ಹತ್ರಾಸ್-ಮಿರ್ಜಾಪುರ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ ಎಸ್​ಪಿ

ಸಮಾಜವಾದಿ ಪಕ್ಷ(ಎಸ್​ಪಿ) ಹತ್ರಾಸ್ ಲೋಕಸಭಾ ಕ್ಷೇತ್ರದಿಂದ ರಾಮ್ಜಿ ಲಾಲ್ ಸುಮನ್ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಇದೇ ವೇಳೆ ಮಿರ್ಜಾಪುರ ಲೋಕಸಭಾ ಕ್ಷೇತ್ರದಿಂದ  ರಾಜೇಂದ್ರ ಎಸ್.ವಿಂಡ್ ಅವರಿಗೆ ಟಿಕೆಟ್ ನೀಡಿದೆ.

Last Updated : Mar 13, 2019, 01:29 PM IST
ಹತ್ರಾಸ್-ಮಿರ್ಜಾಪುರ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ ಎಸ್​ಪಿ title=

ಲಕ್ನೋ: ಲೋಕಸಭಾ ಚುನಾವಣೆಗಾಗಿ ಸಮಾಜವಾದಿ ಪಕ್ಷ(ಎಸ್​ಪಿ) ಹತ್ರಾಸ್ ಮತ್ತು ಮಿರ್ಜಾಪುರ ಲೋಕಸಭಾ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. 

ಸಮಾಜವಾದಿ ಪಕ್ಷ(ಎಸ್​ಪಿ) ತನ್ನ ಟ್ವಿಟ್ಟರ್ ಹ್ಯಾಂಡಲ್ ಮೂಲಕ ತನ್ನ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ್ದು, ಮಿಸಲಾತಿ ಕ್ಷೇತ್ರವಾದ ಹತ್ರಾಸ್ ಲೋಕಸಭಾ ಕ್ಷೇತ್ರದಿಂದ ರಾಮ್ಜಿ ಲಾಲ್ ಸುಮನ್ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಇದೇ ವೇಳೆ ಮಿರ್ಜಾಪುರ ಲೋಕಸಭಾ ಕ್ಷೇತ್ರದಿಂದ  ರಾಜೇಂದ್ರ ಎಸ್.ವಿಂಡ್ ಅವರಿಗೆ ಟಿಕೆಟ್ ನೀಡಿದೆ.

ಎಸ್​ಪಿ ಈವರೆಗೂ 11 ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ಮೊದಲಿಗೆ ಮೂರು ಲೋಕಸಭಾ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ್ ಎಸ್​ಪಿ ಆ ಪಟ್ಟಿಯಲ್ಲಿ ಅಖಿಲೇಶ್ ಪತ್ನಿ ಡಿಂಪಲ್ ಯಾದವ್ ಹೆಸರನ್ನು ಕೂಡಾ ಸೇರಿಸಿದೆ. ನಂತರದಲ್ಲಿ  6 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು, ಅದರಲ್ಲಿ ಪಕ್ಷದ ಪೋಷಕರಾದ ಮುಲಾಯಂ ಸಿಂಗ್ ಯಾದವ್ ಹೆಸರನ್ನು ಘೋಷಿಸಲಾಗಿದೆ.

ಕನೌಜ್ ಕ್ಷೇತ್ರದಿಂದ ಡಿಂಪಲ್ ಯಾದವ್ ಮತ್ತು ಮೇನ್ಪುರಿ ಕ್ಷೇತ್ರದಿಂದ ಮುಲಾಯಂ ಸಿಂಗ್ ಯಾದವ್ ಹೆಸರನ್ನು ಘೋಷಿಸಲಾಗಿದ್ದು, ಎಸ್​ಪಿ ರಾಷ್ಟ್ರೀಯ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅಜಗಢ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. 

Trending News