ನವದೆಹಲಿ: ಧಾರವಾಡದಲ್ಲಿ ಜನಿಸಿದ ಮಾಧುರಿ ಕಾನಿಟ್ಕರ್ ಈಗ ಲೆಫ್ಟಿನೆಂಟ್ ಹುದ್ದೆಗೆ ಬಡ್ತಿ ಪಡೆದಿದ್ದಾರೆ. ಆ ಮೂಲಕ ಈ ತ್ರಿಸ್ಟಾರ್ ರ್ಯಾಂಕ್ ಪಡೆದ ದೇಶದ ಮೂರನೇ ಮಹಿಳೆಯಾಗಿ ಹೊರಹೊಮ್ಮಿದ್ದಾರೆ.
ಇದಕ್ಕೂ ಮೊದಲು ಲೆಫ್ಟಿನೆಂಟ್ ಜನರಲ್ ಪುನಿತಾ ಅರೋರಾ ಮತ್ತು ಏರ್ ಮಾರ್ಷಲ್ ಪದ್ಮ ಬಂದೋಪಾಧ್ಯಾಯ ಅವರು ತ್ರಿಸ್ಟಾರ್ ರ್ಯಾಂಕ್ ನ್ನು ಹೊಂದಿದ್ದರು.ಅವರ ಪತಿ, ಲೆಫ್ಟಿನೆಂಟ್ ಜನರಲ್ ರಾಜೀವ್ ಕಾನಿಟ್ಕರ್ ಅವರು ನಿವೃತ್ತ ಜನರಲ್ ಆಫೀಸರ್ ಮತ್ತು ಕೊನೆಯ ಬಾರಿಗೆ ಭಾರತೀಯ ಸೇನೆಯ ಕ್ವಾರ್ಟರ್ ಮಾಸ್ಟರ್ ಜನರಲ್ ಆಗಿ ಸೇವೆ ಸಲ್ಲಿಸಿದ್ದಾರೆ. ಅವರು ಭಾರತೀಯ ಸಶಸ್ತ್ರ ಪಡೆಗಳಲ್ಲಿ ತ್ರೀ-ಸ್ಟಾರ್ ರ್ಯಾಂಕ್ ಪಡೆದ ಮೊದಲ ದಂಪತಿಗಳಾಗಿದ್ದಾರೆ.
Thank You @JoshiPralhad https://t.co/DZclw5Liht
— DR.Madhuri Kanitkar (@MadhuriKanitkar) August 26, 2020
ಮಾಧುರಿ ಕಾನಿಟ್ಕರ್1960 ರಲ್ಲಿ ಧಾರವಾಡ ಮೂರು ಹೆಣ್ಣುಮಕ್ಕಳೊಂದಿಗೆ ಮರಾಠಿ ಕುಟುಂಬದಲ್ಲಿ ಜನಿಸಿದರು. ಅವರ ಅಜ್ಜಿ ಮತ್ತು ಅಜ್ಜ ಇಬ್ಬರೂ ವೈದ್ಯರಾಗಿದ್ದರು. ಅವರು 1978 ರಲ್ಲಿ ಪುಣೆಯ ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜಿಗೆ ಸೇರಿದರು. ಪುಣೆ ವಿಶ್ವವಿದ್ಯಾಲಯದಲ್ಲಿ ತನ್ನ ಎಂಬಿಬಿಎಸ್‌ನ ಎಲ್ಲಾ ಮೂರು ಹಂತಗಳಲ್ಲಿ ಪ್ರಥಮ ಸ್ಥಾನ ಪಡೆದರು. ಪಠ್ಯೇತರ ಚಟುವಟಿಕೆಗಳಲ್ಲಿ ಪದವೀಧರ ವಿಭಾಗದಲ್ಲಿ ಅವರರು ರಾಷ್ಟ್ರಪತಿಗಳ ಚಿನ್ನದ ಪದಕವನ್ನು ಪಡೆದಿದ್ದಾರೆ.
ಜನರಲ್ ಕನಿತ್ಕರ್ ಅವರಿಗೆ ಜಿಒಸಿ-ಇನ್-ಸಿ ಮೆಚ್ಚುಗೆಯ ಕಾರ್ಡ್ ನೀಡಲಾಗಿದೆ ಮತ್ತು ಐದು ಬಾರಿ ಸೇನಾ ಸಿಬ್ಬಂದಿ ಮೆಚ್ಚುಗೆಯ ಕಾರ್ಡ್ ನೀಡಲಾಗಿದೆ. ಅವರಿಗೆ 2014 ರಲ್ಲಿ ವಿಶಿಷ್ಠ ಸೇವಾ ಪದಕ ಮತ್ತು 2018 ರಲ್ಲಿ ಅತಿ ವಿಶಿಷ್ಟ ಸೇವಾ ಪದಕವನ್ನು ಸಹ ನೀಡಲಾಯಿತು.