಕ್ಕಾಗಿ ಮಹತ್ತರವಾದ ಕೆಲಸ ಮಾಡಿದ ಜನರಿಗೆ ಅತ್ಯುನ್ನತ ಗೌರವವನ್ನು ನೀಡಲಾಗುತ್ತದೆ
  • ಯಾವ ಜನರಿಗೆ ಪಾಕಿಸ್ತಾನದ ದೊಡ್ಡ ಗೌರವವನ್ನು ನೀಡಲಾಗುತ್ತದೆ?
  • ಕೆಲವು ಭಾರತೀಯರು ಪಾಕಿಸ್ತಾನದ ಈ ಅತ್ಯುನ್ನತ ಗೌರವವನ್ನು
ಭಾರತ ರತ್ನದಂತೆ, ಪಾಕಿಸ್ತಾನದ ದೊಡ್ಡ ಗೌರವ ಯಾವುದು ಗೊತ್ತಾ? ಪಡೆದವರಲ್ಲಿ ಭಾರತೀಯರೂ ಸೇರಿದ್ದಾರೆ! title=

Nishan-e-pakistan: ಇತ್ತೀಚೆಗೆ ಭಾರತದಲ್ಲಿ, ಲಾಲ್ ಕೃಷ್ಣ ಅಡ್ವಾಣಿ ನಂತರ, ಸ್ವಾಮಿನಾಥನ್, ಚೌಧರಿ ಚರಣ್ ಸಿಂಗ್ ಮತ್ತು ನರಸಿಂಹ ರಾವ್ ಅವರಿಗೂ ಭಾರತ ರತ್ನ ಗೌರವವನ್ನು ಘೋಷಿಸಲಾಗಿದೆ. ಈ ಪ್ರಶಸ್ತಿ ಪಡೆದ ವ್ಯಕ್ತಿ ದೇಶದ ಹಿತದೃಷ್ಟಿಯಿಂದ ತನ್ನ ಜೀವನದಲ್ಲಿ ಅತ್ಯುನ್ನತ ಕೆಲಸ ಮಾಡಿದ್ದಾರೆ.. ಇದೇ ರೀತಿ ಪಾಕಿಸ್ತಾನದ ದೊಡ್ಡ ಗೌರವ ಯಾವುದು ಗೊತ್ತಾ? ವಾಸ್ತವವಾಗಿ, ಪಾಕಿಸ್ತಾನದ ದೊಡ್ಡ ಗೌರವವೆಂದರೆ ನಿಶಾನ್-ಎ-ಪಾಕಿಸ್ತಾನ.

ಯಾವ ಜನರಿಗೆ ಪಾಕಿಸ್ತಾನದ ದೊಡ್ಡ ಗೌರವವನ್ನು ನೀಡಲಾಗುತ್ತದೆ?
ಭಾರತದಲ್ಲಿ, ದೇಶಕ್ಕಾಗಿ ಮಹತ್ತರವಾದ ಕೆಲಸ ಮಾಡಿದ ಜನರಿಗೆ ಅತ್ಯುನ್ನತ ಗೌರವವನ್ನು ನೀಡಲಾಗುತ್ತದೆ, ಆದರೆ ಪಾಕಿಸ್ತಾನದಲ್ಲಿ, ಅತ್ಯುನ್ನತ ಸೇವೆ ಸಲ್ಲಿಸಿದ ಜನರಿಗೆ ನಿಶಾನ್-ಎ-ಪಾಕಿಸ್ತಾನವನ್ನು ನೀಡಲಾಗುತ್ತದೆ.. ಈ ಗೌರವವನ್ನು ಪಾಕಿಸ್ತಾನಿಗಳಿಗೆ ಮಾತ್ರವಲ್ಲದೆ ಹೊರಗಿನ ನಾಗರಿಕರಿಗೂ ನೀಡಲಾಗುತ್ತಿದ್ದು... ಕೆಲವು ಭಾರತೀಯರು ಪಾಕಿಸ್ತಾನದ ಈ ಅತ್ಯುನ್ನತ ಗೌರವವನ್ನು ಪಡೆದುಕೊಂಡಿದ್ದಾರೆ.. 

ಇದನ್ನೂ ಓದಿ-ಪಲ್ಸ್ ಪೋಲಿಯೋಗೆ ಸಂಬಂಧಿಸಿದಂತೆ ಪೂರ್ವ ವಲಯದಲ್ಲಿ ಸಭೆ: ಧ್ವನಿವರ್ಧಕಗಳ ಮೂಲಕ ಜಾಗೃತಿ

ಎಷ್ಟು ಭಾರತೀಯರು ನಿಶಾನ್-ಎ-ಪಾಕಿಸ್ತಾನವನ್ನು ಪಡೆದಿದ್ದಾರೆ?
ಇದುವರೆಗೆ 4 ಭಾರತೀಯರಿಗೆ ಪಾಕಿಸ್ತಾನದ ಅತ್ಯುನ್ನತ ಗೌರವವನ್ನು ನೀಡಲಾಗಿದೆ. ಇದರಲ್ಲಿ ಮೊದಲ ಹೆಸರು ಭಾರತೀಯ ಪರ್ಸರ್ ನೀರಜಾ ಭಾನೋಟ್. 1987 ರಲ್ಲಿ ನೀರಜಾ ಅವರಿಗೆ ಈ ಗೌರವವನ್ನು ನೀಡಲಾಯಿತು ಮತ್ತು ಈ ಗೌರವವನ್ನು ಪಡೆದ ಮೊದಲ ಭಾರತೀಯರಾಗಿದ್ದಾರೆ.

1990 ರಲ್ಲಿ, ಭಾರತದ ನಾಲ್ಕನೇ ಪ್ರಧಾನ ಮಂತ್ರಿ ಮೊರಾರ್ಜಿ ದೇಸಾಯಿ ಅವರನ್ನು ನಿಶಾನ್-ಎ-ಪಾಕಿಸ್ತಾನದಿಂದ ಗೌರವಿಸಲಾಯಿತು. ಭಾರತದ ಅತ್ಯುನ್ನತ ಗೌರವವಾದ ಭಾರತ ರತ್ನ ಮತ್ತು ಪಾಕಿಸ್ತಾನದ ಅತ್ಯುನ್ನತ ಗೌರವವಾದ ನಿಶಾನ್-ಎ-ಪಾಕಿಸ್ತಾನ ಎರಡನ್ನೂ ಪಡೆದ ಮೊದಲ ವ್ಯಕ್ತಿ.

ಇದನ್ನೂ ಓದಿ-ರೈತರ ಕಣ್ಮಣಿಯಾಗಿದ್ದ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ 

ಆಗಸ್ಟ್ 14, 2020 ರಂದು, ಈ ಗೌರವವನ್ನು ಮತ್ತೊಮ್ಮೆ ಭಾರತೀಯ ಮತ್ತು ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿಗೆ ನೀಡಲಾಯಿತು. 

ಡಿಸೆಂಬರ್ 5, 2023 ರಂದು, ದಾವೂದಿ ಬೋಹ್ರಾ ಸಮುದಾಯದ ನಾಯಕ ಮುಫದ್ದಲ್ ಸೈಫುದ್ದೀನ್ ಅವರಿಗೂ ನಿಶಾನ್-ಎ-ಪಾಕಿಸ್ತಾನ್ ಗೌರವವನ್ನು ನೀಡಲಾಯಿತು. ಈ ಮೂಲಕ ಇಲ್ಲಿಯವರೆಗೆ 4 ಭಾರತೀಯರು ಪಾಕಿಸ್ತಾನದ ಅತ್ಯುನ್ನತ ಗೌರವವನ್ನು ಪಡೆದಿದ್ದಾರೆ.    

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News